ಚಿತ್ರರಂಗದಿಂದ ನಿವೃತ್ತಿ ಹೊಂದುವುದರ ಬಗ್ಗೆ ಮಾತನಾಡಿದ ನಟ ದರ್ಶನ್

I will act till my last breath and I wont take retirement says Darshan

ದರ್ಶನ್ ಅಭಿನಯದ ಯಾವ ಚಿತ್ರಗಳೂ ಸಹ ಈ ವರ್ಷ ಬಿಡುಗಡೆಗೊಂಡಿಲ್ಲ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ರಿಲೀಸ್ ಆಗಿದ್ದ ರಾಬರ್ಟ್ ಚಿತ್ರದ ಬಳಿಕ ದರ್ಶನ್ ಅಭಿನಯದ ಯಾವೊಂದು ಚಿತ್ರವೂ ತೆರೆಕಂಡಿಲ್ಲ. ಇನ್ನು ಈ ವರ್ಷದ ನವೆಂಬರ್ ತಿಂಗಳ ಒಂದನೇ ತಾರೀಖಿನಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದರ್ಶನ್ ಅಭಿನಯದ ಕ್ರಾಂತಿ ಚಿತ್ರ ತೆರೆಕಾಣಲಿದೆ ಎನ್ನಲಾಗಿತ್ತಾದರೂ ಚಿತ್ರೀಕರಣ ವಿಳಂಬವಾದ ಕಾರಣ ಮುಂದಿನ ಜನವರಿ ತಿಂಗಳ ಗಣರಾಜ್ಯೋತ್ಸವದಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಹೀಗಾಗಿ ನಟ ದರ್ಶನ್ ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದು ಬೆಂಗಳೂರು ಟೈಮ್ಸ್ ನಡೆಸಿದ ಸಂದರ್ಶನದಲ್ಲಿಯೂ ಭಾಗವಹಿಸಿದ್ದಾರೆ. ಇನ್ನು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಲುವಾಗಿ ಈ ವಿಶೇಷ ಸಂದರ್ಶನವನ್ನು ನಡೆಸಲಾಗಿದ್ದು, ಹಲವಾರು ಆಸಕ್ತಿಕರ ಹಾಗೂ ಕುತೂಹಲಕಾರಿ ಪ್ರಶ್ನೆಗಳಿಗೆ ನಟ ದರ್ಶನ್ ಮುಕ್ತವಾಗಿ ಉತ್ತರಿಸಿದ್ದಾರೆ.

ಚಿತ್ರಗಳ ಯಶಸ್ಸನ್ನು ಹೇಗೆ ನಿಭಾಯಿಸುತ್ತೀರ, ಚಿತ್ರಗಳ ಆಯ್ಕೆಯನ್ನು ಹೇಗೆ ಮಾಡುತ್ತೀರ, ಮೊದಲ ಚಿತ್ರ ಮಾಡುವಾಗ ನಿಮ್ಮ ನಿರೀಕ್ಷೆ ಏನಿತ್ತು ಹಾಗೂ ಅಂತಿಮವಾಗಿ ಚಿತ್ರರಂಗದಿಂದ ಯಾವಾಗ ನಿವೃತ್ತಿ ಹೊಂದಿದ್ದೀರ ಎಂಬೆಲ್ಲಾ ಪ್ರಶ್ನೆಗಳಿಗೆ ದರ್ಶನ್ ಈ ಕೆಳಕಂಡಂತೆ ಉತ್ತರಿಸಿದ್ದಾರೆ.

ಮೆಜೆಸ್ಟಿಕ್‌ನಿಂದ ಇಲ್ಲಿಯವರೆಗೆ ಯಾವುದೂ ಅದೃಷ್ಟದಿಂದ ಸಿಕ್ಕ ಯಶಸ್ಸಲ್ಲ

ಮೆಜೆಸ್ಟಿಕ್‌ನಿಂದ ಇಲ್ಲಿಯವರೆಗೆ ಯಾವುದೂ ಅದೃಷ್ಟದಿಂದ ಸಿಕ್ಕ ಯಶಸ್ಸಲ್ಲ

ಮೊದಲಿಗೆ ತಾನು ಯಾವುದೇ ವಿಷಯದ ಬಗ್ಗೆಯೂ ಮಾತನಾಡಿದರೂ ನೇರವಾಗಿ ಮಾತನಾಡುವ ವ್ಯಕ್ತಿ ಹಾಗೂ ಇದನ್ನು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ, ಚಿತ್ರರಂಗದಲ್ಲಿ ಸಾಧಿಸಬೇಕಿರುವುದು ಸಾಕಷ್ಟಿದೆ, ಮೆಜೆಸ್ಟಿಕ್ ಚಿತ್ರದಿಂದ ಇಲ್ಲಿಯವರೆಗೆ ನಾನು ಮಾಡಿರುವ ಪಾತ್ರಗಳೆಲ್ಲಾ ನನ್ನ ಯಶಸ್ಸಿಗೆ ಕಾರಣ ಹಾಗೂ ಇದ್ಯಾವುದೂ ಅದೃಷ್ಟದಿಂದ ಯಶಸ್ಸಲ್ಲ, ಕಷ್ಟದ ಪ್ರತಿಫಲ ಎಂದು ದರ್ಶನ್ ಹೇಳಿದರು.

ಅಪ್ಪ ಸತ್ತ ದಿನ ನಟನಾಗಲು ತೀರ್ಮಾನಿಸಿದೆ

ಅಪ್ಪ ಸತ್ತ ದಿನ ನಟನಾಗಲು ತೀರ್ಮಾನಿಸಿದೆ

ನಟನಾಗಲು ಮುಂದೆಯೇ ತೀರ್ಮಾನಿಸಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟ ದರ್ಶನ್ ತಾನು ಚಿತ್ರದಲ್ಲಿ ನಟನಾಗಿ ನಟಿಸಬೇಕು ಎಂದು ತೀರ್ಮಾನಿಸಿದ್ದು ತನ್ನ ತಂದೆ ತೂಗುದೀಪ ದರ್ಶನ್ ನಿಧನ ಹೊಂದಿದ ದಿನ ಎಂದು ತಿಳಿಸಿದರು. ಅಂದಿನ ದಿನದವರೆಗೂ ಝೂ ಕೀಪರ್ ಆಗಬೇಕು ಅಥವಾ ನಟನಾಗಬೇಕು ಎಂದುಕೊಂಡಿದ್ದೆ, ಆದರೆ ತಂದೆಯ ಸಾವಿನ ದಿನ ಮನೆಯ ಮುಂದೆ ಇದ್ದ ಜನರ ಗುಂಪನ್ನು ನೋಡಿ ನಾನು ಸತ್ತಾಗಲೂ ಸಹ ಈ ಗುಂಪು ಇರಬೇಕು, ಇದನ್ನು ಉಳಿಸಿಕೊಳ್ಳಬೇಕು ಎಂದು ತೀರ್ಮಾನಿಸಿ ನಟನಾಗುವ ತೀರ್ಮಾನ ತೆಗೆದುಕೊಂಡೆ ಎಂದು ತಿಳಿಸಿದರು.

ನಿವೃತ್ತಿ ಬಗ್ಗೆ ಯೋಚಿಸಿದ್ದೀರಾ?

ನಿವೃತ್ತಿ ಬಗ್ಗೆ ಯೋಚಿಸಿದ್ದೀರಾ?

ಇನ್ನು ನಟನೆಯಿಂದ ನಿವೃತ್ತಿ ಪಡೆಯುವ ಬಗ್ಗೆ ಹಾಗೂ ಆ ದಿನದ ಬಗ್ಗೆ ಏನಾದರೂ ಯೋಚಿಸಿದ್ದೀರ ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ನಟ ದರ್ಶನ್ ಅದರ ಬಗ್ಗೆ ಯೋಚಿಸಿಯೇ ಇಲ್ಲ ಎಂದರು. ಏಕೆಂದರೆ ನಾನು ಸಾಯುವ ದಿನ ಕೂಡ ನನ್ನ ಮುಖದ ಮೇಲೆ ಬಣ್ಣ ಇರಬೇಕು, ಮುಖದ ಮೇಲೆ ಬಣ್ಣ ಇರುವಾಗಲೇ ನಾನು ಕೊನೆಯುಸಿರೆಳೆಯಬೇಕು ಎಂದು ದರ್ಶನ್ ತಿಳಿಸಿದರು. ನಾನು ಇಲ್ಲಿಗೆ ಕಷ್ಟಪಟ್ಟು ಬಂದಿದ್ದೇನೆ, ಬಿಡುವ ಮಾತೇ ಇಲ್ಲ ಎಂದೂ ಸಹ ಹೇಳಿದರು.

More from Filmibeat

English summary
I will act till my last breath and I won't take retirement says Darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X