ನಾನು ಗಾಬರಿ ಬಿದ್ದೆ ; ಅವನ ಹೆಂಡತಿ ಕಾಟ ತಾಳಲಾರದೇ ನನ್ನ ಮಗ ಕ್ಯಾಬ್ ಓಡಿಸ್ತಿದ್ದ- ಎಸ್ ನಾರಾಯಣ್

ಪ್ರೀತಿ ಅಂದರೆ ಅದು ಪ್ರೀತಿಯಷ್ಟೇ ಅಲ್ಲ .. ಪ್ರೀತಿ ಅಂದರೆ ಬದುಕು, ಭವಿಷ್ಯ, ಭಾಷೆ, ಕನಸು, ನಗು, ಇನ್ನೂ ಏನೆಲ್ಲಾ ! ಇಂಥಾ ಪ್ರೀತಿಯನ್ನು ಬದುಕಿರುವ ತನಕ ಜಿನುಗುವ, ಪ್ರೇಮಸೆಲೆಯಾಗಿ ಬೆಳೆಸುವ -ಉಳಿಸುವ ವೃತವೇ ದಾಂಪತ್ಯ.ಆದರೆ ಈಗೀಗ ಪ್ರೀತಿ ಮತ್ತು ದಾಂಪತ್ಯದ ಅರ್ಥ ಎರಡು ಬದಲಾಗಿದೆ. ಇಲ್ಲಿ ದಿನ ಬೆಳಗಾದರೆ ಅನೇಕರು ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳುತ್ತಾರೆ.

ಮದುವೆಯ ಬಂಧನದಿಂದ ಹೊರ ಬರುತ್ತಾರೆ. ವಿಚ್ಛೇದನ ಪಡೆಯುತ್ತಾರೆ. ಇನ್ನೂ.. ಬಣ್ಣದ ಲೋಕದಲ್ಲಿ ಕೂಡ ಡಿವೋರ್ಸ್ ಈಗೀಗ ತುಂಬಾನೇ ಮಾಮೂಲಿ ಎನ್ನುವಂತಾಗಿದೆ. ಹಲವಾರು ತಾರೆಯರು ತಮ್ಮ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ.

i-was-shocked-director-s-narayan-reveals-his-son-secretly-drove-a-cab-to-meet-wifes-3-000-day-dema

ಕೆಲವರು ಗೌರವಯುತವಾಗಿ ದೂರ ಆದರೆ ಇನ್ನೂ ಕೆಲವರು ಬೀದಿಯಲ್ಲಿ ನಿಂತು ಒಬ್ಬರ ಮೇಲೊಬ್ಬರ ಕೆಸರೆರಚಿ ದೂರವಾಗುತ್ತಾರೆ. ಈ ಮೂಲಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ. ಆಡಿಕೊಳ್ಳುವರ ಬಾಯಿಗೆ ಆಹಾರ ಕೂಡ ಆಗುತ್ತಾರೆ. ಕನ್ನಡ ಚಿತ್ರರಂಗದ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಮಗನ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ಹಿಂದೆ ಸುದ್ದಿಯಾದಂತೆ ಎಸ್. ನಾರಾಯಣ್ ಅವರ ಮನೆಯ ವಿಚಾರ ಬೀದಿಗೆ ಬಂದಿದೆ. ಮನೆಯಿಂದ ಹೊರ ಬಂದ 14 ತಿಂಗಳ ನಂತರ ಎಸ್ ನಾರಾಯಣ್ ಅವರ ಸೊಸೆ ಪವಿತ್ರಾ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಸ್. ನಾರಾಯಣ್ ಕಳೆದ ಕೆಲ ದಿನಗಳಿಂದ ಮಾಧ್ಯಮದವರಿಗೆ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ. ನಾನು ಹೆಣ್ಣುಮಗಳ ತಂದೆ, ನನ್ನ ಮನೆಯಲ್ಲಿ ವರದಕ್ಷಿಣೆ ಕೇಳೋದು ಸಾಧ್ಯವೇ? ಎಂಬ ಪ್ರಶ್ನೆ ಕೇಳಿದ್ದಾರೆ. ತಮ್ಮ ಮನದ ನೋವನ್ನು ಕೂಡ ಹಲವು ಬಾರಿ ಹಲವು ಮಾಧ್ಯಮದವರ ಎದುರು ಹೊರ ಹಾಕುತ್ತಿದ್ದಾರೆ.

ಇದೀಗ ಹಳಿ ತಪ್ಪಿದ ತಮ್ಮ ಮಗನ ದಾಂಪತ್ಯ ಜೀವನದ ಕುರಿತು ಎಸ್.ನಾರಾಯಣ್ ಮತ್ತೊಮ್ಮೆ ಮಾತನಾಡಿದ್ದು, ನನ್ನ ಮಗ ಕ್ಯಾಬ್ ಓಡಿಸ್ತಿದ್ದ, ನಾನು ನೋಡಿ ಶಾಕ್ ಆದೆ ಎಂದು ಹೇಳಿದ್ದಾರೆ. ಮದುವೆಯ ನಂತರ ಏನಾಯ್ತು..? ಸೊಸೆಯಿಂದ ತಮಗೆಲ್ಲಾ ಎಷ್ಟು ನೋವಾಗಿದೆ ಎನ್ನುವುದನ್ನು ಕೂಡ ಹೇಳಿದ್ದಾರೆ.

i-was-shocked-director-s-narayan-reveals-his-son-secretly-drove-a-cab-to-meet-wifes-3-000-day-dema

ಈ ಕುರಿತು ''ಗ್ಯಾರಂಟಿ ನ್ಯೂಸ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಎಸ್.ನಾರಾಯಣ್, ಅವರು ಮದುವೆಯಾದ ನಂತರ ನಮ್ಮ ಮನೆಯಲ್ಲಿ ಕೇವಲ ಒಂದೂವರೆ ತಿಂಗಳು ಮಾತ್ರ ಇದ್ದರು ಎಂದು ಹೇಳಿದ್ದಾರೆ. ಒಂದೂವರೆ ತಿಂಗಳ ನಂತರ ಮಗನ ಕರೆದುಕೊಂಡು ಅವರು ಆಚೆ ಹೋದರು, ತವರು ಮನೆ ಸೇರಿಕೊಂಡರು ಎಂದು ಹೇಳಿರುವ ಎಸ್ ನಾರಾಯಣ್ ಹಲವು ಬಾರಿ ನಾನು ಕರೆದೆ ಆದರೆ ಅವರು ಬರಲಿಲ್ಲ. ಈ ಹಿನ್ನೆಲೆ ನಾನು ಅಲ್ಲಿರುವುದು ಬೇಡ ಎಂದು ಬೇರೆ ಬಾಡಿಗೆ ಮನೆಯೊಂದನ್ನು ಕೂಡ ಅವರಿಗೆ ಮಾಡಿ ಕೊಟ್ಟಿದ್ದೇ ಎಂದು ಹೇಳಿದ್ಧಾರೆ.

ಬಾಡಿಗೆ ಮನೆ ಮಾಡುವುದಲ್ಲದೇ ಆ ಮನೆಯ ಬಾಡಿಗೆ ಕೂಡ ನಾನೇ ಕಟ್ತಿದ್ದೇ, ಆ ಮನೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೂಡ ಮಾಡಿ ಕೊಟ್ಟೆ ಎಂದು ಹೇಳಿರುವ ಎಸ್‌.ನಾರಾಯಣ್, ಅಲ್ಲಿಯೇ ಅವರಿಗೆ ಒಂದು ಮಗು ಆಯ್ತು ಎಂದು ಹೇಳಿದ್ದಾರೆ.

ಮುಂದುವರೆದು ಇಬ್ಬರಿಗೆ ಮಗು ಆದ ನಂತರ ಅದೊಂದು ದಿನ ನನ್ನ ಮಗ ಕ್ಯಾಬ್ ಓಡಿಸುತ್ತಿರುವುದನ್ನು ನಾನು ನನ್ನ ಕಣ್ಣಾರೆ ನೋಡಿದೆ, ನನ್ನ ಕಣ್ಣಲ್ಲಿ ನೀರು ಬಂತು. ಪ್ರತಿಯೊಂದನ್ನು ನಾನು ನೋಡಿಕೊಳ್ತಿದ್ದನಲ್ಲಾ..? ಆದರೂ ಯಾಕೆ ಇವನು ಕ್ಯಾಬ್ ಓಡಿಸ್ತಿದ್ದಾನೆ..? ಎಂದೆಲ್ಲಾ ಪ್ರಶ್ನೆಗಳು ನನ್ನಲ್ಲಿ ಬಂದವು ಎಂದು ಹೇಳಿರುವ ಎಸ್ ನಾರಾಯಣ್ ಆ ನಂತರ ನಾನು ಮಗನ ಬಳಿ ಕೇಳಿದೆ ಆಗ ನಾನು ಪ್ರತಿ ದಿನ ದುಡಿದು ಮೂರು ಸಾವಿರ ಹಣ ಮನೆಗೆ ಕೊಡಬೇಕೆಂದು ನನ್ನ ಮಗ ಹೇಳಿದ. ಈ ಮಾತು ಕೇಳಿ ನನಗೆ ಇನ್ನೂ ಆಘಾತವಾಯ್ತು ಎಂದು ಹೇಳಿದ್ದಾರೆ.

ಆ ನಂತರ ನಾನು ಮೊದಲು ಮನೆ ಖಾಲಿ ಮಾಡು ನನ್ನ ಜೊತೆ ಬಾ ಎಂದು ಮತ್ತೆ ಮನೆಗೆ ಕರೆದುಕೊಂಡು ಬಂದೆ ಎಂದು ಹೇಳಿರುವ ಎಸ್.ನಾರಾಯಣ್ ಮದುವೆ ಮಾಡಿಕೊಂಡು ಒಂದೂವರೆ ತಿಂಗಳಿನಲ್ಲಿ ನಮ್ಮ ಮನೆಯಿಂದ ಆಚೆ ಹೋದರಲ್ಲ. ಅಲ್ಲಿಂದ ಇಲ್ಲಿಯವರೆಗೆ ನಾನು ಅವರ ಜೊತೆ ಒಂದು ಮಾತು ಮಾತನಾಡಿಲ್ಲ, ಮಾತನಾಡಲ್ಲ ಯಾಕೆಂದರೆ ಅವರಿಗೆ ಹಿರಿಯರಿಗೆ ಗೌರವ ಕೊಡುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಅವರ ಧ್ವನಿ ಒಂದು ಹಂತಕ್ಕೆ ಮರೆತೇ ಹೋಗಿತ್ತು ನಮಗೆ, ಆದರೆ ಈಗ ಮನೆಯಿಂದ ಹೋಗಿ 14 ತಿಂಗಳ ನಂತರ ಈಗ ವರದಕ್ಷಣೆ ಕೇಸ್ ಹಾಕಿದ್ದಾರೆ. ಇದರಿಂದ ನಮಗೂ ಆಶ್ಚರ್ಯ ಆಗಿದೆ ಆಘಾತವೂ ಆಗಿದೆ ಎಂದು ಭಾವುಕರಾಗಿದ್ದಾರೆ.

More from Filmibeat

English summary
Amid a dowry harassment case, filmmaker S. Narayan discloses his son was forced to drive a cab just to fulfill his daughter-in-law's rigid daily earnings target.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X