twitter
    For Quick Alerts
    ALLOW NOTIFICATIONS  
    For Daily Alerts

    ಗೆದ್ದರೆ ಕೆಲಸ, ಸೋತರೆ ಪ್ರೀತಿ - ರಮ್ಯಾ/ದಿವ್ಯಸ್ಪಂದನ

    By Rajendra
    |

    ಲೋಕಸಭೆ ಚುನಾವಣಾ ಫಲಿತಾಂಶಕ್ಕೆ (ಮೇ 16) ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ ಯಾರಿಗೆ ಗೆಲುವು, ಯಾರಿಗೆ ಸೋಲು ಎಂಬ ಲೆಕ್ಕಾಚಾರ, ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಈಗಾಗಲೆ ಬಿಡುಗಡೆಯಾಗಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಕೆಲವು ಅಭ್ಯರ್ಥಿಗಳ ಪಾಲಿಗೆ ಬರಸಿಡಿಲಿನಂತೆ ಎರಗಿದೆ.

    ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಈ ಬಾರಿಯೂ ಗೆಲ್ಲುತ್ತಾರಾ? ವಸತಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರು ಮಂಡ್ಯ ರಿಸಲ್ಟ್ ಬಗ್ಗೆ ಈಗಾಗಲೆ ಫಿಫ್ಟಿ ಫಿಫ್ಟಿ ಎಂದಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿ ರಮ್ಯಾಗೆ ಗೆಲುವು ದೂರ ಎನ್ನುತ್ತಿವೆ. [ರಮ್ಯಾ ಸಾಧನೆಗಳ ವಿಡಿಯೋ ಬಹಿರಂಗ]

    ಇಷ್ಟಕ್ಕೂ ತಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ರಮ್ಯಾ ಅವರಿಗೆ ಇದೆಯೇ? ಈ ಬಗ್ಗೆ ಅವರು ಏನು ಹೇಳುತ್ತಾರೆ? "ಸೋಲು ಗೆಲುವು ಎಂಬುದು ಜೀವನದ ಅವಿಭಾಜ್ಯ ಅಂಗ. ಒಂದು ವೇಳೆ ಜವಾಬ್ದಾರಿ ಸಿಕ್ಕಿದರೆ ದಯೆ ದಾಕ್ಷಿಣ್ಯ ಇಲ್ಲದಂತೆ ಕೆಲಸ ಮಾಡುತ್ತೇನೆ. ಮಂಡ್ಯ ಎಂಬುದು ಕುಟುಂಬ ಇದ್ದಂತೆ. ಫಲಿತಾಂಶ ಮುಖ್ಯವಲ್ಲ" ಎಂದಿದ್ದಾರೆ.

    ಗೆದ್ದರೆ ಕೆಲಸ, ಸೋತರೆ ಪ್ರೀತಿ - ರಮ್ಯಾ/ದಿವ್ಯಸ್ಪಂದನ

    Winning losing is a part of life.was given a responsibility & I worked relentlessly for the people.Mandya is family.

    ಗೆದ್ದರೆ ಕೆಲಸ, ಸೋತರೆ ಜೀವನ ಇದ್ದೇ ಇದೆ

    ಗೆದ್ದರೆ ಕೆಲಸ, ಸೋತರೆ ಜೀವನ ಇದ್ದೇ ಇದೆ

    ಇನ್ನೊಂದು ಟ್ವೀಟ್ ನಲ್ಲಿ, "ಗೆದ್ದರೆ ಕೆಲಸ, ಸೋತರೆ ಜೀವನ ಎಂದಿನಂತೆ ನಡೆಯುತ್ತದೆ. ನಾವೆಲ್ಲಾ ಇಲ್ಲಿರುವುದು ನೆಪಮಾತ್ರ, ನಿಮಗೆ ಏನು ಸಿಗುತ್ತದೆ ಅದನ್ನು ಮಾಡಿ. ಪ್ರೀತಿಯ, ಸಂತೋಷದ ಹುಡುಕಾಟ ಇದ್ದೇ ಇದೆ" ಎಂದಿದ್ದಾರೆ. ರಮ್ಯಾ ಅವರು ಈ ರೀತಿ ಆಧ್ಯಾತ್ಮಿಕ ಚಿಂತನೆಗೆ ಹೊರಳಿದ್ದು ಫಾಲೋವರ್ಸ್ ನ್ನೂ ಚಿಂತನೆಗೆ ಹಚ್ಚಿದೆ.

    ಸೋಲೇ ಗೆಲುವಿನ ಮೆಟ್ಟಿಲು: NS Thanks MMS...

    Failure is a part of Success. To be successful you need to kiss failure first. More power 2 you.

    ಚುನಾವಣೆ ಮುಗಿದ ಮೇಲೆ ಮೊದಲ ಟ್ವೀಟ್

    ಚುನಾವಣೆ ಮುಗಿದ ಮೇಲೆ ಮೊದಲ ಟ್ವೀಟ್

    ಏಪ್ರಿಲ್ 17ರಂದು ಚುನಾವಣೆ ಮುಗಿದ ಮೇಲೆ ರಮ್ಯಾ ಮೊದಲ ಬಾರಿಗೆ ಟ್ವಿಟ್ಟರ್ ಕಡೆ ಮುಖ ಮಾಡಿದ್ದು ಏಪ್ರಿಲ್ 27ರಂದು ಟ್ವೀಟಿಸಿದ್ದರು. ಅದಾದ ಬಳಿಕ ಈಗ ಅವರು ಟ್ವೀಟಿಸಿದ್ದಾರೆ. ಅವರ ಮಾತುಗಳಲ್ಲಿನ ಆಧ್ಯಾತ್ಮಿಕ ಚಿಂತನೆಯನ್ನು ಗಮನಿಸಬಹುದು.

    ಈಗಾಗಲೆ ನೀವು ನಮ್ಮ ಹೃದಯ ಗೆದ್ದಿದ್ದೀರಿ: ಡಾ.ಸೆಂತಿಲ್ ಕುಮಾರ್

    don worry divya....u already won our hearts....so don bother about d results.

     ರಮ್ಯಾ ಅವರ ಮಾತುಗಳಲ್ಲಿ ಗೀತೆಯ ಸಾರ

    ರಮ್ಯಾ ಅವರ ಮಾತುಗಳಲ್ಲಿ ಗೀತೆಯ ಸಾರ

    "ಆದುದ್ದೆಲ್ಲಾ ಒಳ್ಳೆಯದಕ್ಕೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಇನ್ನು ಮುಂದೆ ಆಗುವುದೂ ಒಳ್ಳೆಯದಕ್ಕೆ. ಕಳೆದುಕೊಂಡಿರುವ ಬಗ್ಗೆ ಯಾಕೆ ರೋಧಿಸುತ್ತೀಯಾ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಿರುವುದು ನಿನ್ನ ಸೃಷ್ಠಿಯೇ! ನೀನು ಪಡೆದದ್ದೆಲ್ಲಾ ಇಲ್ಲಿಂದಲೇ ಪಡೆದಿರುವುದು! ನಿನಗಿರುವುದೆಲ್ಲಾ ಇಲ್ಲಿಂದಲೇ ಸಂಪಾದಿಸಿರುವುದು! ಈ ದಿನ ನಿನಗಿರುವುದೆಲ್ಲಾ ನಿನ್ನೆ ಬೇರಾರದೋ ಆಗಿತ್ತು! ಅದು ನಾಳೆ ಇನ್ನರದ್ದೋ ಆಗಲಿದೆ!"

    ಚಿಂತಿಸಬೇಡಿ ಗೆದ್ದೇ ಗೆಲ್ಲುತ್ತೀರಾ: ಆದಿತ್ಯಾ ಎಚ್ ಆರ್

    in a short while U hv given Indian Politics a whiff of d future.Sincerely hope u win n accelerate the transformation of IND

    ಸೋತರೆ ರಮ್ಯಾ ಏನು ಮಾಡಬಹುದು?

    ಸೋತರೆ ರಮ್ಯಾ ಏನು ಮಾಡಬಹುದು?

    ಮಾಡಲು ಸಾಕಷ್ಟು ಕೆಲಸಗಳಿವೆ. ರಾಜಕೀಯವೇ ಆಗಬೇಕೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಬಹುದು. ಐಪಿಎಲ್ ಮ್ಯಾಜ್ ಗಳಲ್ಲಿ ಹಾಯಾಗಿ ಕಾಲಕಳೆಯಬಹುದು. ಕನ್ನಡ ಚಿತ್ರಗಳಲ್ಲಿ ಮತ್ತೆ ತೊಡಗಿಕೊಳ್ಳಬಹುದು. ಅವರ ಅಭಿಮಾನಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

    ಫಲಿತಾಂಶ ಏನೇ ಇರಲಿ ಯುವಕರಿಗೆ ನೀವು ಆದರ್ಶ

    But we all appreciate how sincere u r in ur work!! Whatever happens u wil stand out as a role model for youths in politics!

    ಎರಡು ಬಣಗಳ ನಡುವೆ ನಲುಗಿದ ರಮ್ಯಾ

    ಎರಡು ಬಣಗಳ ನಡುವೆ ನಲುಗಿದ ರಮ್ಯಾ

    ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅಂಬಿ ಹಾಗೂ ಕೃಷ್ಣ ಬಣಗಳ ನಡುವೆ ರಮ್ಯಾ ಸಾಕಷ್ಟು ಹೈರಾಣಾಗಿದ್ದರು. ಅವರಿಗೂ ಒಂದು ಹಂತದಲ್ಲಿ ರಾಜಕೀಯ ಅಂದ್ರೆ ಸಾಕಪ್ಪಾ ಸಾಕು ಎಂದು ಅನ್ನಿಸಿರಲೂಬಹುದು.

    ಕೂದಲೆಳೆ ಅಂತರದಲ್ಲಿ ಗೆಲ್ತೀರಾ: ಮನೋಹರ್ ಎಂಎಲ್

    it could be photo finish narrow margin, but my mathetics says we (ramyaji) will win, hard work never fails,lets stay positive

    ಹಾರ್ಡ್ ವರ್ಕ್ ಗೆಲ್ಲುತ್ತೆ: ಮೀನಾ ಬಿಜಿ

    You will win Ramya! Why are you talking of losing!!! You have worked hard from six months...hardwork should win

    English summary
    A day after various exit polls predicted Mandya’s Congress sitting MP Ramya’s defeat in the Lok Sabha polls, the actress struck a pessimistic tone on Twitter on Tuesday. Tweets, "Winning & losing is a part of life. Was given a responsibility & I worked relentlessly for the people. Mandya is family. Results don’t matter (sic)."
    Wednesday, May 14, 2014, 17:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X