For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ಬಾಯ್ ಬಾಯ್ ಹೇಳಿದ ಲಕ್ಕಿ ಸ್ಟಾರ್ ರಮ್ಯಾ

  By Suneetha
  |

  ಚಂದನವನದ ಲಕ್ಕಿ ಸ್ಟಾರ್ ರಮ್ಯಾ ಅವರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಹೀಗಂತ ಖುದ್ದು ನಟಿ ರಮ್ಯಾ ಅವರೇ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

  ನಟಿ ರಮ್ಯಾ ಅವರು ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ಮೇಲೆ ಸಿನಿಮಾದತ್ತ ಮುಖ ಕೂಡ ತೋರಿಸಲಿಲ್ಲ. ತದನಂತರ ಸುಮಾರು ಒಂದು ವರ್ಷ ಕಳೆದ ನಂತರ ಮತ್ತೆ ಅಭಿಮಾನಿಗಳ ತಮ್ಮ ದರ್ಶನ ನೀಡಿದ್ದರು.[ರಾಧಿಕಾ ಕುಮಾರಸ್ವಾಮಿ ಬಗ್ಗೆ ನಟಿ ರಮ್ಯಾ ಮಾಡಿದ ಕಾಮೆಂಟ್ ಏನು?]

  ನಟಿ ರಮ್ಯಾ ಅವರು ಫೇಸ್ ಬುಕ್ಕಿನಲ್ಲಿ ತಮ್ಮ ಕಲರ್ ಫುಲ್ ಫೊಟೋಗಳನ್ನು ಅಪ್ ಲೋಡ್ ಮಾಡಿದ್ದನ್ನು ನೋಡಿ ಅಭಿಮಾನಿಗಳು ರಮ್ಯಾ ಅವರು ಮತ್ತೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ ಅಂತ ದಿಲ್ ಖುಷ್ ಆಗಿದ್ದರು.[ಒಂಬತ್ತು ವರ್ಷಗಳ ನಂತರ ಒಂದಾದ ಪುನೀತ್-ರಮ್ಯಾ ಜೋಡಿ]

  ಆದರೆ 'ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸೋದಿಲ್ಲಾ' ಅಂತ ಹೇಳುವ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ.

  'ನಾನು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಸಮಾಜಕ್ಕೆ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅಂತ ಅನೇಕ ಸಂದೇಶಗಳನ್ನು ನೀಡಿದ್ದೇನೆ ಆದರೆ ಅದು ಬರೀ ರೀಲ್ ನಲ್ಲಿ ಮಾತ್ರ'.[ರಮ್ಯಾ ಬೇಡ ಅಂದಿದ್ದು ಹರಿಪ್ರಿಯಾ ಪಾಲಾಯ್ತು.!]

  'ಆದರೆ ಇದೀಗ ನಿಜ ಜೀವನದಲ್ಲೂ ನನಗೆ ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಹಾಗಾಗಿ ನಾನು ಈ ಉತ್ತಮ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ರಮ್ಯಾ ನುಡಿದಿದ್ದಾರೆ.[ಕುಮಾರಸ್ವಾಮಿ ಹೋಮ್ ಬ್ಯಾನರಿನಲ್ಲಿ ಸಿನಿಮಾ ಮಾಡಿದ್ದೇನೆ: ರಮ್ಯಾ]

  'ನಾನು ಸಿನಿಮಾಗಳಲ್ಲಿ ಅಭಿನಯಿಸಲು ಇದು ಸೂಕ್ತ ಕಾಲವಲ್ಲ ಹಾಗಾಗಿ ಇನ್ನು ಮೇಲೆ ನಾನು ಯಾವುದೇ ಸಿನಿಮಾಗಳಿಗೆ ಬಣ್ಣ ಹಚ್ಚೋದಿಲ್ಲ. ರಾಜಕೀಯದಲ್ಲೇ ಸಂಪೂರ್ಣವಾಗಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.

  English summary
  I will not Act in any movies as a Heroine says Kannada Actress Ramya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X