ಪೈಲ್ವಾನ್-ಕುರುಕ್ಷೇತ್ರ ಒಟ್ಟಿಗೆ ಬಂದ್ರೆ ಲಾಭಕ್ಕಿಂತ ನಷ್ಟನೇ ಜಾಸ್ತಿ.!
Recommended Video
ಈ ವರ್ಷದ ಅತಿ ದೊಡ್ಡ ಚಿತ್ರಗಳಲ್ಲಿ ಸುದೀಪ್ ಪೈಲ್ವಾನ್ ಕೂಡ ಒಂದು. ಕುಸ್ತಿ ಪೈಲ್ವಾನ್ ಆಗಿ ಅಖಾಡಕ್ಕೆ ಇಳಿದಿರುವ ಸುದೀಪ್ ಗೆ ಈ ಚಿತ್ರ ತುಂಬಾ ವಿಶೇಷ. ಅಷ್ಟೇ ಅಲ್ಲದೇ ಭಾರತದ ವಿವಿಧ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪೈಲ್ವಾನ್ ಸಿನಿಮಾ ಬರುತ್ತೆ ಎನ್ನಲಾಗುತ್ತಿದೆ. ಆದ್ರೆ, ಪೈಲ್ವಾನ್ ಚಿತ್ರಕ್ಕೆ ಎದುರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಚಿತ್ರವೂ ಬಿಡುಗಡೆಯಾಗಲಿದೆ ಎಂಬ ಮಾತು ಈಗ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ.
ಸಿನಿಮಾ ನಾನು ಅಂದುಕೊಂಡಂತೆ ಬಂದ್ರೆ ಯಾವುದೇ ದಿನ ಆಗಿರಲಿ, ಯಾವುದೇ ಸಿನಿಮಾ ಬರಲಿ, ಕುರುಕ್ಷೇತ್ರ ಬಂದೇ ಬರುತ್ತೆ ಎಂದು ಹೇಳಿಕೊಂಡಿದ್ದರು ನಿರ್ಮಾಪಕ ಮುನಿರತ್ನ. ಈಗ ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ರಿಲೀಸ್ ಎಂಬ ಸುದ್ದಿ ಚರ್ಚೆಯಾಗ್ತಿದೆ. ಒಂದು ವೇಳೆ ಒಂದೇ ದಿನ ಈ ಎರಡು ಚಿತ್ರಗಳು ತೆರೆಕಂಡ್ರೆ, ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ಲೆಕ್ಕಾಚಾರ ಶುರುವಾಗಿದೆ. ಏನದು?

ಫ್ಯಾನ್ಸ್ ವಾರ್ ಹೆಚ್ಚಾಗುತ್ತೆ
ಪೈಲ್ವಾನ್ ಮತ್ತು ಕುರುಕ್ಷೇತ್ರ ಒಟ್ಟಿಗೆ ಬಂದ್ರೆ ಸುದೀಪ್ ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಿಗಳು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಾರೆ.
ನಾನಾ....ನೀನಾ....ನಮ್ಮದಾ.....ನಿಮ್ಮದಾ ಎಂಬ ಜಿದ್ದಾಜಿದ್ದಿ ನಡೆಯಬಹುದು. ದಾಖಲೆ, ಕಲೆಕ್ಷನ್, ಥಿಯೇಟರ್, ಸಂಭ್ರಮ, ಕಟೌಟ್, ಹೀಗೆ ಪ್ರತಿಯೊಂದರಲ್ಲೂ ಜಿದ್ದಾಜಿದ್ದಿ ಆಗಬಹುದು. ಇದು ಆಗಬಾರದು ಎಂಬ ಬಯಕೆಯೂ ಅಭಿಮಾನಿಗಳಲ್ಲಿದೆ.

ಥಿಯೇಟರ್ ಸಮಸ್ಯೆ ಕಾಡಬಹುದು.!
ಸುಮಾರು ಏಂಟು ಭಾಷೆಯಲ್ಲಿ ಪೈಲ್ವಾನ್, ಐದು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಲು ತಯಾರಾಗುತ್ತಿದೆ. ಇಬ್ಬರಿಗೂ ಹೆಚ್ಚು ಫ್ಯಾನ್ಸ್ ಇದ್ದಾರೆ. ಹೀಗಾಗಿ, ಎರಡೂ ಚಿತ್ರಗಳಿಗೂ ನಿರೀಕ್ಷೆಯ ಚಿತ್ರಮಂದಿರ ಸಿಗಲ್ಲ. ಇರುವ ಥಿಯೇಟರ್ ಗಳಲ್ಲಿ ಇಬ್ಬರು ಹಂಚಿಕೊಳ್ಳಬೇಕಾಗುತ್ತೆ. ಆಗ ಥಿಯೇಟರ್ ಸಂಖ್ಯೆ ಕುಸಿದರೂ ಅಚ್ಚರಿ ಇಲ್ಲ.

ಕಲೆಕ್ಷನ್ ಮೇಲೆ ಪರಿಣಾಮ
ಎರಡು ಸಿನಿಮಾ ಒಂದೇ ದಿನ ಬರುವುದರಿಂದ ಮೊದಲ ದಿನದ ಗಳಿಕೆ ಮೇಲೆ ನೇರಾ ಪರಿಣಾಮ ಬೀರುತ್ತೆ. ಕೇವಲ ಒಂದು ದಿನ ಮಾತ್ರವಲ್ಲ, ಆರಂಭದ ಕೆಲವು ದಿನಗಳು ಈ ವ್ಯತ್ಯಾಸ ಕಾಣಬಹುದು. ಯಾಕಂದ್ರೆ, ಇಬ್ಬರು ಫ್ಯಾನ್ಸ್ ಪ್ರತ್ಯೇಕವಾಗಿ ಸಿನಿಮಾ ನೋಡುವುದರಿಂದ ಗಳಿಕೆ ಕೂಡ ಇಬ್ಬರಿಗೂ ಹಂಚಿಕೆಯಾಗುತ್ತೆ.

ಪ್ರೇಕ್ಷಕರ ವರ್ಗ ಇಬ್ಭಾಗ
ಎಲ್ಲದಕ್ಕಿಂತ ವಿಶೇಷವಾಗಿ ಪ್ರೇಕ್ಷಕರ ವರ್ಗ ಇಬ್ಭಾಗವಾಗಬಹುದು. ನಮ್ಮ ಬಾಸ್ ಸಿನಿಮಾ ಬರ್ತಿದೆ ನಾನು ಅದೇ ಚಿತ್ರ ನೋಡುತ್ತೇನೆ ಎಂದು ಒಬ್ಬರು ಅಂದ್ರೆ, ನಮ್ಮ ಬಾಸ್ ಚಿತ್ರವೂ ಬರ್ತಿದೆ ನಾನು ಆ ಚಿತ್ರ ನೋಡುತ್ತೇನೆ ಎಂದು ಇನ್ನೊಬ್ಬರು ನಿರ್ಧರಿಸಬಹುದು. ಅಲ್ಲಿಗೆ ಸುದೀಪ್ ಫ್ಯಾನ್ಸ್ ಪೈಲ್ವಾನ್ ಚಿತ್ರವನ್ನ ದರ್ಶನ್ ಫ್ಯಾನ್ಸ್ ಕುರುಕ್ಷೇತ್ರವನ್ನ ಮಾತ್ರ ನೋಡುತ್ತಾರೆ. ಬೇರೆ ಬೇರೆ ಸಮಯದಲ್ಲಿ ಬಂದ್ರೆ ಇಬ್ಬರು ನಟರ ಅಭಿಮಾನಿಗಳು ಎರಡೂ ಚಿತ್ರವನ್ನ ನೋಡುವ ಸಾಧ್ಯತೆ ಇರುತ್ತೆ.

ಒಟ್ಟಿಗೆ ಬಂದ್ರೆ ಹಬ್ಬ ಜೋರು
ಇದೆನ್ನೆಲ್ಲಾ ಸೈಡಿಗೆ ಇಟ್ಟು ಒಂದೇ ದಿನ ಎರಡೂ ಚಿತ್ರಗಳು ಬಂದ್ರೆ, ಗಾಂಧಿನಗರದಲ್ಲಿ ವರಮಹಾಲಕ್ಷ್ಮಿ ಹಬ್ಬ ಸಖತ್ ಜೋರಾಗಲಿದೆ. ಯಾವ ಚಿತ್ರಮಂದಿರದ ಬಳಿ ಹೋದರೂ ಪೈಲ್ವಾನ್-ಕುರುಕ್ಷೇತ್ರದ ಪೋಸ್ಟರ್, ಕಟೌಟ್ ರಾರಾಜಿಸುತ್ತಿರುತ್ತೆ. ಇದನ್ನ ನೋಡೋದೆ ಒಂದು ಹಬ್ಬವಾಗುತ್ತೆ. ಒಂದೇ ದಿನ ಎರಡು ಸಿನಿಮಾ ನೋಡಿ ಮಜಾ ಮಾಡಬಹುದು.


Click it and Unblock the Notifications











