ಇನ್ನು ಎರಡು ತಿಂಗಳು ಸುಮ್ಮನಿದ್ದಿದ್ರೆ ಜಾಮೀನು ಸಿಗುತ್ತಿತ್ತಾ? ಹೈಕೋರ್ಟ್‌ಗೆ ಹೋದರೂ ಕಷ್ಟನಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ರೇಣುಕಾಸ್ವಾಮಿ ಪ್ರಕರಣ ಈ ಮಟ್ಟಿಗೆ ಕಾಡಬಹುದು ಅನ್ನೋ ಅಂದಾಜು ಬಹುಶ: ಇರಲಿಕ್ಕೆ ಇಲ್ಲ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಕೊಟ್ಟು ಯಶಸ್ಸಿನ ತುತ್ತ ತುದಿಯಲ್ಲಿದ್ದ ದರ್ಶನ್ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಹೊರಗಡೆ ಅಭಿಮಾನಿಗಳು ತಮ್ಮ ನಟನಿಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣ ಆಗಿದೆ. ಇಂದು (ಅಕ್ಟೋಬರ್ 14) ಜಾಮೀನು ಸಿಗಬಹುದು ಎಂದು ಕಾದು ಕೂತಿದ್ದ ಫ್ಯಾನ್ಸ್‌ಗೆ ಮತ್ತೆ ನಿರಾಸೆಯಾಗಿದೆ.
ದರ್ಶನ್ ಜಾಮೀನು ವಜಾ ಆಗುತ್ತಿದ್ದಂತೆ ಚರ್ಚೆಗಳು ಶುರುವಾಗಿದೆ. ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಹೆಚ್ಚು ಕಡಿಮೆ ನಾಲ್ಕು ತಿಂಗಳು ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಹೀಗಾಗಿ ಇಂದು ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಭರವಸೆ ದರ್ಶನ್ ಅಭಿಮಾನಿಗಳಲ್ಲಿ ಇತ್ತು. ಆದರೆ, ಅದೆಲ್ಲವೂ ಈಗ ತಲೆ ಕೆಳಗಾಗಿದೆ.

ಹಾಗಿದ್ದರೆ, ದರ್ಶನ್‌ಗೆ ಈ ಪ್ರಕರಣದಲ್ಲಿ ಜಾಮೀನು ಸಿಗೋದೇ ಇಲ್ವಾ? ಯಾವ ಸಿಗುತ್ತೆ? ಇನ್ನೂ ಸ್ವಲ್ಪ ದಿನ ದರ್ಶನ್ ತಾಳ್ಮೆಯಿಂದ ಇರಬೇಕಿತ್ತಾ? ಜಾಮೀನು ವಜಾ ಆದರ ಬೆನ್ನಲ್ಲೇ ಹಲವು ಅಭಿಪ್ರಾಯಗಳು ವಕೀಲರ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇಂತಹ ಪ್ರಕರಣದಲ್ಲಿ ದರ್ಶನ್ ಏನು ಮಾಡಬಹುದಿತ್ತು? ಅನ್ನೋ ಸಲಹೆಗಳನ್ನು ನೀಡುತ್ತಿದ್ದಾರೆ. ಅದರ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿದೆ.
ನಾಡ ಹಬ್ಬ ದಸರಾದೊಳಗೆ ದರ್ಶನ್‌ಗೆ ಬೇಲ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಹಾಗಾಗಲಿಲ್ಲ. ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರು ಪ್ರಬಲವಾಗಿ ವಾದ ಮಂಡಿಸಿದರೂ ದರ್ಶನ್‌ಗೆ ಬೇಲ್ ಸಿಗಲಿಲ್ಲ. ದರ್ಶನ್ ವಿರುದ್ಧ ಪೊಲೀಸರಿಗೆ ಪ್ರಬಲ ಸಾಕ್ಷಿಗಳು ಸಿಕ್ಕಿವೆ. ಟೆಕ್ನಿಕಲ್ ಸಾಕ್ಷಿಗಳನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಎಂದು ಕೆಲ ಅನುಭವಿ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಜಾಮೀನು ವಜಾ ಆದ ಬೆನ್ನಲ್ಲೇ ಮುಂದಿನ ಹೆಜ್ಜೆ ಹೈಕೋರ್ಟ್. ಜಾಮೀನು ವಜಾ ಆದ ಬಳಿಕ ಆದೇಶ ಪ್ರತಿ ವಕೀಲರ ಕೈ ಸೇರಿದ ಬಳಿಕ ಹೈ ಕೋರ್ಟ್‌ನಲ್ಲಿ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಈ ಎಲ್ಲಾ ಪ್ರಕ್ರಿಯೆಗೆ ಇನ್ನೊಂದು ವಾರ ಹಿಡಿಯಬಹುದು. ಮುಂದಿನ ಸೋಮವಾರವೇ ದರ್ಶನ್ ಜಾಮೀನು ಅರ್ಜಿ ಕೋರ್ಟ್ ಮುಂದೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲಿಂದ ಮತ್ತೆ ವಾದ-ಪ್ರತಿವಾದಗಳು ಆರಂಭ ಆಗಲಿವೆ.
ಹೈಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡ ಕೂಡಲೇ ಜಾಮೀನು ಮಂಜೂರು ಮಾಡುವುದು ಕಷ್ಟವಿದೆ ಎಂಬುವುದು ವಕೀಲರ ಅಭಿಪ್ರಾಯ. ಹೈಕೋರ್ಟ್‌ನಲ್ಲಿ ದರ್ಶನ್ ಈ ಪ್ರಕರಣದ ಪ್ರಮುಖ ಆರೋಪಿ ಅಲ್ಲ ಅನ್ನೋದನ್ನು ಸಾಬೀತು ಮಾಡಬೇಕಿದೆ. 57 ಸಿಸಿಎಚ್ ನ್ಯಾಯಾಲಯದಲ್ಲಿ ಇದೂವರೆಗೂ ಬೇಲ್ ಯಾರಿಗೆ ಸಿಕ್ಕಿಲ್ಲವೋ ಅವರೆಲ್ಲರೂ ರೇಣುಕಾಸ್ವಾಮಿಗೆ ಒಂದಲ್ಲ ಒಂದು ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಎದುರಿಸಿದ್ದಾರೆ. ಹೀಗಾಗಿ ಪವಿತ್ರಾ ಗೌಡ, ದರ್ಶನ್, ನಾಗರಾಜ್, ಲಕ್ಷ್ಮಣ್ ಸೇರಿದಂತೆ ಉಳಿದವರು ಜಾಮೀನು ಸಿಕ್ಕಿಲ್ಲ ಎನ್ನಲಾಗಿದೆ.
ಇನ್ನೊಂದು ಕಡೆ ದರ್ಶನ್ ಇನ್ನೊ ಎರಡು ಮೂರು ತಿಂಗಳು ಸುಮ್ಮನೆ ಇರಬೇಕಿತ್ತು. ಆಗ ನಿರಾಸವಾಗಿ ಜಾಮೀನು ಸಿಗುತ್ತಿತ್ತು. ಹೈ ಕೋರ್ಟ್‌ವರೆಗೂ ಹೋಗುವ ಅಗತ್ಯ ಬೀಳುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನು ಕೆಲ ವಕೀಲರು ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಾಗಿ ದೀಪಾವಳಿ ಹಬ್ಬಕ್ಕೂ ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ. ಇನ್ನೂ ಒಂದೆರಡು ತಿಂಗಳು ಬೇಕಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











