ಮಲ್ಟಿಸ್ಟಾರ್ ಸಿನಿಮಾ ಪದೇ ಪದೇ ಮಾಡಲ್ಲ ಎಂದ ಸುದೀಪ್ ಕಾರಣನೂ ಬಿಚ್ಚಿಟ್ರು

Recommended Video

TheVillain : ಮತ್ತೆ ಮಲ್ಟಿಸ್ಟಾರರ್ ಸಿನಿಮಾ ಮಾಡೋದು ಡೌಟ್ ಎಂದು ಸುದೀಪ್..! | FILMIBEAT KANNADA

ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಜೊತೆ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾ ಮಾಡಿದ್ರು ಕಿಚ್ಚ ಸುದೀಪ್. 'ವೀರ ಪರಂಪರೆ' ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೊತೆ ತೆರೆ ಹಂಚಿಕೊಂಡರು. 'ಮಾಣಿಕ್ಯ' ಸಿನಿಮಾ ಮಾಡಿ ರವಿಚಂದ್ರನ್ ಜೊತೆ ಅಭಿನಯಿಸಿದ್ದರು. 'ಮುಕುಂದ ಮುರಾರಿ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು.

ಆಗಾಗ ಮಲ್ಟಿಸ್ಟಾರ್ ಸಿನಿಮಾ ಮಾಡಿ ಅಭಿಮಾನಿಗಳನ್ನ ಖುಷಿ ಪಡಿಸುತ್ತಿದ್ದ ಕಿಚ್ಚ ಸುದೀಪ್ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ದಿ ವಿಲನ್' ಸಿನಿಮಾ ಮಾಡಿದ್ರು. ಇದೇ ತಿಂಗಳು 18 ರಂದು 'ವಿಲನ್' ಚಿತ್ರ ತೆರೆಕಾಣುತ್ತಿದೆ.

ಆದ್ರೆ, ಸುದೀಪ್ ಅವರ ಇನ್ಮುಂದೆ ಮಲ್ಟಿಸ್ಟಾರ್ ಸಿನಿಮಾ ಮಾಡೋದು ಅನುಮಾನವಾಗಿದೆ. ಹೌದು, ಮಲ್ಟಿಸ್ಟಾರ್ ಸಿನಿಮಾಗಳು ಮಾಡೋದ್ರಿಂದ ಸುದೀಪ್ ಅವರಿಗೆ ಕೆಲವು ವಿಚಾರದಲ್ಲಿ ನಷ್ಟವೂ ಆಗಲಿದೆಯಂತೆ. ಅಷ್ಟಕ್ಕೂ, ಸುದೀಪ್ ಹೇಳಿದ್ದೇನು.? ಯಾಕೆ ಮಲ್ಟಿಸ್ಟಾರ್ ಸಿನಿಮಾ ಮಾಡಲ್ಲ.? ಮುಂದೆ ಓದಿ.....

ಪದೇ ಪದೇ ಮಲ್ಟಿಸ್ಟಾರ್ ಸಿನಿಮಾ ಮಾಡಲ್ಲ

ಪದೇ ಪದೇ ಮಲ್ಟಿಸ್ಟಾರ್ ಸಿನಿಮಾ ಮಾಡಲ್ಲ

ಪದೇ ಪದೇ ಮಲ್ಟಿಸ್ಟಾರ್ ಸಿನಿಮಾ ಚೆಂದ ಅಲ್ಲ. ನಮ್ಮ ಗುರುತು ಕೂಡ ಹೋಗಿಬಿಡುತ್ತೆ. ಸದ್ಯಕ್ಕೆ ನಾನು ಯಾವುದೇ ಮಲ್ಟಿಸ್ಟಾರ್ ಸಿನಿಮಾನೂ ಮಾಡ್ಬೇಕು ಅಂತಿಲ್ಲ. ತುಂಬಾ ಒಳ್ಳೆಯ ಹಾಗೂ ದೊಡ್ಡ ವ್ಯಕ್ತಿಗಳ ಜೊತೆ ಸಿನಿಮಾ ಮಾಡಿದ್ದೀನಿ. ಈಗ ನನ್ನ ಕೆಲವು ಚಿತ್ರಗಳಿದೆ, ಸೋ ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡೋಣ'' ಎಂದು ಸುದೀಪ್ ಹೇಳಿದ್ದಾರೆ.

'ವಿಲನ್' ಒಪ್ಪಿಕೊಂಡಿದ್ದೇ ಕಾಂಬಿನೇಷನ್ ಗೋಸ್ಕರ

'ವಿಲನ್' ಒಪ್ಪಿಕೊಂಡಿದ್ದೇ ಕಾಂಬಿನೇಷನ್ ಗೋಸ್ಕರ

ದಿ ವಿಲನ್ ಸಿನಿಮಾವನ್ನ ಸುದೀಪ್ ಒಪ್ಪಿಕೊಂಡಿದ್ದೇ ಶಿವರಾಜ್ ಕುಮಾರ್ ಜೊತೆಗಿನ ಕಾಂಬಿನೇಷನ್ ಗೋಸ್ಕರವಂತೆ. 'ಮೊದಲು ಕಲಿ ಸಿನಿಮಾ ಮಾಡ್ಬೇಕು ಅಂತಿ ಇದ್ವಿ. ಆದ್ರೆ, ಕಾರಣಾಂತರಗಳಿಂದ ಆಗಲಿಲ್ಲ. ಆಮೇಲೆ ಇದೇ ಕಾಂಬಿನೇಷನ್ ಇಟ್ಕೊಂಡು ಇನ್ನೊಂದು ಸಿನಿಮಾ ಮಾಡ್ತೀನಿ ಅಂತ ಪ್ರೇಮ್ ಡಿಸೈಡ್ ಮಾಡಿದ್ರು. ನಾನು ಈ ಚಿತ್ರ ಒಪ್ಪಿಕೊಂಡಿದ್ದೇ ಕಾಂಬಿನೇಷನ್ ಗೋಸ್ಕರ' ಎಂದು ಸುದೀಪ್ ತಿಳಿಸಿದರು.

ಪ್ರೇಮ್ ಬಗ್ಗೆ ನನಗೆ ಗೊತ್ತಿತ್ತು

ಪ್ರೇಮ್ ಬಗ್ಗೆ ನನಗೆ ಗೊತ್ತಿತ್ತು

ನಿರ್ದೇಶಕ ಪ್ರೇಮ್ ನನಗೆ ಮೊದಲಿನಿಂದಲೂ ಗೊತ್ತಿತ್ತು. ನಾಲ್ಕೈದು ವರ್ಷದ ಹಿಂದೆಯೇ ಇಂತಹದೊಂದು ಸಿನಿಮಾ ಮಾಡೋಣ ಅಂತ ಆರಂಭವಾಗಿತ್ತು. ಪರ್ಫೆಕ್ಟ್ ಸೋರಿ, ಸ್ಕ್ರಿಪ್ಟ್ ಮಾಡಿದ ಪ್ರೇಮ್ ಅದ್ಭುತವಾದ ಕಾಂಬಿನೇಷನ್ ಇಟ್ಕೊಂಡು ಸಿನಿಮಾ ಮಾಡಿದ್ದಾರೆ. ನಾನು, ಶಿವಣ್ಣ, ಅರ್ಜುನ್ ಜನ್ಯ, ಮನೋಹರ್ ಎಲ್ಲವೂ ಚೆಂದ'' ಎಂದು ಕಿಚ್ಚ ಮೆಚ್ಚಿಕೊಂಡಿದ್ದಾರೆ.

ಹೇರ್ ಸ್ಟೈಲ್ ಬಗ್ಗೆ ಹೇಳುವುದಾರೇ

ಹೇರ್ ಸ್ಟೈಲ್ ಬಗ್ಗೆ ಹೇಳುವುದಾರೇ

''ಪ್ರೇಮ್ ನನ್ನ ಬಳಿ ಏನಾದರೂ ಹೊಸದು ಮಾಡೋಣ ಅಂದ್ರು. ಆಗ ನಾನು ಟ್ರಿಮ್ ಮಾಡಿ ಈ ಹೇರ್ ಸ್ಟೈಲ್ ಮಾಡಿದೆ. ಎಲ್ಲರಿಗೂ ಇಷ್ಟ ಆಯ್ತು. ನನಗೂ ಖುಷಿ ಆಯ್ತು. ಹೇರ್ ಸ್ಟೃಲ್ ಟ್ರೆಂಡ್ ಆಗೋಕೆ ಕಾರಣ ಅಭಿಮಾನಿಗಳ ರೂಪದಲ್ಲಿರುವ ಸ್ನೇಹಿತರು. ಚಿತ್ರದಲ್ಲಿ ಮೂರು ಹೇರ್ ಸ್ಟೈಲ್ ಇದೆ. ಇಂಟರ್ ವಲ್ ಗೂ ಮುಂಚೆ ಒಂದು, ಇಂಟರ್ ವಲ್ ಆದ್ಮೇಲೆ ಒಂದು, ಕ್ಲೈಮ್ಯಾಕ್ಸ್ ಗೂ ಮುಂಚೆ ಇನ್ನೊಂದು ಇದೆ'' ಎಂದು ಗುಟ್ಟು ಬಿಟ್ಟು ಕೊಟ್ಟರು.

ಕಾಂಪಿಟೇಶನ್ ಇದ್ರೆ ಚೆಂದ

ಕಾಂಪಿಟೇಶನ್ ಇದ್ರೆ ಚೆಂದ

ಕಾಂಬಿನೇಷನ್ ಸಿನಿಮಾ ಮಾಡಿದಾಗ ಚೆಂದ ಮತ್ತು ಕಾಂಪಿಟೇಶನ್ ಎರಡು ಇರುತ್ತೆ. ಶೂಟಿಂಗ್ ಟೈಮಲ್ಲಿ ನೀನಾ ನಾನು ಎನ್ನುವ ಸಂದರ್ಭ, ಮನರಂಜನೆಯಾಗಿ ಚೆನ್ನಾಗಿರುತ್ತೆ. ಸ್ಕ್ರೀನ್ ಮೇಲೆ ಪ್ರೇಮ್ ತುಂಬಾ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ. ಇಬ್ಬರನ್ನು ಬ್ಯಾಲೆನ್ಸ್ ಮಾಡಿದ್ದಾರೆ. ಇಬ್ಬರಿಗೂ ತಮ್ಮ ವ್ಯಾಲ್ಯೂ ಕಡಿಮೆಯಾಗದ ಹಾಗೆ ಸಿನಿಮಾ ಮಾಡಿದ್ದಾರೆ'' ಎಂದು ಅಭಿನಯ ಚಕ್ರವರ್ತಿ ವಿಲನ್ ಬಗ್ಗೆ ಹೇಳಿಕೊಂಡಿದ್ದಾರೆ.

ಆಮಿ ಜಾಕ್ಸನ್ ಬಗ್ಗೆ

ಆಮಿ ಜಾಕ್ಸನ್ ಬಗ್ಗೆ

ಆಮಿ ಜಾಕ್ಸನ್ ಹಾರ್ಡ್ ವರ್ಕಿಂಗ್ ನಟಿ, ತೆರೆ ಮೇಲೆ ಚೆನ್ನಾಗಿ ಕಾಣ್ತಾರೆ. ನಮ್ಮ ದೇಶದ ಯಾವ ಭಾಷೆಯೂ ಗೊತ್ತಿಲ್ಲ. ಆದ್ರೂ ಅದನ್ನ ಬರೆದುಕೊಂಡು, ಪ್ರಾಕ್ಟೀಸ್ ಮಾಡಿ ಅಭಿನಯಿಸ್ತಾರೆ. ಅಂತಹ ನಟಿ ಜೊತೆ ಅಭಿನಯಿಸಿದ್ದು ನನಗೂ ಖುಷಿ ಕೊಟ್ಟಿದೆ' ಎಂದು ಸುದೀಪ್ ಹೇಳಿಕೊಂಡರು.

More from Filmibeat

English summary
Kannada actor Kiccha sudeep has shared his experience about the villain movie team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X