twitter
    For Quick Alerts
    ALLOW NOTIFICATIONS  
    For Daily Alerts

    ಚಂಬಲ್ ಬಿಡುಗಡೆಗೆ ಬ್ರೇಕ್ ಹಾಕಲು ಮುಂದಾದ ಡಿಕೆ ರವಿ ತಾಯಿ

    |

    ಸತೀಶ್ ನೀನಾಸಂ ಅಭಿನಯದ ಬಹು ನಿರೀಕ್ಷೆಯ ಚಿತ್ರ 'ಚಂಬಲ್' ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ವಿಘ್ನ ಎದುರಾಗಿದೆ. ಚಂಬಲ್ ಪ್ರದರ್ಶನಕ್ಕೆ ತಡೆ ಕೋರಿ ದಿವಂಗತ ಐಎಎಸ್ ಅಧಿಕಾರಿ ದಿ. ಡಿ.ಕೆ. ರವಿ ಅವರ ತಾಯಿ ಗೌರಮ್ಮ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

    ಡಿ.ಕೆ. ರವಿ ಅವರ ತಾಯಿ ಗೌರಮ್ಮ ಮತ್ತು ತಂದೆ ಕರಿಯಪ್ಪ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, 'ಚಂಬಲ್' ಚಿತ್ರದಲ್ಲಿ ಡಿ.ಕೆ. ರವಿ ಅವರ ಚಾರಿತ್ರ್ಯಹರಣ ಮಾಡುವ ಅಂಶಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಕಥೆ ಕೇಳದೆ 'ಚಂಬಲ್' ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಸೋನು.? ಕಥೆ ಕೇಳದೆ 'ಚಂಬಲ್' ಸಿನಿಮಾ ಒಪ್ಪಿಕೊಂಡಿದ್ದು ಯಾಕೆ ಸೋನು.?

    IAS officier DK Ravis Mother filed plea against Chambal release

    ಚಿತ್ರದ ಟ್ರೈಲರ್ ಮತ್ತು ಶೀರ್ಷಿಕೆ ಅವಹೇಳನಕಾರಿಯಾಗಿದ್ದು, ಸೆನ್ಸಾರ್ ಪ್ರಮಾಣ ಪತ್ರ ಹಿಂಪಡೆಯಲು ನಿರ್ದೇಶನ ನೀಡಬೇಕು, ಚಿತ್ರದಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರನ್ನು ಚಿತ್ರದಲ್ಲಿ ಕೆಟ್ಟ ವ್ಯಕ್ತಿಯನ್ನಾಗಿ ಬಿಂಬಿಸಲಾಗಿದೆ, ಇದೆಲ್ಲವೂ ಬದಲಾಗಬೇಕು, ಚಿತ್ರ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಗೌರಮ್ಮ ಕೋರಿದ್ದಾರೆ.

    'ಚಂಬಲ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಡಿ.ಕೆ.ರವಿ ತಾಯಿ.!'ಚಂಬಲ್' ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಡಿ.ಕೆ.ರವಿ ತಾಯಿ.!

    ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರ ಪೀಠ, ಕೇಂದ್ರ ಸಾರ್ವಜನಿಕ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಸೆನ್ಸಾರ್ ಮಂಡಳಿ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡದವರಿಗೆ ನೋಟಿಸ್ ಜಾರಿ ಮಾಡಿ ಫೆಬ್ರವರಿ 21 ಕ್ಕೆ ವಿಚಾರಣೆ ಮುಂದೂಡಲಾಗಿದೆ.

    IAS officier DK Ravis Mother filed plea against Chambal release

    'ಚಂಬಲ್' ಇದು ಡಿಕೆ ರವಿ ಲೈಫ್ ಸ್ಟೋರಿ ಚಿತ್ರವೇ? 'ಚಂಬಲ್' ಇದು ಡಿಕೆ ರವಿ ಲೈಫ್ ಸ್ಟೋರಿ ಚಿತ್ರವೇ?

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಜಾಕಬ್ ವರ್ಗೀಸ್ ನಿರ್ದೇಶನದ ಚಂಬಲ್ ಚಿತ್ರವು ಫೆಬ್ರವರಿ 23ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೂ ಡಿಕೆ ರವಿ ಪೋಷಕರು ದೂರು ನೀಡಿದ್ದಾರೆ.

    ಮಾರ್ಚ್ 16. 2015 ರಲ್ಲಿ ತಮ್ಮ ಬೆಂಗಳೂರಿನ ಫ್ಲಾಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಡಿಕೆ ರವಿಯವರ ಮೃತದೇಹ ಸಿಕ್ಕಿತ್ತು. ಅದರೊಂದಿಗೆ ರಾಜ್ಯದಲ್ಲಷ್ಟೇ ಅಲ್ಲದೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಾಜ್ಯದ ರಾಜಕೀಯ ಮುಖಂಡರ ವಿರುದ್ಧ ಕೆಲವು ಆರೋಪಗಳೂ ಕೇಳಿ ಬಂದಿದ್ದವು. ಡಿಕೆ ರವಿಯವರು ದಕ್ಷ ಅಧಿಕಾರಿಯಾಗಿದ್ದರು. ಕೊಲಾರ, ಬೆಂಗಳೂರು ಇತರೆಡೆ ಜನಾನುರಾಗಿಯಾಗಿ ಅನೇಕ ಕೆಲಸಗಳನ್ನು ಮಾಡಿದ್ದರು. ಈಗ ಸಿಬಿಐ ನೀಡಿದ ವರದಿ ಜನರಲ್ಲಿ ಗೊಂದಲವನ್ನು ಮೂಡಿಸಿದೆ.

    English summary
    Deceased IAS officier DK Ravi's mother Gowramma and Father Kariyappa has approached Karnataka High court against the release of Kannada movie Chambal starring Ninasam Satish.
    Wednesday, February 20, 2019, 13:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X