ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ.. ವೇಸ್ಟ್ ಪ್ರಶ್ನೆಗೆ ಉತ್ತರ ಕೊಡಲ್ಲ ಎಂದ ಶ್ರುತಿ ಹರಿಹರನ್.!

Recommended Video

ಕೊನೆಗೂ ಅರ್ಜುನ್ ಸರ್ಜಾ ಹಾಗು ವಿವಾದದ ಬಗ್ಗೆ ಮಾತನಾಡಿದ ಶ್ರುತಿ ಹರಿಹರನ್ | FILMIBEAT KANNADA

''ಒಂದು ಹೆಣ್ಣಿಗೆ ತಪ್ಪಾದರೆ, ಅವಳೇ ತಪ್ಪಿತಸ್ಥಳಾಗುತ್ತಾಳೆ. ಅಷ್ಟು ಕೆಳಗೆ ಸಮಾಜ ಬಂದಿದೆ'' - ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಕ್ಕದಲ್ಲಿ ಕುಳಿತು ನಟಿ ಶ್ರುತಿ ಹರಿಹರನ್ ಆಡಿದ ಮಾತು.

''ನಾನು ತಪ್ಪು ಮಾಡಿಲ್ಲ. ಕ್ಷಮೆ ಕೇಳಲ್ಲ'' ಅಂತ ಕಡ್ಡಿ ತುಂಡು ಮಾಡಿದ ಹಾಗೆ ಶ್ರುತಿ ಹರಿಹರನ್ ಹೇಳಿದ ಕಾರಣಕ್ಕೆ ಇಂದು ಫಿಲ್ಮ್ ಚೇಂಬರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲಗೊಂಡಿದೆ. ಇನ್ನೂ 'ಕಾಂಪ್ರೊಮೈಸ್ ಬಗ್ಗೆ ಮಾತೇ ಇಲ್ಲ' ಅಂತ ಅರ್ಜುನ್ ಸರ್ಜಾ ಕೂಡ ಹೇಳಿದ್ದಾರೆ.

ಈ ನಡುವೆ, ''ವಾಣಿಜ್ಯ ಮಂಡಳಿ ಬಗ್ಗೆ ಅಪಾರ ಗೌರವ ಇದೆ. ಅಂಬರೀಶ್ ನಾಳೆ ಬೆಳಗ್ಗೆ ಯಾವ ನಿರ್ಧಾರ ಕೈಗೊಳ್ತಾರೋ, ಅದಕ್ಕೆ ಬದ್ಧ'' ಅಂತ ಶ್ರುತಿ ಹರಿಹರನ್ ಹೇಳಿದ್ದಾರೆ. ''ಫಿಲ್ಮ್ ಚೇಂಬರ್ ಬಗ್ಗೆ ಗೌರವ ಇದ್ದಿದ್ದರೆ, ಮೊದಲು ಅಲ್ಲೇ ಬಂದು ಅರ್ಜುನ್ ಸರ್ಜಾ ವಿರುದ್ಧ ದೂರು ಕೊಡಬೇಕಿತ್ತು. ಸೋಷಿಯಲ್ ಮೀಡಿಯಾ, ಮೀಡಿಯಾ ಮುಂದೆ ಬಂದಿದ್ಯಾಕೆ?'' ಅಂತ ಪತ್ರಕರ್ತರು ಪ್ರಶ್ನೆ ಮಾಡಿದ್ದಕ್ಕೆ, ''ಇದು ವೇಸ್ಟ್ ಪ್ರಶ್ನೆ. ಅದಕ್ಕೆ ಉತ್ತರ ಕೊಡಲ್ಲ'' ಅಂತ ಎದ್ದು ಹೊರಟರು ಶ್ರುತಿ ಹರಿಹರನ್.

ಹಾಗಾದ್ರೆ, ಸಭೆ ಬಳಿಕ ಶ್ರುತಿ ಹರಿಹರನ್ ಹೇಳಿದ ಮಾತೇನು.? ನೀವೇ ಓದಿರಿ ಫೋಟೋ ಸ್ಲೈಡ್ ಗಳಲ್ಲಿ....

ಸಮಾಜ ಕೆಳಗೆ ಬಂದಿದೆ

ಸಮಾಜ ಕೆಳಗೆ ಬಂದಿದೆ

''ನಮ್ಮ ಸಮಾಜ ಇವತ್ತು ಹೇಗಾಗಿದೆ ಅಂದ್ರೆ, ಹೆಣ್ಣಿಗೆ ಯಾವುದಾದರೂ ತಪ್ಪಾದರೆ, ಅವಳೇ ತಪ್ಪಾಗುತ್ತಾಳೆ. ಅಷ್ಟು ಕೆಳಗೆ ಬಂದಿದೆ ನಮ್ಮ ಸಮಾಜ. ಎರಡು ದಿನ ಮುಂಚೆ ಕವಿತಾ ಲಂಕೇಶ್ ಹಾಗೂ ಮುನಿರತ್ನ ಫೋನ್ ಮಾಡಿ ಫಿಲ್ಮ್ ಚೇಂಬರ್ ನಲ್ಲಿ ಮೀಟೀಂಗ್ ಅರೇಂಜ್ ಮಾಡುತ್ತಿದ್ದೇವೆ ಅಂತ ಹೇಳಿದರು. ಅದಕ್ಕೆ ಇವತ್ತು ಬಂದೆ'' - ಶ್ರುತಿ ಹರಿಹರನ್, ನಟಿ

ಅಂಬರೀಶ್ ನಿರ್ಧಾರಕ್ಕೆ ಕಾಯುವೆ

ಅಂಬರೀಶ್ ನಿರ್ಧಾರಕ್ಕೆ ಕಾಯುವೆ

''ಅರ್ಜುನ್ ಸರ್ಜಾ ಲೀಗಲ್ ಆಗಿ ಹೋಗುವವರೆಗೂ ನಾನು ಹೋಗಲ್ಲ ಅಂತ ಹೇಳಿದ್ದೆ. ಹೀಗಾಗಿ ನಾನು ದೂರು ಕೊಡಲಿಲ್ಲ. ಯಾಕಂದ್ರೆ, ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರವ ಕೊಡುವೆ. ನಾಳೆ ಬೆಳಗ್ಗೆ ಹೊತ್ತಿಗೆ ಅಂಬರೀಶ್ ಹೇಳ್ತಾರೆ ನಿರ್ಧಾರ ಏನು ಅಂತ... ಅದಕ್ಕಾಗಿ ನಾನು ಕಾಯುವೆ'' - ಶ್ರುತಿ ಹರಿಹರನ್, ನಟಿ

ಆಶ್ಚರ್ಯ ಆಗಿದೆ

ಆಶ್ಚರ್ಯ ಆಗಿದೆ

''ಅರ್ಜುನ್ ಸರ್ಜಾ ಅವರು ನನ್ನ ವಿರುದ್ಧ ಎರಡು ಕೇಸ್ ಹಾಕಿದ್ದಾರೆ ಎಂಬ ಸುದ್ದಿ ಬಂತು. ನನಗೆ ಆಶ್ಚರ್ಯ ಆಗಿದೆ. I'm glad that he wants to fight it in court. ಆದರೂ, ಫಿಲ್ಮ್ ಚೇಂಬರ್ ಗೆ ಗೌರವ ಕೊಟ್ಟು ನಾಳೆ ಬೆಳಗ್ಗೆವರೆಗೂ ಕಾಯುವೆ'' - ಶ್ರುತಿ ಹರಿಹರನ್, ನಟಿ

ಕ್ಷಮೆ ಕೇಳಲ್ಲ

ಕ್ಷಮೆ ಕೇಳಲ್ಲ

''ಖಂಡಿತ ನಾನು ತಪ್ಪು ಮಾಡಿಲ್ಲ. ಕ್ಷಮೆ ಕೇಳಲ್ಲ. ಯಾಕೆ ಒಂದು ಹೆಣ್ಣನ್ನ ನಾವು ಈ ರೀತಿ ಟ್ರೀಟ್ ಮಾಡ್ತೀವಿ.? ನನಗೆ ಪ್ರಾಬ್ಲಂ ಆಗಿದೆ. ನಾನು ಯಾಕೆ ಕ್ಷಮೆ ಕೇಳಬೇಕು.?'' - ಶ್ರುತಿ ಹರಿಹರನ್, ನಟಿ

More from Filmibeat

English summary
I won't apologize Arjun Sarja says Kannada Actress Sruthi Hariharan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X