twitter
    For Quick Alerts
    ALLOW NOTIFICATIONS  
    For Daily Alerts

    ಫಿಲಂಫೇರ್ ದಕ್ಷಿಣ ಪ್ರಶಸ್ತಿ ಸಂಪೂರ್ಣ ಪಟ್ಟಿ

    By Mahesh
    |

    ಹೈದರಾಬಾದಿನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ದಕ್ಷಿಣ ಭಾರತದ ಸಿನಿತಾರೆಯರಿಗೆ ಐಡಿಯಾ 60ನೇ ಫಿಲಂಫೇರ್ ಪ್ರಶಸ್ತಿ 2012 ಪ್ರದಾನ ಮಾಡಲಾಯಿತು. ನಿರೀಕ್ಷೆಯಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಚಿತ್ರರಂಗದ ಹಿರಿಯ-ಕಿರಿಯ ನಟ ನಟಿಯರು ಸಮಾರಂಭಕ್ಕೆ ಆಗಮಿಸಿದ್ದರು. ಶ್ರುತಿ ಹಾಸನ್, ನವ್ಯಾ ನಾಯರ್, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವಾರು ಸಿನಿತಾರೆಯರು ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.

    ನಟ ಧನುಷ್ ಅವರು '3' ಚಿತ್ರದ ನಟನೆಗಾಗಿ ಹಾಗೂ ಅದೇ ಚಿತ್ರದ ಕೊಲೆವರಿ ಡಿ ಗಾಯನಕ್ಕಾಗಿ ಪ್ರಶಸ್ತಿ ಬಾಚಿಕೊಂಡರು. ತಮಿಳು ಹಾಗೂ ತೆಲುಗು ಎರಡರಲ್ಲೂ ಶ್ರೇಷ್ಠ ನಟಿ ಪ್ರಶಸ್ತಿ ಸಮಂತಾ ಪಾಲಾಯಿತು. ತೆಲುಗಿನ 'ಈಗ' ಚಿತ್ರದ ನಿರ್ದೇಶನಕ್ಕಾಗಿ ರಾಜಮೌಳಿ ಮತ್ತೊಮ್ಮೆ ಫಿಲಂಫೇರ್ ಪಡೆದರೆ, ಅದೇ ಚಿತ್ರದ ವಿಲನ್ ಪಾತ್ರಧಾರಿ ಕನ್ನಡಿಗ ಕಿಚ್ಚ ಸುದೀಪ್ ಅವರಿಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಒಲಿದಿದೆ. [ಇದನ್ನೂ ಓದಿ : ಬರ್ಫಿ, ಕಹಾನಿಗೆ ಫಿಲಂಫೇರ್ ಪ್ರಶಸ್ತಿಗಳ ಸುರಿಮಳೆ]

    ಇದುವರೆಗೂ ಈ ಪ್ರಶಸ್ತಿಯನ್ನು ಕಮಲ್ ಹಾಸನ್ 17 ಸಲ ಪಡೆದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರಿಗೆ 8 ಸಲ ಫಿಲಂಫೇರ್ ಕೃಷ್ಣ ಸುಂದರಿ ಒಲಿದಿದ್ದಾಳೆ. ಇನ್ನು ಲಕ್ಷ್ಮಿ, ಸರಿತಾ, ಸುಹಾಸಿನಿ ಹಾಗೂ ರೇವತಿ ಅವರಿಗೆ ತಲಾ ಆರು ಬಾರಿ ಪ್ರಶಸ್ತಿ ಬಂದಿದೆ. ದಕ್ಷಿಣ ವಿಭಾಗ ಎಲ್ಲಾ ಭಾಷೆಗಳ ಚಿತ್ರಗಳ ಪ್ರಶಸ್ತಿ ವಿವರ ವಿವರ ಚಿತ್ರಸರಣಿಯಲ್ಲಿ ನೋಡಿ

    ದರ್ಶನ್, ಪ್ರಿಯಾಮಣಿಗೆ ಫಿಲಂಫೇರ್ ಪ್ರಶಸ್ತಿ ಗರಿ

    ಅತ್ಯುತ್ತಮ ಚಿತ್ರ ಪ್ರಶಸ್ತಿ

    ಅತ್ಯುತ್ತಮ ಚಿತ್ರ ಪ್ರಶಸ್ತಿ

    ಕನ್ನಡ: ಆನಂದ ಅಪ್ಪುಗೋಳ್ ನಿರ್ಮಾಣದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'
    ಮಲೆಯಾಳಂ: ಅಯಾಲುಮ್ ಜನ್ಮ ಥಾಮ್ಮಿಲ್
    ತಮಿಳು: ವಳಕ್ಕು ಎನ್ 18/9
    ತೆಲುಗು: ಈಗ

    ಶ್ರೇಷ್ಠ ನಿರ್ದೇಶಕ

    ಶ್ರೇಷ್ಠ ನಿರ್ದೇಶಕ

    ಕನ್ನಡ: ವಿಜಯ ಪ್ರಸಾದ್ (ಸಿದ್ಲಿಂಗು)
    ಮಲೆಯಾಳಂ: ಲಾಲ್ ಜೋಸ್ (ಅಯಾಲುಮ್ ಜನ್ಮ ಥಾಮ್ಮಿಲ್)
    ತಮಿಳು: ಬಾಲಾಜಿ ಶಕ್ತಿವೇಲ್ (ವಳಕ್ಕು ಎನ್ 18/9)
    ತೆಲುಗು: ರಾಜಮೌಳಿ (ಈಗ)

    ಶ್ರೇಷ್ಠ ನಟ

    ಶ್ರೇಷ್ಠ ನಟ

    ಕನ್ನಡ: ದರ್ಶನ್ ತೂಗುದೀಪ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)
    ಮಲೆಯಾಳಂ: ಫಹದ್ ಫಾಜೀಲ್(22 ಫೀಮೆಲ್ ಕೊಟ್ಟಾಯಂ)
    ತಮಿಳು: ಧನುಷ್ (3)
    ತೆಲುಗು: ಪವನ್ ಕಲ್ಯಾಣ್ (ಗಬ್ಬರ್ ಸಿಂಗ್)

    ಶ್ರೇಷ್ಠ ನಟಿ

    ಶ್ರೇಷ್ಠ ನಟಿ

    ಕನ್ನಡ: ಪ್ರಿಯಾಮಣಿ(ಚಾರುಲತಾ)
    ಮಲೆಯಾಳಂ: ರಿಮಾ ಕಲ್ಲಿಂಗಲ್ (22 ಫೀಮೆಲ್ ಕೊಟ್ಟಾಯಂ)
    ತಮಿಳು: ಸಮಂತಾ (ನೀಥಾನೆ ಎನ್ ಪೊವಸಂಥಾನ್ )
    ತೆಲುಗು: ಸಮಂತಾ (ಈಗ)

    ಪೋಷಕ ನಟ

    ಪೋಷಕ ನಟ

    ಕನ್ನಡ: ಅತುಲ್ ಕುಲಕರ್ಣಿ(ಎದೆಗಾರಿಕೆ)
    ಮಲೆಯಾಳಂ: ಬಿಜು ಮೆನನ್ (ಆರ್ಡಿನರಿ)
    ತಮಿಳು: ಥಂಬಿರಾಮಯ್ಯ (ಕುಮ್ಕಿ)
    ತೆಲುಗು: ಸುದೀಪ್ (ಈಗ)

    ಪೋಷಕ ನಟಿ

    ಪೋಷಕ ನಟಿ

    ಕನ್ನಡ: ಸುಮನ್ ರಂಗನಾಥನ್ (ಸಿದ್ಲಿಂಗು)
    ಮಲೆಯಾಳಂ: ಗೌತಮಿ ನಾಯರ್ (ಡೈಮಂಡ್ ನೆಕ್ಲೇಸ್) ಚಿತ್ರದಲ್ಲಿರುವ ನಟಿ
    ತಮಿಳು: ಶರಣ್ಯ ಪೊಣ್ ವಣ್ಣನ್ (ನೀರ್ ಪಾರ್ವವೈ)
    ತೆಲುಗು: ಅಮಲಾ ಅಕ್ಕಿನೇನಿ (ಲೈಫ್ ಇಸ್ ಬ್ಯೂಟಿಫುಲ್)

    ಸಂಗೀತ ನಿರ್ದೇಶಕ

    ಸಂಗೀತ ನಿರ್ದೇಶಕ

    ಕನ್ನಡ: ವಿ. ಹರಿಕೃಷ್ಣ(ಡ್ರಾಮಾ)
    ಮಲೆಯಾಳಂ: ವಿದ್ಯಾಸಾಗರ್ (ಡೈಮಂಡ್ ನೆಕ್ಲೇಸ್)
    ತಮಿಳು: ಡಿ. ಇಮ್ಮನ್ (ಕುಮ್ಕಿ)
    ತೆಲುಗು: ದೇವಿ ಶ್ರೀ ಪ್ರಸಾದ್ (ಪವನ್ ಕಲ್ಯಾಣ್'ಸ್ ಗಬ್ಬರ್ ಸಿಂಗ್) ಚಿತ್ರದಲ್ಲಿರುವವರು

    ಶ್ರೇಷ್ಠ ಗೀತ ಸಾಹಿತ್ಯ

    ಶ್ರೇಷ್ಠ ಗೀತ ಸಾಹಿತ್ಯ

    ಕನ್ನಡ: ಯೋಗರಾಜ್ ಭಟ್ (ಡ್ರಾಮಾ ಚಿತ್ರ: ಬೊಂಬೆ ಆಡ್ಸೊನೊ..) ಚಿತ್ರದಲ್ಲಿರುವವರು
    ಮಲೆಯಾಳಂ: ರಫೀಕ್ ಅಹ್ಮದ್(ಸ್ಪಿರಿಟ್: ಮರಣಮೆಥುನ್ನಾ ನೆರಥು..)
    ತಮಿಳು: ಯುಗಭಾರತಿ (ಕುಮ್ಕಿ: ಸೊಲಿಥಾಲೆ..)
    ತೆಲುಗು: ಅನಂತ ಶ್ರೀರಾಮ್ (ಯೆಟೋ ವೆಲ್ಲಿಪೊಂಯಿಂದಿ ಮನಸು : ಯೆಧಿ ಯೆಧಿ)

    ಶ್ರೇಷ್ಠ ಗಾಯಕ

    ಶ್ರೇಷ್ಠ ಗಾಯಕ

    ಕನ್ನಡ: ಅವಿನಾಶ್ ಛೆಬ್ರಿ (ಸಿದ್ಲಿಂಗು ಚಿತ್ರದ ಎಲ್ಲೆಲ್ಲೊ ಓಡುವ ಮನಸೆ...)
    ಮಲೆಯಾಳಂ: ವಿಜಯ್ ಯೇಸುದಾಸ್ (ಸ್ಪಿರಿಟ್ : ಮಳಕೊಂಡುಮಾಥಿರಂ...)
    ತಮಿಳು: ಧನುಷ್ (3: ವೈ ದಿಸ್ ಕೊಲೆವರಿ ಡಿ...) ಚಿತ್ರದಲ್ಲಿ
    ತೆಲುಗು: ವಡ್ಡೆಪಲ್ಲಿ ಶ್ರೀನಿವಾಸ್ (ಪವನ್ ಕಲ್ಯಾಣ್ ಗಬ್ಬರ್ ಸಿಂಗ್: ಪಿಲ್ಲ)

    ಶ್ರೇಷ್ಠ ಗಾಯಕಿ

    ಶ್ರೇಷ್ಠ ಗಾಯಕಿ

    ಕನ್ನಡ: ಇಂದು ನಾಗರಾಜ್ (ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ )
    ಮಲೆಯಾಳಂ: ಶ್ವೇತ (ಅರಿಕೆ: ಶ್ಯಾಮ ಹರೇ..)
    ತಮಿಳು: ಎನ್ ಎಸ್ ಕೆ ರಮ್ಯ (ನೀಥಾನೆ ಎನ್ ಪೊನ್ ವಸಂತಂ: ಶತ್ರು ಮುನ್ಬು...)
    ತೆಲುಗು: ಸುಚಿತ್ರಾ (ಬಿಸಿನೆಸ್ ಮೆನ್ : ಸರೋಚ್ಚಾರು..) ಚಿತ್ರದಲ್ಲಿ

    ತಾಂತ್ರಿಕ ಪ್ರಶಸ್ತಿಗಳು

    ತಾಂತ್ರಿಕ ಪ್ರಶಸ್ತಿಗಳು

    ಶ್ರೇಷ್ಠ ಛಾಯಾಗ್ರಾಹಕ : ಛೊಟಾ ಕೆ ನಾಯ್ಡು (ಢಮರುಗಂ, ತೆಲುಗು)
    ಶ್ರೇಷ್ಠ ನೃತ್ಯ ನಿರ್ದೇಶನ: ಜಾನಿ (ದಿಲ್ಲಕು ದಿಲ್ಲಕು, ರಚ್ಚಾ)
    ಶ್ರೇಷ್ಠ VFX : ಈಗ, ತೆಲುಗು

    ಜೀವಮಾನದ ಶ್ರೇಷ್ಠ ಪ್ರಶಸ್ತಿ

    ಜೀವಮಾನದ ಶ್ರೇಷ್ಠ ಪ್ರಶಸ್ತಿ

    * ಬಹುಭಾಷಾ ಗಾಯಕಿ ವಾಣಿ ಜಯರಾಂ
    * ತೆಲುಗು ನಿರ್ದೇಶಕ ಬಾಪು

    Debut ಪ್ರಶಸ್ತಿಗಳು

    Debut ಪ್ರಶಸ್ತಿಗಳು

    * ನಟ : ಡಿ ಸಲ್ಮಾನ್ (ಸೆಕೆಂಡ್ ಶೋ, ಮಲೆಯಾಳಂ)
    * ನಟ: ಉದಯನಿಧಿ ಸ್ಟಾಲಿನ್ (ಒರು ಕಾಲ್ ಒರು ಕನ್ನಾಡಿ, ತಮಿಳು)

    * ನಟಿ: ಶ್ವೇತಾ ಶ್ರೀವಾಸ್ತವ್ ( ಸೈಬರ್ ಯುಗದೋಳ್ ನವಯುಗ ಪ್ರೇಮ ಕಾವ್ಯಂ, ಕನ್ನಡ)
    * ನಟಿ: ಲಕ್ಷ್ಮಿ ಮೆನನ್ (ಸುಂದರ ಪಾಂಡ್ಯನ್, ತಮಿಳು)

    ಪ್ರಶಸ್ತಿ ಬಗ್ಗೆ ಒಂದಿಷ್ಟು

    ಪ್ರಶಸ್ತಿ ಬಗ್ಗೆ ಒಂದಿಷ್ಟು

    ಫಿಲಂಫೇರ್ ಪ್ರಶಸ್ತಿಗಳನ್ನು ದಿ ಟೈಂಸ್ ಗ್ರೂಪ್ ವಿತರಿಸುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜನಮತ ಸಂಗ್ರಹ ಹಾಗೂ ಪರಿಣಿತರ ಸಮಿತಿ ಸದಸ್ಯರು ಪ್ರಶಸ್ತಿಗೆ ಅರ್ಹರಾದ ಕಲಾವಿದರು ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡುತ್ತಾರೆ.

    ಭಾರತೀಯ ಚಿತ್ರೋದ್ಯಮದಲ್ಲಿ ಫಿಲಂಫೇರ್ ಪ್ರಶಸ್ತಿಗಳನ್ನು ಆಸ್ಕರ್ ಪ್ರಶಸ್ತಿಗೆ ಸಮಾನವೆಂದೇ ಪರಿಗಣಿಸಲಾಗುತ್ತದೆ. ಇನ್ನು ಪ್ರಶಸ್ತಿಗಾಗಿ ನೀಡುವ "ಬ್ಲ್ಯಾಕ್ ಲೇಡಿ" ಕಂಚಿನ ಪ್ರತಿಮೆ 46.5 ಸೆಂ.ಮೀ ಎತ್ತರ ಹಾಗೂ ಸರಿಸುಮಾರು 5 ಕೆ.ಜಿ ತೂಕವಿರುತ್ತದೆ.

    English summary
    Here is the A complete list of winners at the 60th Idea Filmfare Awards (South). Actor Dhanush was the man of the evening as he fetched two awards- Best Actor (Tamil) for '3' and Best Playback Singer Male for 'Kolaveri Di'. Actress Samantha won the Best Actress award in both Tamil and Telugu. Sudeep won the Best Actor In A Supporting Role (Telugu) for the same film.
    Sunday, July 21, 2013, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X