ಮಗನ ಭವಿಷ್ಯಕ್ಕೆ ನಾನೇ ಮಣ್ಣು ಹಾಕಿದೆ: ಜಗ್ಗೇಶ್ ಬೇಸರ

ನಟ ಜಗ್ಗೇಶ್ ಪುತ್ರ ಗುರುರಾಜ್ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡರಾದರೂ ಹೆಚ್ಚಿನ ಯಶಸ್ಸು ಅವರಿಗೆ ಸಿಗಲಿಲ್ಲ. ಚಿತ್ರರಂಗದಿಂದ ಬಿಡುವು ಪಡೆದಿದ್ದ ಗುರುರಾಜ್ ಇದೀಗ ಹೊಸದೊಂದು ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಸಿನಿಮಾದ ಟ್ರೇಲರ್ ಇಂದು (ಸೆಪ್ಟೆಂಬರ್ 28) ಬಿಡುಗಡೆ ಆಗಿದೆ.

ತಮ್ಮ ಜೇಷ್ಠ ಪುತ್ರ ಗುರುರಾಜ್ ನಟಿಸಿರುವ 'ಕಾಗೆಮೊಟ್ಟೆ' ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಗ್ಗೇಶ್, ಮಗನ ವಿಷಯದಲ್ಲಿ ತಾವು ಮಾಡಿದ ಅತಿ ದೊಡ್ಡ ತಪ್ಪೊಂದರ ಬಗ್ಗೆ ನಟ ಜಗ್ಗೇಶ್ ಮಾತನಾಡಿದರು.

''ಗುರುಗೆ ಬೇರೆ ಭಾಷೆಗಳಿಂದ ಒಳ್ಳೆಯ ಸಿನಿಮಾ ಆಫರ್‌ಗಳು ಬಂದಿದ್ದವು ಆದರೆ ನಾನು ಅವನು ಹೋಗದಂತೆ ತಡೆದೆ. ನಾನು ಹಾಗೆ ಮಾಡಬಾರದಿತ್ತು ಎಂದು ಈಗ ಅನ್ನಿಸುತ್ತಿದೆ. ನಾನು ತಡೆಯದೇ ಇದ್ದಿದ್ದರೆ ಅವನು ತಮಿಳು, ತೆಲುಗಿನಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದ್ದ. ಆದರೆ ಆ ಅವಕಾಶಗಳಿಗೆಲ್ಲ ನಾನೇ ಮಣ್ಣು ಎರಚಿದೆ. ನನ್ನ ಜೀವನದ ಬಹಳ ದೊಡ್ಡ ತಪ್ಪು ಎಂದರೆ ಅದೇ'' ಎಂದು ಬೇಸರ ವ್ಯಕ್ತಪಡಿಸಿದರು ಜಗ್ಗೇಶ್.

''ಪರಭಾಷೆಗಳಿಂದ ದೊಡ್ಡ ಅವಕಾಶಗಳು ಬಂದಿದ್ದವು''

''ಪರಭಾಷೆಗಳಿಂದ ದೊಡ್ಡ ಅವಕಾಶಗಳು ಬಂದಿದ್ದವು''

'ಬಹಳ ದೊಡ್ಡ-ದೊಡ್ಡ ಬ್ಯಾನರ್‌ಗಳು, ನಿರ್ದೇಶಕರು ಅವನನ್ನು ನಟಿಸುವಂತೆ ಕೋರಿಕೊಂಡರು ಆದರೆ ನಾನು ಕಳಿಸಲಿಲ್ಲ. ಏನೇ ಆದರು ಇಲ್ಲೆ ಮಾಡೋಣ, ಇಲ್ಲೇ ತಿನ್ನೋಣ ಎಂದೆ. ನನಗೆ ಆ ಸಮಯದಲ್ಲಿ ಯಾಕೆ ಆ ಕೆಟ್ಟ ಬುದ್ಧಿ ಬಂತೊ ಗೊತ್ತಿಲ್ಲ. ನಾನೇ ಅವನ ಭವಿಷ್ಯಕ್ಕೆ ಮಣ್ಣು ಹಾಕಿದೆ. ಗುರು ಮನಸ್ಸಿನಲ್ಲಿ ಆ ಬಗ್ಗೆ ಬೇಸರ ಇರಬಹುದೇನೋ'' ಎಂದರು ಜಗ್ಗೇಶ್.

ಗುರುರಾಜ್ ಬಹಳ ಒಳ್ಳೆಯ ನಟ: ಜಗ್ಗೇಶ್

ಗುರುರಾಜ್ ಬಹಳ ಒಳ್ಳೆಯ ನಟ: ಜಗ್ಗೇಶ್

ಮಗ ಗುರುರಾಜ್‌ನ ಅಭಿನಯ ಪ್ರತಿಭೆ ಬಗ್ಗೆ ಮಾತನಾಡಿದ ಜಗ್ಗೇಶ್, ''ಅವನೊಬ್ಬ ಬಹಳ ಒಳ್ಳೆಯ ನಟ. ಅವನಿಗೆ ನಟನೆಯ ಯೂನಿವರ್ಸಿಟಿ ಎಂದರೆ ನಾನೇ. ನನ್ನ ಸಿನಿಮಾಗಳನ್ನು ಬಹಳ ಸಣ್ಣ ವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದಾನೆ. ನನ್ನ ಜೋತೆ ನೂರಾರು ಸಿನಿಮಾಗಳ ಶೂಟಿಂಗ್‌ಗೆ ಬಂದಿದ್ದಾನೆ. ಮೇಕಪ್ ಹಾಕಿದ ಮೇಲೆ ನಾನು ಪಾತ್ರವಾಗಿ ಬದಲಾಗುವುದನ್ನು ಗಮನಿಸಿದ್ದಾನೆ, ಚೆನ್ನಾಗಿ ಕಲಿತಿದ್ದಾನೆ'' ಎಂದರು ನಟ ಜಗ್ಗೇಶ್.

ಮಗ ನನಗೆ ಹುರಿದುಂಬಿಸಿದ: ಜಗ್ಗೇಶ್

ಮಗ ನನಗೆ ಹುರಿದುಂಬಿಸಿದ: ಜಗ್ಗೇಶ್

''ಕೊರೊನಾ ಲಾಕ್‌ಡೌನ್ ಕಾಲದಲ್ಲಿ ನಾನು ನಟನೆ ನಿಲ್ಲಿಸುವ ಯೋಚನೆ ಮಾಡಿದ್ದೆ. ಆದರೆ ಮಗ ಗುರು, ನನಗೆ ಹುರಿದುಂಬಿಸಿದ. ಏನೇ ಆಗಲಿ ನವರಸನಾಯಕ ನಿಲ್ಲಬಾರದು. ನೀವು ಈ ವಯಸ್ಸಿನಲ್ಲೂ ನಟನೆ ಬಗ್ಗೆ ಆಸಕ್ತಿ ಹೊಂದಿದ್ದೀರಿ. ಪಾತ್ರಕ್ಕೆ ತಕ್ಕಂತೆ ದೇಹಾಕಾರ ಬದಲಾಯಿಸಿಕೊಳ್ಳುತ್ತೀರಿ. ನಟನೊಬ್ಬನಿಗೆ ಇರಬೇಕಾದ ಹಂಬಲ, ಆಸಕ್ತಿ ಈಗಲೂ ನಿಮ್ಮಲ್ಲಿ ಇದೆ. ಹಾಗಿದ್ದಾಗ ನೀವು ನಟನೆ ನಿಲ್ಲಿಸಬಾರದು. ನನ್ನ ಸಿನಿಮಾಗಳ ಮೊದಲ ಪ್ರೇಕ್ಷಕನೂ ಅವನೇ ಆಗಿದ್ದರಿಂದ ಅವನ ಮಾತಿಗೆ ಇಲ್ಲವೆನ್ನಲಾಗಲಿಲ್ಲ'' ಎಂದರು ನಟ ಜಗ್ಗೇಶ್.

'ಕಾಗೆ ಮೊಟ್ಟೆ' ಸಿನಿಮಾದ ಬಗ್ಗೆ ಜಗ್ಗೇಶ್ ಮಾತು

'ಕಾಗೆ ಮೊಟ್ಟೆ' ಸಿನಿಮಾದ ಬಗ್ಗೆ ಜಗ್ಗೇಶ್ ಮಾತು

'ಕಾಗೆ ಮೊಟ್ಟೆ' ಸಿನಿಮಾದ ಬಗ್ಗೆ ಮಾತನಾಡಿದ ನಟ ಜಗ್ಗೇಶ್, ''ನನಗೆ ಸಿನಿಮಾ ಬಹಳ ಇಷ್ಟವಾಯಿತು. ಕಂಟೆಂಟ್ ಇರುವಂತಹಾ ಸಿನಿಮಾ ಇದು. 'ಮಿರ್ಜಾಪುರ್' ಅಂಥಹುದ್ದನ್ನೆಲ್ಲ ನೀವು ನೋಡಿರುತ್ತೀರಿ. ಆದೆ ಮಾದರಿಯ ಸಿನಿಮಾ ಇದು. ಸಿನಿಮಾದ ನಿರ್ದೇಶಕ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ನನ್ನ ಜೀವನದಲ್ಲಿ ನಾನು ಬಹಳ ಸೋಮಾರಿ ನಿರ್ದೇಶಕರೊಟ್ಟಿಗೂ ಕೆಲಸ ಮಾಡಿದ್ದೇನೆ. ಆದರೆ ಈ ಹುಡುಗ ಬಹಳ ಚೆನ್ನಾಗಿ, ತಮ್ಮ ಬೆವರ ಹನಿ ಬಸಿದು ಕೆಲಸ ಮಾಡಿದ್ದಾನೆ'' ಎಂದು ನಿರ್ದೇಶಕ ಚಂದ್ರಹಾಸನ ಪ್ರಯತ್ನವನ್ನು ಹೊಗಳಿದರು ಜಗ್ಗೇಶ್. 'ಕಾಗೆ ಮೊಟ್ಟೆ' ಸಿನಿಮಾದಲ್ಲಿ ಗುರುರಾಜ್ ಜೊತೆಗೆ ಮಾದೇಶ, ಹೇಮಂತರೆಡ್ಡಿ ನಟಿಸಿದ್ದಾರೆ. ತನುಜಾ ನಾಯಕಿಯಾಗಿ ನಟಿಸಿದ್ದಾರೆ. ಸೌಜನ್ಯಾ, ಶರತ್ ಲೋಹಿತಾಶ್ವ, ಪೊನ್ನಂಬಳಂ, ರಾಜ್ ಬಹದ್ದೂರ್, ಸತ್ಯಜಿತ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ.

More from Filmibeat

English summary
Actor Jaggesh said I stopped my son Gururaj from acting in other languages when offer came. It is the big mistake in my life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X