ಉತ್ತರ ಕರ್ನಾಟಕಕ್ಕೆ ಏಕೆ ಸಹಾಯ ಮಾಡಿಲ್ಲ? : ಕಿಚ್ಚನಿಗೆ ಅಭಿಮಾನಿಯ ಸವಾಲು

Recommended Video

ಸುದೀಪ್ ಗೆ ಸವಾಲ್ ಹಾಕಿದ ಅಭಿಮಾನಿ | ಇದರ ಬಗ್ಗೆ ಕಿಚ್ಚ ಹೇಳಿದ್ದೇನು?

ನಟ ಸುದೀಪ್ ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ಸವಾಲು ಹಾಕಿದ್ದಾರೆ. ನಾನು ಇನ್ನು ಮುಂದೆ ಕನ್ನಡ ಸಿನಿಮಾಗಳನ್ನು ನೋಡುವುದನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಮಳೆಯಿಂದ ಅನಾಹುತ ಆಗಿರುವ ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಸಹಾಯ ಮಾಡಿಲ್ಲ ಎಂದು ಹೇಳಿರುವ ಅಭಿಮಾನಿ, ಸುದೀಪ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಇದೇ ಕಾರಣಕ್ಕೆ ನಾನು ಕನ್ನಡ ಸಿನಿಮಾಗಳನ್ನು ನೋಡುವುದಿಲ್ಲ ಎಂದಿದ್ದಾರೆ.

I Stop Watching Kannada Films Sudeep React To His Fan Challenge

ಅಭಿಮಾನಿಯ ಟ್ವೀಟ್ ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ''ಕನ್ನಡ ಚಿತ್ರರಂಗದಲ್ಲಿ ನನ್ನನ್ನು ಸೇರಿದ ಹಾಗೆ ಅನೇಕರು ಉತ್ತರ ಕರ್ನಾಟಕದ ಸಹಾಯಕ್ಕೆ ಮುಂದಾಗಿದ್ದೇವೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲ ಎನಿಸುತ್ತದೆ. ಅವರ ಅಗತ್ಯಗಳನ್ನು ಪೂರೈಸಲು ನಾವು ನಮ್ಮ ಕೈನಲ್ಲಿ ಆದ ಬೆಂಬಲ ನೀಡುತ್ತಿದ್ದೇವೆ. ನಿಮ್ಮ ಹೇಳಿಕೆ ತುಂಬ ಹಾನಿಕಾರಕ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಘಟನೆಯ ಬಳಿಕ ಆಗಸ್ಟ್ 8 ರಂದು ಸುದೀಪ್ ವಿಡಿಯೋ ಮೂಲಕ ಮಾತನಾಡಿದ್ದರು. "ನಾನು ಉತ್ತರ ಕರ್ನಾಟಕದ ಪ್ರವಾಹದ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಮಾತ್ರ ನೋಡುತ್ತಿದ್ದೀನೆ. ನಮ್ಮ ಜನ ಹೇಗಿದ್ದಾರೆ, ಅಲ್ಲಿ ಏನು ನಡೀತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಸರ್ಕಾರ ಏನಾದ್ರು ಮಾಡುತ್ತೆ. ಆದ್ರೆ ನನ್ನ ಸ್ನೇಹಿತರ ಬಳಗಕ್ಕೆ ಚಿಕ್ಕ ವಿನಂತಿ. ಅಲ್ಲೆ ಅಕ್ಕ ಪಕ್ಕದಲ್ಲಿ ಇರುವ ಸ್ನೇಹಿತರು ಹೋಗಿ ಅಲ್ಲಿ ಏನು ಸಹಾಯ ಬೇಕು, ಏನು ಅವಶ್ಯಕತೆ ಇದೆ, ತಕ್ಷಣಕ್ಕೆ ಏನು ಮಾಡಹುದು, ನಮ್ಮಕೈಯಲ್ಲಿ ಏನು ಮಾಡಲಿಕ್ಕೆ ಆಗುತ್ತೆ ಎಂದು ನನಗೆ ತಿಳಿಸಿ. ನಾವೆಲ್ಲರು ಸೇರಿ ನಮ್ಮವರಿಗೆ ಸಹಾಯ ಮಾಡೋಣ. ದಯವಿಟ್ಟು ಆದಷ್ಟು ಬೇಗ ಹೋಗಿ ನಮ್ಮರಿಗೆ ಏನು ಬೇಕು ಎನ್ನುವುದನ್ನು ತಿಳಿಸಿ" ಎಂದು ಕೇಳಿಕೊಂಡಿದ್ದರು.

More from Filmibeat

English summary
'I stop watching kannada films' actor Sudeep react to his fan challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X