ಮಂಡ್ಯ ಫಲಿತಾಂಶ ಉಲ್ಟಾ ಆದ್ರೆ ಜೋಡೆತ್ತುಗಳಿಗೆ ಈ ಟೀಕೆಗಳು ತಪ್ಪಿದ್ದಲ್ಲ.!
Recommended Video
ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗೆ ಎಲ್ಲವೂ ಪಾಸಿಟೀವ್ ಆಗಲಿದೆ. ದರ್ಶನ್ ಮತ್ತು ಯಶ್ ತಮ್ಮ ಎದುರು ಕೇಳಿ ಬಂದ ಎಲ್ಲ ಟೀಕೆಗಳಿಗೆ ಉತ್ತರ ಕೊಡುವ ಸಲುವಾಗಿ ಕಾಲರ್ ಎತ್ತಿ ಉತ್ತರ ಕೊಡ್ತಾರೆ. ಒಂದು ವೇಳೆ ಸುಮಲತಾ ಅವರು ಸೋತು, ಮೈತ್ರಿ ಅಭ್ಯರ್ಥಿ ನಿಖಿಲ್ ಗೆದ್ದರೇ ಏನಾಗಬಹುದು.
ಹೌದು, ಸಿಎಂ ಪುತ್ರ ಎಂಬ ಬ್ರಹ್ಮಾಸ್ತ್ರ ಬಿಟ್ಟರೇ ನಿಖಿಲ್ ಗಿಂತ ಸುಮಲತಾ, ದರ್ಶನ್, ಯಶ್ ಮೂರು ಜನ ಹಿರಿಯರು. ಸಿನಿಮಾ ಇಂಡಸ್ಟ್ರಿಯಲ್ಲೂ ಹೆಚ್ಚು ಅನುಭವ ಹೊಂದಿರುವವರು. ಅದಕ್ಕೂ ಮಿಗಿಲಾಗಿ ನಿಖಿಲ್ ಗಿಂತ ಯಶ್, ದರ್ಶನ್, ಅಂಬರೀಶ್ ಮಂಡ್ಯದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವವರು.
ಇದೆನ್ನೆಲ್ಲಾ ಮೀರಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಚುಕ್ಕಾಣಿ ಹಿಡಿದ್ರೆ, ಇದರಿಂದ ಜೋಡೆತ್ತುಗಳು ಕೆಲವು ಕಷ್ಟಕರವಾದ ಪರಿಸ್ಥಿತಿ ಎದುರಿಸಬೇಕಾಗುತ್ತೆ. ಕಷ್ಟಕರ ಅನ್ನೋದಕ್ಕಿಂತ ಸವಾಲುಗಳ ಎನ್ನಬಹುದು. ಏನದು? ಮುಂದೆ ಓದಿ....

ಎದುರಾಳಿಗಳಿಂದ ಟೀಕಾಸ್ತ್ರ
ಮಂಡ್ಯ ಪ್ರಚಾರದ ವೇಳೆ ಸ್ವಾಭಿಮಾನವನ್ನ ಮುಂದಿಟ್ಟು ಮತ ಕೇಳಿರುವ ಸುಮಲತಾ ಮತ್ತು ಜೋಡೆತ್ತುಗಳಿಗೆ ಅದೇ ತಿರುಗಬಾಣವಾಗಬಹುದು. ಮತ್ತಷ್ಟು ಟೀಕೆಗಳು, ಆರೋಪಗಳು ದರ್ಶನ್ ಹಾಗೂ ಯಶ್ ಅವರ ಮೇಲೆ ಜೆಡಿಎಸ್ ನಾಯಕ ಮಾಡಬಹುದು. ಈ ಟೀಕೆಗಳಿಗೆ ಉತ್ತರ ಕೊಡ್ತಾರ ಅಥವಾ ಸಿನಿಮಾ ಕೆಲಸ ಅಂತ ಹೇಳಿ ಸುಮ್ಮನಾಗ್ತಾರಾ ಎಂಬುದು ಸದ್ಯದ ಕುತೂಹಲ.

ದರ್ಶನ್ ಗೆ ಮತ್ತೆ ಅಪಖ್ಯಾತಿ
ಚುನಾವಣೆ ಪ್ರಚಾರದ ವೇಳೆಯೂ ಇದನ್ನೇ ಹೇಳುತ್ತಿದ್ದರು. ದರ್ಶನ್ ಬಂದ್ರೆ ಜನ ಬರ್ತಾರೆ ಆದ್ರೆ ಮತ ಬರಲ್ಲ. ಅವರು ಪ್ರಚಾರ ಮಾಡಿದ್ದ ಸಿದ್ದರಾಮಯ್ಯ ಅವರೇ ಸೋತರು. ಇನ್ನು ಸುಮಲತಾ ಅವರು ಅಷ್ಟೇ ಎಂದಿದ್ದರು. ಬಹುಶಃ ಈ ಆರೋಪ ಮತ್ತು ಅಪಖ್ಯಾತಿ ದರ್ಶನ್ ವಿಚಾರದಲ್ಲಿ ಮತ್ತೆ ಮುಂದುವರಿಯುತ್ತೆ.

ಇಂಡಸ್ಟ್ರಿಯಲ್ಲೂ ಟೀಕೆಗಳು
ಸಿನಿಮಾದವರು ರಾಜಕೀಯ ಅಥವಾ ಪ್ರಚಾರಗಳಿಗೆ ಹೋದಾಗ ಅದನ್ನ ವಿರೋಧಿಸುವ ಬಣವೂ ಸಿನಿಮಾ ಇಂಡಸ್ಟ್ರಿಯಲ್ಲಿದೆ. ಸುಮಲತಾ ಅವರು ಸೋತರೇ, ದರ್ಶನ್ ಮತ್ತು ಯಶ್ ಅವರನ್ನ ನೋಡುವ ದೃಷ್ಟಿಯೂ ಸ್ವಲ್ಪ ಬದಲಾಗಬಹುದು. ಇಬ್ಬರು ಸ್ಟಾರ್ ನಟರಿದ್ದರೂ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದು.
ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?

ಸಿಎಂ ಫ್ಯಾಮಿಲಿ ದ್ವೇಷ ಹೆಚ್ಚಾಗಬಹುದು
ಸುಮಲತಾ ಪರ ಪ್ರಚಾರ ಮಾಡಿದ್ದಕ್ಕೆ ಜೋಡೆತ್ತುಗಳ ಮೇಲೆ ಸಿಎಂ ಕುಮಾರಸ್ವಾಮಿ ಮುನಿಸಿಕೊಂಡರು. ಸಿನಿಮಾದವರು, ಹಾಗೆ, ಹೀಗೆ ಅಂತ ಕಿಡಿಕಾರಿದ್ದರು. ಇದೆಕ್ಕೆಲ್ಲಾ ಮೇ 23ರ ನಂತರ ಉತ್ತರ ಕೊಡ್ತೀನಿ ಅಂತ ಬೇರೆ ಹೇಳಿದ್ದಾರೆ. ಫಲಿತಾಂಶ ಬಂದಮೇಲೆ ಸಿಎಂ ಮತ್ತು ಜೋಡೆತ್ತುಗಳ ದ್ವೇಷ ಮತ್ತಷ್ಟು ತಿರುವು ಪಡೆದುಕೊಳ್ಳಬಹುದು.

ಮಂಡ್ಯ ಜನರ ಮುಂದೆ ಹೋಗುವುದಕ್ಕೆ ಯೋಚಿಸಬೇಕು
ಮಂಡ್ಯ ಜನರ ಪಾದಗಳಿಗೆ ನಮಸ್ಕರಿಸಿ ಮತಯಾಚನೆ ಮಾಡಿದ್ದ ಜೋಡೆತ್ತುಗಳು, ಫಲಿತಾಂಶ ಉಲ್ಟಾ ಬಂದ್ರೆ ಅದನ್ನ ಹೇಗೆ ಸಮರ್ಥಿಸಿಕೊಳ್ಳುತ್ತಾರೆ. ಮತ್ತೆ ಮಂಡ್ಯ ಜನರ ಮುಂದೆ ಏನೆಂದು ಹೇಳಿ ಹೋಗಲು ಸಾಧ್ಯ ಎಂಬುದು ಸವಾಲಿನ ಪ್ರಶ್ನೆ.


Click it and Unblock the Notifications











