twitter
    For Quick Alerts
    ALLOW NOTIFICATIONS  
    For Daily Alerts

    ಜನರ ಜೊತೆ ಕೂತು ಸಿನಿಮಾ ನೋಡ್ತೀನಿ ಎಂದ ಸತೀಶ್ ನೀನಾಸಂ

    |

    ಅಕ್ಟೋಬರ್ 15 ರಿಂದ ಚಿತ್ರಮಂದಿರ ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಆದರೆ ಕೇವಲ 50% ಪ್ರೇಕ್ಷಕರು ಮಾತ್ರವೇ ಸಿನಿಮಾ ನೋಡಬಹುದು ಎಂದ ಷರತ್ತು ವಿಧಿಸಿದೆ.

    ಚಿತ್ರಮಂದಿರಗಳ ಪುನರ್‌ ಪ್ರಾರಂಭದ ಬಗ್ಗೆ ಸಿನಿರಂಗದ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಪ್ರೇಕ್ಷಕರು ಸಿನಿಮಾ ಮಂದಿರಕ್ಕೆ ಧೈರ್ಯದಿಂದ ಬರುತ್ತಾರೆಯೇ ಎಂಬ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

    ಆದರೆ ಈ ಕೊರೊನಾ ಆತಂಕದ ನಡುವೆ ಜನರು ಚಿತ್ರಮಂದಿರಗಳತ್ತ ಬರಲು ಸ್ಪೂರ್ತಿ ತುಂಬುವ ಯತ್ನ ಮಾಡುತ್ತಿದ್ದಾರೆ ನಟ ನೀನಾಸಂ ಸತೀಶ್.

    ಜನಗಳ ಜೊತೆ ಸಿನಿಮಾ ನೋಡ್ತೀನಿ: ಸತೀಶ್

    ಜನಗಳ ಜೊತೆ ಸಿನಿಮಾ ನೋಡ್ತೀನಿ: ಸತೀಶ್

    ಅಕ್ಟೋಬರ್ 15 ಕ್ಕೆ ಚಿತ್ರಮಂದಿರಗಳು ತೆರೆದ ನಂತರ ಬಿಡುಗಡೆ ಆಗುವ ಮೊದಲ ಸಿನಿಮಾವನ್ನು ಜನಗಳ ಜೊತೆಗೆ ಚಿತ್ರಮಂದಿರದಲ್ಲಿಯೇ ಕುಳಿತು ನೋಡುತ್ತೇನೆ ಎಂದಿದ್ದಾರೆ ನೀನಾಸಂ ಸತೀಶ್.

    ಅಸಮಾನತೆ ಇಲ್ಲದ ಸ್ಥಳ ಚಿತ್ರಮಂದಿರ: ಸತೀಶ್

    ಅಸಮಾನತೆ ಇಲ್ಲದ ಸ್ಥಳ ಚಿತ್ರಮಂದಿರ: ಸತೀಶ್

    ಜಾತಿ, ಮತ, ಹಣ, ಅಂತಸ್ತು, ಧರ್ಮ ಎಲ್ಲವೂ ಬಿಟ್ಟು ಎಲ್ಲರೂ ಒಟ್ಟುಗೂಡೋದು ಚಿತ್ರಮಂದಿರಗಳ್ಲಲಿ ಮಾತ್ರ. ಹಳೆಯ ವೈಭವವನ್ನು ಮರಳಿ ತರೋಣ, ಎಲ್ಲರೂ ಮತ್ತೆ ಒಟ್ಟುಗೂಡಿ ಸಂಭ್ರಮಿಸೋಣ, ಎಲ್ಲರೂ ಒಟ್ಟಿಗೆ ಸಿನಿಮಾ ನೋಡೋಣ ಎಂದಿದ್ದಾರೆ ನಟ ನೀನಾಸಂ ಸತೀಶ್.

    ನಿಯಮಗಳನ್ನು ಪಾಲಿಸಿ ಸಿನಿಮಾ ನೋಡೋಣ: ಸತೀಶ್

    ನಿಯಮಗಳನ್ನು ಪಾಲಿಸಿ ಸಿನಿಮಾ ನೋಡೋಣ: ಸತೀಶ್

    'ನಾನು ಸಹ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಸರ್ಕಾರವು 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಿದೆ, ಇನ್ನೂ ಕೆಲವು ನಿಯಮಗಳನ್ನು ವಿಧಿಸಿದೆ, ಎಲ್ಲ ನಿಯಮವನ್ನೂ ಪಾಲಿಸಿ ಸಿನಿಮಾ ನೋಡೋಣ, ಹಳೆಯ ಸಂಭ್ರಮವನ್ನು ಮತ್ತೆ ತರೋಣ ಎಂದಿದ್ದಾರೆ ಸತೀಶ್.

    Recommended Video

    ಇವರೇನಾ ಗಟ್ಟಿಮೇಳದ ಆದ್ಯ! | Gattimela | Adya | Filmibeat Kannada
    ಸ್ಟಾರ್ ನಟರ ಸಿನಿಮಾ ಬಿಡುಗಡೆ ಅನುಮಾನ

    ಸ್ಟಾರ್ ನಟರ ಸಿನಿಮಾ ಬಿಡುಗಡೆ ಅನುಮಾನ

    ಅಕ್ಟೋಬರ್ 15 ಕ್ಕೆ ಚಿತ್ರಮಂದಿರಗಳು ಓಪನ್ ಆಗುತ್ತಿವೆ ಆದರೆ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುವುದು ಅನುಮಾನವಾಗಿದೆ. ಸಲಗ ಸೇರಿದಂತೆ ಕೆಲವು ದೊಡ್ಡ ಸಿನಿಮಾಗಳ ನಿರ್ಮಾಪಕರು ತಾವು ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    English summary
    Actor Ninasam Satish said he will watch movie in theater in with people on October 15 when theater re open.
    Thursday, October 1, 2020, 21:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X