ಇದನ್ನ 'ಹೊಗಳಿಕೆ' ಅಂತಾರಾ.? ಪ್ರತಿಭಾವಂತ ನಟನ ಬಗ್ಗೆ ಹೀಗಾ 'ಕಾಮೆಂಟ್' ಮಾಡೋದು.?

By Harshitha

ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಇತ್ತೀಚೆಗಂತೂ ವಿಪರೀತ ಆಗುತ್ತಿದೆ. ಇಡೀ ದೇಶವೇ ತಲೆ ತಗ್ಗಿಸುವಂತಹ ಗ್ಯಾಂಗ್ ರೇಪ್ ಕೇಸ್ ಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಓರ್ವ ಪ್ರತಿಭಾವಂತ ನಟನ ಬಗ್ಗೆ ಹೆಸರಾಂತ ನಿರ್ದೇಶಕ ಏನಂತ ಹೇಳಿದ್ದಾರೆ ಗೊತ್ತಾ.?

''ನಾನೇನಾದರೂ ಹುಡುಗಿಯಾಗಿದ್ರೆ, ಮಮ್ಮೂಟಿಯನ್ನ ರೇಪ್ ಮಾಡ್ತಿದ್ದೆ'' ಅಂತ ತಮಿಳಿನ ಖ್ಯಾತ ನಿರ್ದೇಶಕ ಮಿಶ್ಕಿನ್ ಹೇಳಿಕೆ ಕೊಟ್ಟಿದ್ದಾರೆ. ಅದು ಒಬ್ಬರೋ, ಇಬ್ಬರೋ ಮುಂದೆ ಅಲ್ಲ ಸ್ವಾಮಿ... ಸಾವಿರಾರು ಜನ ನೆರೆದಿದ್ದ, ಪತ್ರಕರ್ತರು ಹಾಗೂ ಮೀಡಿಯಾದವರು ಹಾಜರಿದ್ದ 'ಪೆರನ್ಬು' ಆಡಿಯೋ ರಿಲೀಸ್ ಸಮಾರಂಭದಲ್ಲಿ.!

'ಪೆರನ್ಬು' ಚಿತ್ರದಲ್ಲಿನ ಮುಮ್ಮೂಟಿ ಅವರ ಅಭಿನಯವನ್ನು ಹೊಗಳುವ ಭರದಲ್ಲಿ 'ರೇಪ್' ಕಾಮೆಂಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ ನಿರ್ದೇಶಕ ಮಿಶ್ಕಿನ್. ಅಲ್ಲಿ ನೆರೆದಿದ್ದವರೆಲ್ಲ ಮಿಶ್ಕನ್ ಹೇಳಿದ ಮಾತಿಗೆ ಕಿಲಕಿಲ ಅಂತ ನಕ್ಕರು ನಿಜ. ಆದ್ರೆ, ಆ ಜೋಕ್ ಕೀಳಮಟ್ಟದ್ದು... ಅದು ಮಿಶ್ಕಿನ್ ಮನಃಸ್ಥಿತಿಯನ್ನ ಎತ್ತಿ ತೋರಿಸುತ್ತೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಮುಂದೆ ಓದಿರಿ...

ಘಟನೆ ನಡೆದಿದ್ದು ಎಲ್ಲಿ.?

ಘಟನೆ ನಡೆದಿದ್ದು ಎಲ್ಲಿ.?

ರಾಮ್ ನಿರ್ದೇಶನದ 'ಪೆರನ್ಬು' ಸಿನಿಮಾ ಅಪ್ಪ-ಮಗಳ ಅನುಬಂಧದ ಕುರಿತಾದ ಕಥೆ. ಈಗಾಗಲೇ ಈ ಚಿತ್ರ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಈ ಚಿತ್ರದ ಆಡಿಯೋ ರಿಲೀಸ್ ಫಂಕ್ಷನ್ ನಿನ್ನೆಯಷ್ಟೇ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಿರ್ದೇಶಕ ಮಿಶ್ಕಿನ್ ಕೂಡ ಅತಿಥಿಯಾಗಿ ಬಂದಿದ್ದರು.

ಮಮ್ಮೂಟಿಯನ್ನ ಹೊಗಳಿದ ಮಿಶ್ಕಿನ್

ಮಮ್ಮೂಟಿಯನ್ನ ಹೊಗಳಿದ ಮಿಶ್ಕಿನ್

ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ 'ಪೆರನ್ಬು' ಚಿತ್ರದಲ್ಲಿನ ಮಮ್ಮೂಟಿ ಅಭಿನಯದ ಬಗ್ಗೆ ಮಿಶ್ಕಿನ್ ಅತಿ ಎನಿಸುವ ಮಟ್ಟಕ್ಕೆ ಹೊಗಳಲು ಆರಂಭಿಸಿದರು. ''ತಮಿಳು ಚಿತ್ರರಂಗದ ಯಾವ ನಟ ಈ ಪಾತ್ರ ಮಾಡಿದ್ದರೂ, ಓವರ್ ಆಕ್ಟಿಂಗ್ ನಿಂದ ಅದನ್ನ ಹದಗೆಡಿಸುತ್ತಿದ್ದರು'' ಎಂದರು ಮಿಶ್ಕನ್. ಇಷ್ಟಕ್ಕೆ ಮುಗಿಯದ ಅವರ ಮಾತು 'ರೇಪ್'ವರೆಗೂ ಹೋಯಿತು.

ಮಮ್ಮೂಟಿ ಹುಡುಗಿಯಾಗಿದ್ರೆ...

ಮಮ್ಮೂಟಿ ಹುಡುಗಿಯಾಗಿದ್ರೆ...

''ಇಡೀ ಸಿನಿಮಾದಲ್ಲಿ ನಿಮ್ಮ ಕಣ್ಣು ಮಮ್ಮೂಟಿ ಬಿಟ್ಟು ಅತ್ತಿತ್ತ ಕದಲುವುದಿಲ್ಲ. ನಾನೇನಾದರೂ ವಯಸ್ಸಿನಲ್ಲಿ ಚಿಕ್ಕವನಾಗಿದ್ದು, ಮಮ್ಮೂಟಿ ಏನಾದರೂ ಹುಡುಗಿಯಾಗಿದ್ದರೆ... ನಾನು ಅವರ ಪ್ರೀತಿಯಲ್ಲಿ ಮುಳುಗಿರುತ್ತಿದ್ದೆ'' - ಮಿಶ್ಕಿನ್, ನಿರ್ದೇಶಕ

ರೇಪ್ ಮಾಡುತ್ತಿದ್ದೆ.!

ರೇಪ್ ಮಾಡುತ್ತಿದ್ದೆ.!

''ನಾನೇನಾದರೂ ಹುಡುಗಿಯಾಗಿದ್ದರೆ, ಅವರನ್ನ ರೇಪ್ ಮಾಡಿಬಿಡುತ್ತಿದ್ದೆ. ಅಂತಹ ಅದ್ಭುತ ಆಕ್ಟಿಂಗ್ ಮಾಡಿದ್ದಾರೆ ಅವರು'' ಅಂತ ಮಿಶ್ಕಿನ್ ಹೇಳ್ತಿದ್ದ ಕೂಡಲೆ ಅಲ್ಲಿ ನೆರೆದಿದ್ದವರೆಲ್ಲಾ ಘೊಳ್ ಎಂದು ನಕ್ಕರು.

ರೇಪ್ ಎನ್ನುವುದು ಹೊಗಳಿಕೆಯೇ.?

ರೇಪ್ ಎನ್ನುವುದು ಹೊಗಳಿಕೆಯೇ.?

ಮಮ್ಮೂಟಿಯವರನ್ನ ಹೊಗಳಲು ಮಿಶ್ಕಿನ್ ಇಷ್ಟೆಲ್ಲ ಹೇಳಿದ್ದಾರೆ ನಿಜ. ಆದ್ರೆ, ರೇಪ್ ಎನ್ನುವುದು ಹೊಗಳಿಕೆಯೇ.? ಅಥವಾ ಅತೀವ ಪ್ರೀತಿಯಿಂದ ಅತ್ಯಾಚಾರ ಆಗುತ್ತೆ ಅನ್ನೋದು ಮಿಶ್ಕಿನ್ ಮನಃಸ್ಥಿತಿಯೇ.? ಎಂಬ ಪ್ರಶ್ನೆ ಎದ್ದಿದೆ.

ಪಬ್ಲಿಸಿಟಿ ಗಿಮಿಕ್ ಮಾಡಿದ್ರಾ ಮಿಶ್ಕಿನ್.?

ಪಬ್ಲಿಸಿಟಿ ಗಿಮಿಕ್ ಮಾಡಿದ್ರಾ ಮಿಶ್ಕಿನ್.?

ವಿವಾದಾತ್ಮಕ ಹೇಳಿಕೆ ಕೊಟ್ಟರೆ ಸಿನಿಮಾ ಹಿಟ್ ಆಗುತ್ತೆ ಅನ್ನೋದು ಮಿಶ್ಕಿನ್ ನಂಬಿಕೆ. ಈ ರೇಪ್ ಜೋಕ್ ಕೂಡ ಅಂಥದ್ದೇ ಒಂದು ಗಿಮಿಕ್ ಅನ್ನೋದು ಹಲವರ ಅಭಿಪ್ರಾಯ.

ಹೀಗೆ ಮಾತನಾಡಬಹುದೇ.?

ಹೀಗೆ ಮಾತನಾಡಬಹುದೇ.?

ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೊಸದೇನಲ್ಲ. ಹೆಸರಾಂತ ನಿರ್ದೇಶಕರೇ ಪಬ್ಲಿಕ್ ಆಗಿ ರೇಪು ಗೀಪು ಅಂತ ಮಾತನಾಡುವಾಗ ನಟಿಯರ ಪಾಡು ಕೇಳುವವರು ಯಾರು.? ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

More from Filmibeat

English summary
If I had been a girl, I would've raped Mammootty says Director Mysskin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X