»   » ಯಶ್ ಮುಂದೆ ಮತ್ತದೇ ಪ್ರಶ್ನೆ, ಯಶ್ ಕೊಟ್ಟಿದ್ದು ಮತ್ತದೇ ಉತ್ತರ.!

ಯಶ್ ಮುಂದೆ ಮತ್ತದೇ ಪ್ರಶ್ನೆ, ಯಶ್ ಕೊಟ್ಟಿದ್ದು ಮತ್ತದೇ ಉತ್ತರ.!

Posted By:
Subscribe to Filmibeat Kannada

'ರಾಜಕೀಯಕ್ಕೆ ಬರಬೇಕು ಎಂಬ ಉದ್ದೇಶ ನನಗಿಲ್ಲ' ಎಂದು ಎಷ್ಟೇ ಬಾರಿ ನಟ ಯಶ್ ಸಾರಿ ಸಾರಿ ಹೇಳಿದರೂ, ಪದೇ ಪದೇ ಅವರ ಮುಂದೆ 'ನೀವು ರಾಜಕೀಯಕ್ಕೆ ಬರ್ತೀರಾ.?' ಎಂಬ ಪ್ರಶ್ನೆಯ ಬಾಣ ತೂರಿ ಬರುತ್ತಲೇ ಇದೆ. ನಿನ್ನೆ ಆಗಿದ್ದೂ ಅದೇ.

ರಾಜಕೀಯಕ್ಕೆ ಧುಮುಕುತ್ತಾರಾ ರಾಕಿಂಗ್ ಸ್ಟಾರ್.? ನಟ ಯಶ್ ಹೇಳಿದ್ದೇನು.?

ಕರ್ನಾಟಕದ ಸರ್ಕಾರದ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಟ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ವಿಜಯಪುರಕ್ಕೆ ತೆರಳಿದ್ದರು. ಆಗ ಮಾಧ್ಯಮಗಳು ನಟ ಯಶ್ ಮುಂದೆ ಇಟ್ಟ ಮೊದಲ ಪ್ರಶ್ನೆ 'ರಾಜಕೀಯ ಪ್ರವೇಶ'ದ ಕುರಿತು.

I won't join politics clarifies Yash

ಮತ್ತೆ ಮತ್ತೆ ಎದುರಾಗುತ್ತಿರುವ ಈ ಪ್ರಶ್ನೆಗೆ ನಟ ಯಶ್ ಮತ್ತದೇ ಉತ್ತರ ನೀಡಿದ್ದಾರೆ. ''ನಾನು ರಾಜಕೀಯಕ್ಕೆ ಬರಲ್ಲ. ಎಂ.ಬಿ.ಪಾಟೀಲ್ ರವರಿಗೂ ನಮ್ಮ ಕುಟುಂಬಕ್ಕೂ ಹಳೆಯ ಬಾಂಧವ್ಯ ಇದೆ. ಹೀಗಾಗಿ ಹುಟ್ಟುಹಬ್ಬಕ್ಕೆ ಶುಭ ಕೋರಲು ಬಂದಿದ್ದೇನೆ. ಇದರ ಹೊರತಾಗಿ ಯಾವುದೇ ರಾಜಕೀಯ ಇಲ್ಲ'' ಎಂದು ಯಶ್ ಸ್ಪಷ್ಟ ಪಡಿಸಿದ್ದಾರೆ.

ಅಲ್ಲಿಗೆ, ನಟ ಯಶ್ ರಾಜಕೀಯಕ್ಕೆ ಧುಮುಕುವುದಿಲ್ಲ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗಿದೆ.

English summary
I won't join politics clarifies Rocking Star Yash

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada