»   » ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದ್ರೆ!

ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದ್ರೆ!

Posted By:
Subscribe to Filmibeat Kannada
Ram Gopal Varma to direct Kannada movie
ರಂಗೀಲಾ, ಸತ್ಯ, ಕಂಪನಿ, ಫೂಂಕ್, ಸರ್ಕಾರ್ ರಾಜ್, ರಕ್ತ ಚರಿತ್ರ ಮುಂತಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ವಿಭಿನ್ನ ಚಿಂತನೆಯ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಗಾಂಧಿನಗರದಲ್ಲಿ ಸುಳಿದಾಡುತ್ತಿದೆ.

ಕೆಸಿಎನ್ ಕುಮಾರ್ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಈ ಚಿತ್ರದಲ್ಲಿ, ಆರ್ಜಿವಿ ಅವರ ಫೆವರಿಟ್ ನಟರಲ್ಲಿ ಒಬ್ಬರಾಗಿರುವ ಕನ್ನಡ ನಟ ಸುದೀಪ್ ಅವರು ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ವರ್ಮಾ ಅವರು ಕನ್ನಡ ಚಿತ್ರವನ್ನು ನಿರ್ದೇಶಿಸುವುದು ಬಿಡುವುದು ಸುದೀಪ್ ಅವರ ಮೇಲೆಯೇ ನಿರ್ಭರವಾಗಿದೆ.

ಇನ್ನೂ ಹೆಸರಿಡದ ಚಿತ್ರದ ಚಿತ್ರಕಥೆ, ನಟವರ್ಗ, ಚಿತ್ರೀಕರಣದ ಶೆಡ್ಯೂಲ್, ತಾಂತ್ರಿಕ ವರ್ಗ ಯಾವುದೂ ಫೈನಲೈಸ್ ಆಗಿಲ್ಲ. ವರ್ಮಾ ಅವರು ಕನ್ನಡ ಚಿತ್ರವನ್ನು ನಿರ್ದೇಶಿಸಬೇಕೆಂಬುದು ಸುದೀಪ್ ಅವರು ಬಹುಕಾಲದ ಇಚ್ಛೆ. ಸುದೀಪ್ ಮನಸು ಮಾಡಿದರೆ ವರ್ಮಾ ಅವರನ್ನು ಕನ್ನಡಕ್ಕೆ ಎಳೆದು ತರುವುದು ಅಷ್ಟು ಕಷ್ಟದ ಕೆಲಸವಾಗಲಿಕ್ಕಿಲ್ಲ ಎಂದು ಕೆಸಿಎನ್ ಕುಮಾರ್ ಅವರು ಹೇಳಿದ್ದಾರೆ.

ಒಂದು ಮೂಲದ ಪ್ರಕಾರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಗಿ ಮಿಂಚುತ್ತಿರುವ ದರ್ಶನ್ ಅವರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಸುದೀಪ್ ಅವರು ಆರಂಭದಲ್ಲಿ ದನಿ ನೀಡಿದ್ದಾರೆ. ಆದರೆ, ವರ್ಮಾ ಎಂದು ಕನ್ನಡಕ್ಕೆ ಎಂದು ಅಡಿಯಿಡಲಿದ್ದಾರೆ ಎಂಬುದು ಸದ್ಯಕ್ಕೆ ನಿಖರವಾಗಿ ಉತ್ತರಿಸಲಾಗದ ಪ್ರಶ್ನೆಯಾಗಿದೆ.

ಸದ್ಯಕ್ಕೆ ಸುದೀಪ್ ಅವರು ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ 'ವರದನಾಯಕ' ಮತ್ತು ಭಾರೀ ನಿರೀಕ್ಷೆ ಇಟ್ಟುಕೊಂಡಿರುವ 'ಬಚ್ಚನ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಾರೀ ಬಿಜಿಯಾಗಿದ್ದಾರೆ. ಬಚ್ಚನ್ ಬಿಡುಗಡೆಯಾದ ನಂತರವೇ ರಾಮ್ ಗೋಪಾಲ್ ವರ್ಮಾ ಅವರನ್ನು ಕನ್ನಡಕ್ಕೆ ಕರೆತರುವ ಬಗ್ಗೆ ಸುದೀಪ್ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ.

ಫೂಂಕ್ ಚಿತ್ರದ ಮುಖಾಂತರ ಸುದೀಪ್ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದವರು ರಾಮ್ ಗೋಪಾಲ್ ವರ್ಮಾ. ನಂತರ ವರ್ಮಾ ಅವರೊಡನೆ ರಕ್ತ್ ಚರಿತ್ರ ಮತ್ತು ರಣ್ ಹಿಂದಿ ಚಿತ್ರಗಳಲ್ಲಿ ನಟಿಸಿ ಸುದೀಪ್ ನಟಿಸಿದರು. 'ಈಗ' ಚಿತ್ರ ಸೂಪರ್ ಡೂಪರ್ ಹಿಟ್ ಆದ ಮೇಲೆ ಸುದೀಪ್ ತಾರಾಮೌಲ್ಯ ಹೆಚ್ಚಾಗಿದ್ದು, ಸುದೀಪ್ ಕೇಳಿದರೆ ಕನ್ನಡಕ್ಕೆ ರಾಮ್ ಗೋಪಾಲ್ ವರ್ಮಾ ಬರಲಾರರೆ ಎಂಬ ಮಾತು ಕೇಳಿಬರುತ್ತಿದೆ.

English summary
If everything happens as planned Ram Gopal Varma will get a chance to direct Kannada movie with Sudeep as lead actor. The movie will be produced by KCN Kumar and Darshan too may make an appearance in the movie.
Please Wait while comments are loading...