For Quick Alerts
  ALLOW NOTIFICATIONS  
  For Daily Alerts

  ಅಪ್ಪು ಸರ್‌ ಚಿತ್ರದಲ್ಲಿ ವಿಲನ್ ಪಾತ್ರ ಮಿಸ್ ಆಯಿತು, ಆದರೆ ಈ ನಟನಿಗೆ ನಾನು ವಿಲನ್ ಆಗಲೇಬೇಕು: ವಿಜಯ್

  |

  ಮೊದಲಿಗೆ ಸಣ್ಣ ಪುಟ್ಟ ವಿಲನ್ ಪಾತ್ರಗಳನ್ನು ನಿರ್ವಹಿಸಿ ನಂತರ ಸೂರಿ ನಿರ್ದೇಶನದ ದುನಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದ ನಟ ದುನಿಯಾ ವಿಜಯ್ ಬಳಿಕ ಹಲವಾರು ಚಿತ್ರಗಳ ಆಫರ್ ಪಡೆದುಕೊಂಡು ಚಿತ್ರರಂಗದ ಪ್ರಮುಖ ಕಲಾವಿದನಾಗಿ ನೆಲೆನಿಂತರು. ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದ ದುನಿಯಾ ವಿಜಯ್ ತಮ್ಮ ಚಿತ್ರವನ್ನು ತಾವೇ ನಿರ್ದೇಶಿಸಿಕೊಳ್ಳುವಂತಹ ನಿರ್ಧಾರವನ್ನು ತೆಗೆದುಕೊಂಡು 2021ರಲ್ಲಿ ಸಲಗ ಮಾಡಿದ್ದರು.

  ಚಿತ್ರ ನಿರೀಕ್ಷೆಯನ್ನೂ ಮೀರಿ ಯಶಸ್ಸು ಸಾಧಿಸಿತು ಹಾಗೂ ವಿಜಯ್ ನಟನಾಗಿ ಹಾಗೂ ನಿರ್ದೇಶಕನಾಗಿ ಗೆಲುವು ಕಂಡರು. ಈ ಗೆಲುವಿನಿಂದ ವಿಜಯ್ ನಿರ್ದೇಶಿಸಲಿರುವ ಮುಂದಿನ ಚಿತ್ರಗಳ ಮೇಲೆ ನಿರೀಕ್ಷೆ ಸಹ ಸಾಮಾನ್ಯವಾಗಿ ಹುಟ್ಟಿಕೊಂಡಿತು. ಬಳಿಕ ವಿಜಯ್ ತಮ್ಮ ಮುಂದಿನ ನಿರ್ದೇಶನದ ಚಿತ್ರ ಭೀಮವನ್ನು ಘೋಷಿಸಿದರು. ಇದರ ಬೆನ್ನಲ್ಲೇ ತೆಲುಗು ಚಿತ್ರರಂಗಕ್ಕೂ ಸಹ ಕಾಲಿಟ್ಟು ಅಚ್ಚರಿ ಮೂಡಿಸಿದರು.

  ಹೌದು, ತೆಲುಗಿನ ಬಾಲಕೃಷ್ಣ ನಟನೆಯ ವೀರಸಿಂದ ರೆಡ್ಡಿ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದು, ಚಿತ್ರ ಇದೇ ಜನವರಿ 12ರಂದು ತೆರೆಕಾಣಲಿದೆ. ಹೀಗೆ ದುನಿಯಾ ವಿಜಯ್ ತೆಲುಗು ಚಿತ್ರರಂಗದಲ್ಲಿ ಖಳನಾಯಕನಾಗಿ ನಟಸಿದ್ದೇಕೆ ಎಂಬುದರ ಕುರಿತಾಗಿ 'ನ್ಯೂಸ್‌ಫಸ್ಟ್' ಸುದ್ದಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದರು. ಈ ಸಂದರ್ಶನದಲ್ಲಿ ವಿಜಯ್ ಪುನೀತ್ ರಾಜ್‌ಕುಮಾರ್ ಅವರ ಚಿತ್ರವೊಂದರಲ್ಲಿ ಅಭಿನಯಿಸಬೇಕಿತ್ತು ಎಂಬ ವಿಷಯವನ್ನೂ ಸಹ ಬಿಚ್ಚಿಟ್ಟರು.

  ಶಿವಣ್ಣನ ಜತೆ ನಟಿಸುವುದು ಖಚಿತ

  ಶಿವಣ್ಣನ ಜತೆ ನಟಿಸುವುದು ಖಚಿತ

  ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ನಟರ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಬೇಕು ಎಂದರೆ ಯಾವ ನಟನ ಜತೆ ಅಭಿನಯಿಸಲು ಇಚ್ಛಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ದುನಿಯಾ ವಿಜಯ್ ಶಿವ ರಾಜ್‌ಕುಮಾರ್ ಎಂದರು. ತೆಲುಗಿನಲ್ಲಿ ಬಾಲಕೃಷ್ಣ ಹೇಗೆ ಎನರ್ಜಿಟಿಕ್ ಮಾಸ್ ನಟನೋ ಅದೇ ರೀತಿ ಕನ್ನಡದಲ್ಲಿ ಶಿವಣ್ಣ ಎಂದ ದುನಿಯಾ ವಿಜಯ್ ಈಗಾಗಲೇ ಚಿತ್ರ ಮಾಡುವುದರ ಕುರಿತು ನಾನು ಹಾಗೂ ಶಿವಣ್ಣ ಮಾತನಾಡಿದ್ದೇವೆ, ಆದರೆ ಒಳ್ಳೆಯ ಕಥೆ ಸಿಕ್ಕಿಲ್ಲ, ದೇವರಾಣೆ ಶಿವಣ್ಣ ಚಿತ್ರದಲ್ಲಿ ನಾನು ವಿಲನ್ ಆಗಿ ನಟಿಸುವುದು ಪಕ್ಕಾ ಎಂದರು.

  ಅಪ್ಪು ಜತೆ ನಟಿಸಬೇಕಿತ್ತು!

  ಅಪ್ಪು ಜತೆ ನಟಿಸಬೇಕಿತ್ತು!

  ಹೀಗೆ ಮಾತು ಮುಂದುವರಿಸಿದ ದುನಿಯಾ ವಿಜಯ್ ಈ ಹಿಂದೆಯೇ ಪುನೀತ್ ರಾಜ್‌ಕುಮಾರ್ ಅವರ ಚಿತ್ರದಲ್ಲಿ ನಾನು ವಿಲನ್ ಆಗಿ ನಟಿಸಬೇಕಿತ್ತು ಎಂದು ಎಲ್ಲಿಯೂ ಬಿಟ್ಟುಕೊಡದ ವಿಷಯವನ್ನು ತಿಳಿಸಿದರು. ಚಿತ್ರವೊಂದರಲ್ಲಿ ಅಪ್ಪು ಸರ್ ಮುಂದೆ ನಾನು ವಿಲನ್ ಆಗಿ ನಟಿಸಲು ಮಾತುಕರೆ ನಡೆದಿತ್ತು. ಇದನ್ನು ಕೇಳಿದ್ದ ಪುನೀತ್ ರಾಜ್‌ಕುಮಾರ್ ಅವರು ವಿಜಯ್ ಅವರು ವಿಲನ್ ಪಾತ್ರ ಮಾಡ್ತಾರಾ ಎಂದು ಅನುಮಾನದಿಂದ ಕೇಳಿದ್ದರು ಹಾಗೂ ನಾನು ಖಂಡಿತ ಮಾಡ್ತೇನೆ, ನಿಮ್ಮ ಜತೆ ನಟಿಸುವುದು ನನ್ನ ಪುಣ್ಯ ಎಂದು ಹೇಳಿದ್ದೆ ಎಂದು ದುನಿಯಾ ವಿಜಯ್ ತಿಳಿಸಿದರು.

  ಅಪ್ಪು - ವಿಜಯ್ ಮಾಡಿದ್ರೆ ಮಾಸ್ ಆಗಿರುತ್ತಿತ್ತು

  ಅಪ್ಪು - ವಿಜಯ್ ಮಾಡಿದ್ರೆ ಮಾಸ್ ಆಗಿರುತ್ತಿತ್ತು

  ಇನ್ನು ಈ ವಿಷಯದ ಕುರಿತು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದು, ಪುನೀತ್ ರಾಜ್‌ಕುಮಾರ್ ಹಾಗೂ ದುನಿಯಾ ವಿಜಯ್ ಒಂದೇ ಚಿತ್ರದಲ್ಲಿ, ಅದೂ ಸಹ ನಾಯಕ - ಖಳ ನಾಯಕರಾಗಿ ನಟಿಸಿದ್ದರೆ ಎಷ್ಟು ಮಾಸ್ ಆಗಿ ಇರುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇಬ್ಬರೂ ಒಳ್ಳೆಯ ಮೈಕಟ್ಟನ್ನು ಹೊಂದಿದ್ದು, ಕಷ್ಟಕರ ಸಾಹಸ ದೃಶ್ಯಗಳಲ್ಲಿ ನಿಸ್ಸೀಮರಾಗಿದ್ದರು. ಹೀಗಾಗಿ ಈ ಇಬ್ಬರ ಕೊಂಬೊದಲ್ಲಿ ಸಿನಿಮಾ ಬಂದಿದ್ದರೆ ಅದೊಂದು ಮಾಸ್ ಹಬ್ಬವೇ ಆಗಿರುತ್ತಿತ್ತು. ಆದರೆ ಅಪ್ಪು ಈ ಚಿತ್ರವನ್ನು ಮಾಡುವ ಮುನ್ನವೇ ಇಹಲೋಕ ತ್ಯಜಿಸಿದ್ದು, ದುನಿಯಾ ವಿಜಯ್ ಅವರ ಆಸೆ ಈಡೇರಲೇ ಇಲ್ಲ.

  English summary
  I was selected as Villain for Puneeth Rajkumar movie: Duniya Vijay revealed a big secret. Read on
  Wednesday, January 11, 2023, 15:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X