ಎಚ್ ಡಿಕೆ ಚಿತ್ರ ನೋಡಿದ್ದರೆ ಮಾತೇ ಆಡುತ್ತಿರಲಿಲ್ಲ!

By ರಾಜೇಂದ್ರಚಿಂತಾಮಣಿ

Next »

« Previous

3. ತಮ್ಮ ಗ್ರಾಮವಾಸ್ತವ್ಯ ಪರಿಕಲ್ಪನೆಗೆ ಧಕ್ಕೆ ಆಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ?

ಗ್ರಾಮವಾಸ್ತವ್ಯ ಎಂಬುದು ಅವರು ಪರಿಕಲ್ಪನೆ ಮಾಡಿದ್ದು. ನಂತರ ಅದನ್ನು ಬೇರೆಬೇರೆ ಮುಖ್ಯಮಂತ್ರಿಗಳು ಮುಂದುವರಿಸಿದರು. ಅವರು ಮಾಡಿದ ನಂತರ ಅದು ಎಷ್ಟು ಜನಪ್ರಿಯವಾಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚಿನ ದಿನಗಳಲ್ಲಿ ಅದನ್ನು ಯಾರಾದರು ಮುಂದುವರಿಸಿದ್ದಾರಾ? ಹಾಗಿದ್ದಾಗ ಅದಕ್ಕೆ ಧಕ್ಕೆ ಬರುವಂತಹ ಪ್ರಮೇಯ ಎಲ್ಲಿಂದ ಬಂತು? ಈಗಾಗಲೆ ಆಗಿ ಹೋಗಿರುವಂತಹ ಪ್ರಕರಣ ಇದು. ನಂತರದ ದಿನಗಳಲ್ಲಿ ಚಾಲನೆಯಲ್ಲಿದ್ದರೆ ಆಗ ಅದಕ್ಕೆ ಧಕ್ಕೆ ಬರುತ್ತಿತ್ತು.

ಗ್ರಾಮವಾಸ್ತವ್ಯ ಎಂಬುದು ಒಂದು ಅದ್ಭುತ ಪರಿಕಲ್ಪನೆ. ಒಬ್ಬ ಬಡವನ ಮನೆಗೆ ಒಬ್ಬ ಮುಖ್ಯಮಂತ್ರಿ ಹೋಗಿ ಉಳಿದುಕೊಂಡು ಅವರ ಕಷ್ಟಸುಖ ಅರ್ಥಮಾಡಿಕೊಳ್ಳುವುದು ನಿಜಕ್ಕೂ ಅದ್ಭುತವಾದ ಪರಿಕಲ್ಪನೆ. ವಿಶಿಷ್ಟವಾದ ಪರಿಕಲ್ಪನೆ. ಅದರ ಬಗ್ಗೆ ನನಗೆ ಸಾಕಷ್ಟು ಸಂತೋಷ, ಹೆಮ್ಮೆ ಇದೆ. ಆದರೆ ಅಂದುಕೊಂಡಂತೆ ಎಲ್ಲವೂ ಆಗುತ್ತದೆಯೇ? ಮುಖ್ಯಮಂತ್ರಿಗಳು ಒಂದು ರಾತ್ರಿಯನ್ನು ಅಲ್ಲಿ ಕಳೆಯುತ್ತಾರೆ ಎಂದುಕೊಳ್ಳಿ. ಅದಕ್ಕೆ ಮುಂಚಿನ ಎಂಟತ್ತು ದಿನಗಳು, ನಂತರದ ದಿನಗಳಲ್ಲಿ ಏನಾಗುತ್ತದೆ ಎಂಬುದು ಅವರ ಗಮನಕ್ಕೆ ಬರುತ್ತದಾ?

If hdk watches movie he will keep quite sheshadri

ಅದನ್ನು ನನ್ನ ಚಿತ್ರದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ. ಸಿನಿಮಾ ಕೂಡ ಒಂದು ಮಾಧ್ಯಮ. ಅದರ ಮೂಲಕ ನನಗೆ ಅನ್ನಿಸಿದ್ದನ್ನು ಹೇಳುವ ಹಕ್ಕು ನನಗಿಲ್ಲವೇ? ಆದರೆ ಕುಮಾರಸ್ವಾಮಿ ಅವರು ಚಿತ್ರ ನೋಡಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ತಮ್ಮ ಚಿತ್ರದಲ್ಲಿ ಎಲ್ಲೂ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿಲ್ಲ. ಆ ಪಾತ್ರಕ್ಕೆ ಅವರ ಹೋಲಿಕೆಯೂ ಇಲ್ಲ. ಒಂದು ವೇಳೆ ಹೋಲಿಕೆ ಕೊಡಬೇಕು ಅಂದಿದ್ದರೆ ಅವರ ಆಕಾರ, ಬಣ್ಣಕ್ಕೆ ತಕ್ಕಂತೆ ಪಾತ್ರನ್ನು ಸೃಷ್ಟಿ ಮಾಡುತ್ತಿದ್ದೆ. ಅದೇ ರೀತಿಯ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದೆ. ಚಿತ್ರದಲ್ಲಿ ಎಲ್ಲೂ ಅವರ ಹೆಸರನ್ನು ಬಳಸಿಲ್ಲ. ಇಡೀ ಚಿತ್ರದಲ್ಲಿ ಅವರ ಪಕ್ಷದ ಚಿಹ್ನೆಯನ್ನು ಬಳಸಿದ್ದೀನಾ? ಅದೊಂದು ಕಾಲ್ಪನಿಕ ಮುಖ್ಯಮಂತ್ರಿಯ ಪಾತ್ರ. ಇಡೀ ಚಿತ್ರವೊಂದು ಕಲ್ಪನೆ. ಒಂದು ವರದಿಯನ್ನು ಆಧರಿಸಿ, ಎಂಟತ್ತು ಕುಟುಂಬಗಳನ್ನು ಭೇಟಿ ಮಾಡಿ ಹೆಣೆದ ಕಥೆ ಅಷ್ಟೆ. ಇದೊಂದು ಫ್ಯೂಚರ್ ಫಿಲಂ, ಡಾಕ್ಯುಮೆಂಟರಿ ಅಲ್ಲ.

ಕುಮಾರಸ್ವಾಮಿ ಅವರು ಸಿನಿಮಾ ನೋಡಿ ಮಾತನಾಡಿದ್ದರೆ ನನಗೆ ಬಹಳ ಸಂತೋಷವಾಗುತ್ತಿತ್ತು. ಪ್ರಾಯಶಃ ಅವರು ನೋಡಿದ್ದರೆ ಮಾತೇ ಆಡುತ್ತಿರಲಿಲ್ಲ! ನೋಡದೆ ಇರುವ ಕಾರಣ ಹೀಗಾಗಿದೆ. ಅವರು ಚಿತ್ರವನ್ನು ಒಮ್ಮೆ ನೋಡಲಿ, ಬಳಿಕ ನನ್ನೊಂದಿಗೆ ಚರ್ಚಿಸಲಿ. ನಾನು ಅದಕ್ಕೆ ಸಿದ್ಧವಾಗಿದ್ದೇನೆ. ಅವರಿಗೆ ಧಕ್ಕೆ ಬರುವಂತಹದ್ದನ್ನು ನಾನು ಏನೂ ಚಿತ್ರದಲ್ಲಿ ಮಾಡಿಲ್ಲ. ಒಬ್ಬ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡಲಿಕ್ಕೆ ಹೊರಡುತ್ತಾರೆ. ಆದರೆ ಸುತ್ತಮುತ್ತಲಿನ ವ್ಯವಸ್ಥೆ ಸಾಮಾನ್ಯರನ್ನು ಆ ರೀತಿ ಬದುಕಕ್ಕೆ ಬಿಡಲ್ಲ ಎಂಬುದು ಚಿತ್ರದಲ್ಲಿ ಬರುವಂತಹ ಸಂದೇಶ.

ಎಚ್ಐಬಿ ಪಾಸಿಟೀವ್ ಇರುವವರು ಎಂಥಹ ಅವಹೇಳನಕಾರಿ ಸಂದರ್ಭಗಳನ್ನು ಎದುರಿಸುತ್ತಾರೆ, ಅದು ಆಗಬಾರದು ಎಂಬುದನ್ನು ಚಿತ್ರದಲ್ಲಿ ಒಂದು ಸಂದೇಶದ ಮೂಲಕ ತಿಳಿಸಿದ್ದೇನೆ. ಅದು ನನ್ನ ಸಾಮಾಜಿಕ ಜವಾಬ್ದಾರಿ. ಕುಮಾರಸ್ವಾಮಿ ಅವರು ಚಿತ್ರ ನೋಡದೆ ಇರುವ ಕಾರಣ ಈ ತಪ್ಪು ಕಲ್ಪನೆ ಉಂಟಾಗಿದೆ. ಚಿತ್ರದಲ್ಲಿ ಮುಖ್ಯಮಂತ್ರಿಗಳು ಏಡ್ಸ್ ಪೀಡಿತರ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಬಳಿಕ ವೇದಿಕೆಯೊಂದರಲ್ಲಿ ಅವರಲ್ಲಿ ಕೀಳುಮನೋಭಾವ ಬರಬಾರದು ಎಂಬ ಉದ್ದೇಶದಿಂದ ಅವರ ಮನೆಯಲ್ಲಿ ಉಳಿದು ಉಪಹಾರ ಸೇವಿಸಿದೆ ಎಂದು ಹೇಳುತ್ತಾರೆ.

ರೊಟ್ಟಿ ದೇವಕ್ಕ ಎಂಬ ಪಾತ್ರ ರೊಟ್ಟಿಗಳನ್ನು ಮಾಡಿ ಖಾನಾವಳಿಗೆ ಮಾರಿ ಜೀವನ ನಡೆಸುತ್ತಿರುತ್ತಾಳೆ. ಆಕೆಯ ಗಂಡ ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡುವ ಕೆಲಸವನ್ನು ಮಾಡುತ್ತಿರುತ್ತಾನೆ. ಈ ಮುಖ್ಯಮಂತ್ರಿಗಳು ಬಂದು ಹೋದರು ಎಂದು ಗೊತ್ತಾದ ನಂತರ ಸಮಾಜ ಅವರನ್ನು ದೂರ ಇಡಲು ಪ್ರಯತ್ನಿಸುತ್ತದೆ (ಮುಖ್ಯಮಂತ್ರಿಗಳಲ್ಲ ಎಂಬುದನ್ನು ಗಮನಿಸಬೇಕು). ಈ ಹೊತ್ತಿಗೂ ಎಚ್ಐವಿ ಪಾಸಿಟೀವ್ ರೋಗಿಗಳ ಬಗ್ಗೆ ನಮ್ಮ ಸಮಾಜದಲ್ಲಿ ಅವಹೇಳನಕಾರಿ ಧೋರಣೆ ಇದೆಯಾ ಇಲ್ಲವೇ ಹೇಳಿ? ಅದನ್ನೇ ನಾನು ಚಿತ್ರದಲ್ಲಿ ತೋರಿಸಿರುವುದು. ಸಮಾಜ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು. ಮುಖ್ಯಮಂತ್ರಿಗಳಲ್ಲ.

ಮೂಡನಂಬಿಕೆ ಹೋಗಬೇಕು. ಅವರ ರೊಟ್ಟಿ ಮಾರಾಟವಾಗಲ್ಲ. ಅವರ ಕೆಲಸ ಹೋಗುತ್ತದೆ. ಇದನ್ನು ಮುಖ್ಯಮಂತ್ರಿಗಳು ಮಾಡುತ್ತಾರೋ ಸಮಾಜ ಮಾಡುತ್ತದೋ. ಇದರಲ್ಲಿ ತಪ್ಪೇನಿದೆ. ಚಿತ್ರದಲ್ಲಿ ಇರುವುದು ಇಷ್ಟೇ. ಬಹುಶಃ ಕುಮಾರಸ್ವಾಮಿ ಅವರಿಗೆ ಯಾರೋ ಮಿಸ್ ಲೀಡ್ ಮಾಡಿದ್ದಾರೆ. ಅವರು ಒಮ್ಮೆ ಚಿತ್ರ ನೋಡಿದರೆ ಎಲ್ಲರೂ ಸ್ಪಷ್ಟವಾಗುತ್ತದೆ. ಚಿತ್ರದಲ್ಲಿ ವಿಡಂಬನೆಯೂ ಇದೆ. ಎಲ್ಲವನ್ನೂ ಶುಗರ್ ಕೋಟೆಡ್ ಮಾಡಿ ತೋರಿಸಲು ಸಾಧ್ಯವಿಲ್ಲ. ಇದೊಂದು ಕಾಲ್ಪನಿಕ ಚಿತ್ರ. ಎಳೆ ತೆಗೆದುಕೊಂಡಿರುವುದು ಗ್ರಾಮವಾಸ್ತವ್ಯದ ಕಲ್ಪನೆ.

4. ತಾವು ಗ್ರಾಮವಾಸ್ತವ್ಯ ಮಾಡಿರುವ ಕುಟುಂಬ ಬೀದಿ ಪಾಲಾಗಿದ್ದರೆ ಅವರ ಮನೆಗೆ ತೆರಳಿ ಧೈರ್ಯ ತುಂಬುತ್ತೇನೆ ಎಂದಿದ್ದಾರೆ?

ಇದು ಅವರ ಸ್ವಾಗತಾರ್ಹ ಹೇಳಿಕೆ. ಯಾವುದೇ ಒಂದು ಕುಟುಂಬ ಊರು ಬಿಟ್ಟು ಹೋಗುತ್ತದೆ ಎಂದು ಚಿತ್ರಿಸಿಲ್ಲ. ಆದರೆ ಆಕೆ ತನ್ನ ಪ್ರತಿಭಟನೆಯನ್ನು ತೋರಿಸುತ್ತಾಳೆ. ನಾವೂ ಮನುಷ್ಯರು, ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಹೇಳುತ್ತಾಳೆ. ಪ್ರತಿಭಟನೆಯ ಮೂಲಕ ಚಿತ್ರ ಅಂತ್ಯವಾಗುತ್ತದೆ. ಮುಂದೇನಾಗುತ್ತದೆ ಎಂಬುದು ನನಗೆ ಮುಖ್ಯವಲ್ಲ. ಬದುಕುವುದು ಎಲ್ಲರ ಹಕ್ಕು. ಎಚ್ಐವಿ ಪಾಸಿಟೀವ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸನ್ನು ನಾನು ಈ ಚಿತ್ರದ ಮೂಲಕ ಮಾಡಿದ್ದೇನೆ. ಎಲ್ಲರಿಗೂ ಮಾನಸಿಕ ಸ್ಥೈರ್ಯ ಬರುವಂತೆ ಮಾಡಿದ್ದೇನೆ. ನನ್ನ ಎಚ್ಐವಿ ಪಾಸಿಟೀವ್ ಪಾತ್ರ ಊರು ಬಿಟ್ಟು ಹೋಗಲ್ಲ. ಆದರೆ ಪ್ರತಿಭಟಿಸುತ್ತದೆ. ನನಗೂ ಬದುಕಲು ಹಕ್ಕಿದೆ ಎಂದು ಹೇಳುತ್ತದೆ.

Next »

« Previous

More from Filmibeat

English summary
National films award winning director P Sheshadri interview. The director rejects all allegations on his latest film December 1. Former chief minister HD Kumaraswamy, who popularised the village stay (grama vastavya) during his tenure, is upset with the film 'December 1'. Actor-director Omprakash Naik accused National award winner director P Sheshadri of plagiarism. Here is the P Sheshadri answers to all allegations.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X