ತಾತ, ತಂದೆಯ ಹಾದಿಯಲ್ಲಿ ರಾಜಕಾರಣಕ್ಕೆ 'ಅಭಿಮನ್ಯು' ನಿಖಿಲ್
Recommended Video

ಸ್ಯಾಂಡಲ್ ವುಡ್ ಪ್ರಿನ್ಸ್ ಆಗಿ, ಅಭಿಮಾನಿಗಳ ಪ್ರೀತಿಯ 'ಅಭಿಮನ್ಯು' ಆಗಿ ಚಂದನವನದಲ್ಲಿ ಮಿಂಚುತ್ತಿರುವ ಚೆಲುವ ನಿಖಿಲ್ ಕುಮಾರ್.
ತಾತ ಎಚ್.ಡಿ.ದೇವೇಗೌಡ ಭಾರತ ದೇಶದ ಪ್ರಧಾನ ಮಂತ್ರಿ ಆಗಿದ್ದವರು, ತಂದೆ ಎಚ್.ಡಿ.ಕುಮಾರಸ್ವಾಮಿ ಸದ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹಾಗ್ನೋಡಿದ್ರೆ, ದೇವೇಗೌಡರ ಇಡೀ ಕುಟುಂಬ ರಾಜಕೀಯದಲ್ಲಿ ಸಕ್ರಿಯವಾಗಿದೆ.
ಫ್ಯಾಮಿಲಿಯಲ್ಲಿ ರಾಜಕಾರಣಕ್ಕೆ ಮೊದಲ ಆದ್ಯತೆ ಇದ್ದರೂ, ನಿಖಿಲ್ ಕುಮಾರ್ ಆಯ್ದುಕೊಂಡಿದ್ದು ಮಾತ್ರ ಚಿತ್ರರಂಗ. ಹೀರೋ ಆಗಬೇಕು ಎಂಬ ಆಸೆ ಹೊತ್ತಿದ್ದ ನಿಖಿಲ್ ಕುಮಾರ್ ಸ್ಯಾಂಡಲ್ ವುಡ್ ಗೆ 'ಜಾಗ್ವಾರ್' ಮೂಲಕ ಎಂಟ್ರಿಕೊಟ್ಟರು.
'ಜಾಗ್ವಾರ್' ಬಳಿಕ 'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿನಯಿಸಿರುವ ನಿಖಿಲ್ ಇದೀಗ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಮುಂದಿನ ಪ್ರಾಜೆಕ್ಟ್ ಬಗ್ಗೆ ಪ್ಲಾನ್ ಮಾಡುತ್ತಿರುವ ನಿಖಿಲ್ ಕುಮಾರ್ ಗೆ ತಮ್ಮ ಭವಿಷ್ಯ ಇರುವುದು ರಾಜಕೀಯದಲ್ಲಿ ಅಂತ ಅನಿಸಿದೆ.! ಮುಂದೆ ಓದಿರಿ...

ರಾಜಕೀಯಕ್ಕೆ ಧುಮುಕುವೆ.!
''ಒಂದಲ್ಲಾ ಒಂದು ದಿನ ನಾನು ರಾಜಕಾರಣಕ್ಕೆ ಧುಮುಕುವೆ. ಆದ್ರೆ, ಅದಕ್ಕೂ ಮುನ್ನ ನಾನು ತಿಳಿದುಕೊಳ್ಳಬೇಕಾದ ವಿಷಯಗಳು ಸಾಕಷ್ಟಿವೆ. ಸಿನಿಮಾದ ಶೂಟಿಂಗ್ ಪ್ಯಾಕಪ್ ಆದ ಕೂಡಲೆ, ನಾನು ನನ್ನ ತಂದೆ ಜೊತೆಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ಮಾಡುತ್ತಿದ್ದೇನೆ'' ಎಂದು ನಟ ನಿಖಿಲ್ ಕುಮಾರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ.?
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರ್ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯಷ್ಟೇ ಕೇಳಿಬಂದಿತ್ತು. ಇದೀಗ ರಾಜಕೀಯದ ಬಗ್ಗೆ ನಿಖಿಲ್ ಕುಮಾರ್ ಆಸಕ್ತಿ ತೋರಿಸುತ್ತಿರುವುದನ್ನು ನೋಡಿದರೆ, ಅವರು ಎಂ.ಪಿ ಎಲೆಕ್ಷನ್ ನಲ್ಲಿ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ.

ಉತ್ತಮ ನಟ ಆಗಬೇಕು
'ಸೂಪರ್ ಸ್ಟಾರ್' ಅಂತ ಜನಪ್ರಿಯವಾಗುವುದಕ್ಕಿಂತ, 'ಉತ್ತಮ ನಟ' ಅಂತ ಗುರುತಿಸಿಕೊಳ್ಳುವುದು ನಿಖಿಲ್ ಕುಮಾರ್ ಬಯಕೆ. ಅದಕ್ಕೋಸ್ಕರ ಕನ್ನಡ ಚಿತ್ರರಂಗದಲ್ಲಿ ನಿಖಿಲ್ ಹೆಚ್ಚು ಶ್ರಮ ವಹಿಸುತ್ತಿದ್ದಾರೆ.

ಹೊಸಬರ ಜೊತೆಗೆ ಸಿನಿಮಾ ಮಾಡಲು ಒಲವು
ತಮ್ಮ ಮೂರನೇ ಸಿನಿಮಾದ ಬಗ್ಗೆ ನಿಖಿಲ್ ಕುಮಾರ್ ಈಗಾಗಲೇ ಹಲವು ನಿರ್ದೇಶಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಖ್ಯಾತನಾಮರ ಜೊತೆಗೆ ಕೆಲಸ ಮಾಡುವುದಕ್ಕಿಂತಲೂ, ಹೊಸಬರ ಜೊತೆಗೆ ಸಿನಿಮಾ ಮಾಡಲು ನಿಖಿಲ್ ಕುಮಾರ್ ಒಲವು ತೋರಿದ್ದಾರೆ.


Click it and Unblock the Notifications











