»   » ತೆರೆಗೆ ಬರಲು ಸಜ್ಜಾಗಿದೆ ಹೊಸಬರ 'ಇದಂ ಪ್ರೇಮಂ ಜೀವನಂ'

ತೆರೆಗೆ ಬರಲು ಸಜ್ಜಾಗಿದೆ ಹೊಸಬರ 'ಇದಂ ಪ್ರೇಮಂ ಜೀವನಂ'

Posted By:
Subscribe to Filmibeat Kannada

ಟೈಟಲ್ ನಿಂದಲೇ ಹೆಚ್ಚು ಗಮನ ಸೆಳೆಯುತ್ತಿರುವ 'ಇದಂ ಪ್ರೇಮಂ ಜೀವನಂ' ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ. ಈ ಟೈಟಲ್ ಕೇಳಿದ ತಕ್ಷಣ ಇದ್ಯಾವುದೋ ತೆಲುಗು ಸಿನಿಮಾ ಇರಬೇಕು ಅಂದುಕೊಂಡವರೇ ಹೆಚ್ಚು. ಆದ್ರೆ, ಇದು ಅಪ್ಪಟ ಕನ್ನಡ ಸಿನಿಮಾ.

ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಎಂಬುದನ್ನ ಹೊಸ ರೀತಿಯಲ್ಲಿ ಹೇಳಲು ಹೊರಟಿದೆ ಈ ಚಿತ್ರತಂಡ. ಜಗತ್ತಿನಲ್ಲಿ ತಂದೆ-ತಾಯಿಗಿಂತ ದೊಡ್ಡ ಪ್ರೀತಿ ಬೇರೆ ಯಾವುದು ಇಲ್ಲ ಎಂಬುದನ್ನ ಕಮರ್ಷಿಯಲ್ ಆಗಿ ತೋರಿಸಲು ಮುಂದಾಗಿದೆ.

ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು ಪ್ರೇಕ್ಷಕರ ಗಮನ ಸೆಳೆದಿದೆ. ಎಲ್ಲ ಹೊಸ ಕಲಾವಿದರೇ ಸೇರಿ ಮಾಡಿರುವ ಈ ಚಿತ್ರದಲ್ಲಿ ಹೊಸ ಭರವಸೆ ಮೂಡಿದೆ. ಫ್ಯಾಮಿಲಿ, ಫ್ರೆಂಡ್ಸ್, ಜರ್ನಿ, ಲವ್, ಬ್ರೇಕ್ ಅಪ್, ಆಕ್ಷನ್.....ಹೀಗೆ ಈ ಎಲ್ಲ ಅಂಶಗಳ ಜೊತೆಗೆ ಸಮಾಜಕ್ಕೊಂದು ಸಂದೇಶ ನೀಡಲಿದೆಯಂತೆ 'ಇದಂ ಪ್ರೇಮಂ ಜೀವನಂ'

idam premam jeevanam ready to release

ಈ ಹಿಂದೆ ಗಣಿತ ಉಪನಾಸ್ಯಕರಾಗಿದ್ದ ರಾಘವಾಂಕ ಪ್ರಭು ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸನತ್, ಶನಾಯ ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಅವಿನಾಶ್ ಮತ್ತು ಮಾಳವಿಕ ಚಿತ್ರದ ತಂದೆ-ತಾಯಿ ಪಾತ್ರವನ್ನ ನಿರ್ವಹಿಸಿದ್ದಾರೆ.

idam premam jeevanam ready to release

ಇನ್ನುಳಿದಂತೆ ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ನವೀನ್ ಪಂಚಾಕ್ಷರಿ ಛಾಯಾಗ್ರಹಣ ಚಿತ್ರಕ್ಕಿದೆ. ಕೆ.ಆರ್.ಜೆ ಸ್ಟುಡಿಯೋ ಕಾರ್ತಿಕ್ ಗೌಡ ಅವರು ಈ ಚಿತ್ರವನ್ನ ರಾಜ್ಯಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. ರಿಯೋನೋ ಪ್ರೊಡಕ್ಷನ್ ಹೌಸ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದ್ದು, ಗೋಕುಲ್ ಎನ್.ಕೆ, ನವೀನ್ ಕುಮಾರ್ ಜೆಪಿ ಬಂಡವಾಳ ಹಾಕಿದ್ದಾರೆ.

English summary
Raghavanka prabhu directional kannada movie idam premam jeevanam is ready to release. the movie features Sanath, Avinash, Malavika. Music Composed by Judah Sandhy, Produced by Gokul N K, Naveen Kumar J P Under the banner Riona Productions.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada