'ಇದ್ರೇ ನೆಮ್ದಿಯಾಗಿರ್ಬೇಕ್' ಹವಾ; ಪೇಯ್ಡ್ ವೀವ್ಸ್, ಫೇಕ್ ಲೈಕ್ಸ್ ಅಂದವರು ಎಲ್ಲಿ ಈಗ?

'ಡೆವಿಲ್' ಚಿತ್ರದ ಫಸ್ಟ್ ಸಾಂಗ್ 'ಇದ್ರೇ ನೆಮ್ದಿಯಾಗಿರ್ಬೇಕ್' ಆರ್ಭಟ ಮುಂದುವರೆದಿದೆ. ಆಗಸ್ಟ್ 24ಕ್ಕೆ ರಿಲೀಸ್ ಆಗಿದ್ದ ಲಿರಿಕಲ್ ವೀಡಿಯೋ ಸಾಂಗ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಸಾಂಗ್ 24 ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. ಕೆಲವರೇ ಪೇಯ್ಡ್ ವೀವ್ಸ್, ಲೈಕ್ಸ್ ಅಂತೆಲ್ಲಾ ಕಾಮೆಂಟ್ ಮಾಡಿದ್ದರು.

ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಅನಿರುದ್ಧ ಶಾಸ್ತ್ರೀ ಸಾಹಿತ್ಯ ಬರೆದಿದ್ದರು. ದೀಪಕ್ ಬ್ಲೂ ಎಂಬುವವರು ಹಾಡಿದ್ದರು. ಸ್ಟೈಲಿಶ್ ಅವತಾರದಲ್ಲಿ ದರ್ಶನ್ ಮಿಂಚಿದ್ದಾರೆ. ಸಿಂಪಲ್ ಸ್ಟೆಪ್ಸ್ ಹಾಕಿ ಹುಬ್ಬೇರಿಸಿದ್ದಾರೆ. ಸಂತು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಬಹಳ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಲಾಗಿದೆ. 15 ದಿನ ಕಳೆದರೂ ಸಾಂಗ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.

Idre Nemdiyaag Irbek from Darshan s Devil Creates Buzz Dominates Music Charts

ಗಣೇಶ ಮೆರವಣಿಗೆ, ಆರ್ಕೆಸ್ಟ್ರಾ ಎಲ್ಲೆಲ್ಲೂ 'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ಮಾರ್ದನಿಸುತ್ತಿದೆ. ಇನ್ನು ಕಿರುತೆರೆ ತಾರೆಯರು ಕೂಡ ರೀಲ್ಸ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಅಭಿಮಾನಿಗಳಂತೂ ಕೇಳುವುದೇ ಬೇಡ. ಸದ್ಯ ಯೂಟ್ಯೂವ್, ಅಮೇಜಾನ್ ಪ್ರೈಂ ಮ್ಯೂಸಿಕ್ ಹಾಗೂ ಸ್ಪೋಟಿಪೈನಲ್ಲಿ ಸಾಂಗ್ ಟ್ರೆಂಡಿಂಗ್‌ನಲ್ಲಿದೆ.

ಮೊದಲ ಬಾರಿ ಸಾಂಗ್ ಕೇಳಿದಾಗ ದರ್ಶನ್ ಅಭಿಮಾನಿಗಳಿಗೂ ಬೇಸರವಾಗಿತ್ತು. ಕೇಳ್ತಾ ಕೇಳ್ತಾ ಇಷ್ಟವಾಗ್ತಿದೆ. ಪದೇ ಪದೇ ಕೇಳ್ತಿದ್ಧಾರೆ. ಹುಕ್ ಸ್ಟೆಪ್‌ಗೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರುವಂತಾಗಿದೆ. ಆದರೂ 'ಡೆವಿಲ್' ಸಿನಿಮಾ ಕೆಲಸಗಳು ನಡೀತಿದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರುವುದು ಖಚಿತವಾಗಿದೆ. ಅಷ್ಟರಲ್ಲಿ ದರ್ಶನ್ ಜೈಲಿನಿಂದ ಹೊರಬರುತ್ತಾರಾ ಎನ್ನುವ ಆಶಾಭಾವನೆಯಲ್ಲಿ ಅಭಿಮಾನಿಗಳಿದ್ದಾರೆ.

Idre Nemdiyaag Irbek from Darshan s Devil Creates Buzz Dominates Music Charts

ಅಜನೀಶ್ ಲೋಕನಾಥ್ ಇದೇ ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ದರ್ಶನ್ ದೊಡ್ಡ ಅಭಿಮಾನಿ ಅನಿರುದ್ಧ ಶಾಸ್ತ್ರಿ. ಹಾಗಾಗಿ ನೆಚ್ಚಿನ ನಟನನ್ನು ತಮ್ಮ ಸಾಹಿತ್ಯದಲ್ಲಿ ಬಣ್ಣಿಸುವ ಪ್ರಯತ್ನ ಮಾಡಿದ್ದಾರೆ. ತಮಳು, ತೆಲುಗು ಹಾಡುಗಳನ್ನು ಹೆಚ್ಚು ಹಾಡಿ ಗಮನ ಸೆಳೆದಿದ್ದ ದೀಪಕ್ ಕನ್ನಡದ ದೊಡ್ಡ ಚಿತ್ರಕ್ಕೆ ಹಾಡುವ ಅವಕಾಶ ಸಿಕ್ಕಿದೆ.

ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರು ಸಿನಿಮಾ 'ಡೆವಿಲ್'. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ರೇಣುಕಾಸ್ವಾಮಿ ಪ್ರಕರಣದ ಹಿನ್ನೆಲೆಯಲ್ಲಿ ತಡವಾಯಿತು. ದರ್ಶನ್ ಕಳೆದ ವರ್ಷ ಜೂನ್‌ ತಿಂಗಳಲ್ಲಿ ಜೈಲು ಸೇರುವ ಮುನ್ನ ಒಂದು ಶೆಡ್ಯೂಲ್ ಚಿತ್ರೀಕರಣ ಮುಗಿದಿತ್ತು. ಅಕ್ಟೋಬರ್‌ ಕೊನೆಗೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಕೆಲ ತಿಂಗಳು ವಿಶ್ರಾಂತಿ ಪಡೆದಿದ್ದರು.

ಮಾರ್ಚ್‌ ತಿಂಗಳಲ್ಲಿ ಮತ್ತೆ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಮೈಸೂರು ಹಾಗೂ ರಾಜಸ್ಥಾನದಲ್ಲಿ ಒಂದಷ್ಟು ದಿನ ಚಿತ್ರೀಕರಣ ನಡೀತು. ಬಳಿಕ ಥಾಯ್ಲೆಂಡ್‌ನಲ್ಲಿ ಒಂದು ಸಾಂಗ್ ಶೂಟ್ ಮಾಡಿ ಬಂದಿದ್ದರು. ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಸದ್ಯ 'ಇದ್ರೇ ನೆಮ್ದಿಯಾಗಿರ್ಬೇಕ್' ಸಾಂಗ್ ಅನ್ನು ಅಭಿಮಾನಿಗಳು ಲೂಪ್ ಮೋಡ್‌ನಲ್ಲಿ ಕೇಳುತ್ತಿದ್ದಾರೆ. ಸಾಂಗ್ ಟ್ರೆಂಡಿಂಗ್‌ನಲ್ಲಿದೆ. ಪೇಯ್ಡ್ ವೀವ್ಸ್, ಫೇಕ್ ಲೈಕ್ಸ್ ಎಂದವರು ಈಗ ಎಲ್ಲಿದ್ದೀರಪ್ಪಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು 3 ಹಾಡುಗಳು 'ಡೆವಿಲ್' ಚಿತ್ರದಲ್ಲಿದೆ. ದಸರಾ ಹಬ್ಬಕ್ಕೆ ಮತ್ತೊಂದು ಲಿರಿಕಲ್ ವೀಡಿಯೋ ಹೊರ ಬರುವ ನಿರೀಕ್ಷೆಯಿದೆ. 4 ಹಾಡುಗಳಿಗೆ ಸಂತು ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದು ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಅವಿನಾಶ್, ಚಂದನ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಭಿನ್ನ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ದರ್ಶನ್ ನಟಿಸಿದ್ದು ಮುಖ್ಯಮಂತ್ರಿ ಅವತಾರದಲ್ಲೂ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

More from Filmibeat

English summary
Idre Nemdiagirbek Lyrical Video From Devil Continues to Rule the Internet
Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X