For Quick Alerts
  ALLOW NOTIFICATIONS  
  For Daily Alerts

  ಜನರು ಥಿಯೇಟರ್ ಬಂದ್ರೆ ಎಲ್ಲವೂ ಸಲೀಸು, ಇಲ್ಲದಿದ್ದರೆ ಲಾಸು: ರಮೇಶ್ ಅರವಿಂದ್

  By ದಾವಣಗೆರೆ ಪ್ರತಿನಿಧಿ
  |

  ''ಚಿತ್ರರಂಗದಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತವೆ. ವಾಚ್ ನೋಡಿದಾಗ ಒಂದು ಮುಳ್ಳಿನಿಂದ ಮತ್ತೊಂದು ಮುಳ್ಳಿಗೆ ಹೇಗೆ ಹೋಗುತ್ತದೆಯೋ ಅದೇ ರೀತಿಯಲ್ಲಿ ಚಿತ್ರರಂಗ ಇದೆ. ಕೊರೊನಾ ಬಂದಾಗ ಇಡೀ ಚಿತ್ರರಂಗವೇ ನಿಂತು ಹೋಯ್ತು. ಆಗ ಥಿಯೇಟರ್‌ಗಳು ಬಾಗಿಲು ತೆರೆಯಲಿಲ್ಲ. ನಟರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಮಸ್ಯೆ ಅನುಭವಿಸಿದರು. ಅಭಿಮಾನಿಗಳು ಥಿಯೇಟರ್‌ಗೆ ಬಂದು ಚಿತ್ರ ನೋಡಿದಾಗ ಮಾತ್ರ ನಿರ್ಮಾಪಕರಿಗೆ ಲಾಭ ಆಗುತ್ತದೆ. ಎಲ್ಲವೂ ಸರಾಗವಾಗಿ ನಡೆಯುತ್ತದೆ. ಟಿಕೆಟ್ ಸೇಲ್ ಆಗದಿದ್ದರೆ ಹಾಕಿದ ಬಂಡವಾಳವೂ ಬರುವುದಿಲ್ಲ,ಆಗ ಎಲ್ಲಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟನೆ ಮಾಡಬಹುದು, ನಿರ್ದೇಶಿಸಲೂ ಬಹುದು. ಎಡಿಟ್ ಕೂಡ ಮಾಡಿ ರೆಡಿ ಇಟ್ಟುಕೊಳ್ಳಬಹುದು. ಆದ್ರೆ, ಜನರೇ ಚಿತ್ರಮಂದಿರಗಳಿಗೆ ಬಾರದಿದ್ದರೆ ಏನು ಪ್ರಯೋಜನ ಆಗಲ್ಲ'' ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದ್ದಾರೆ.

  ದಾವಣಗೆರೆ ನಗರದ ಪೂಜಾ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ಎಲ್ಲಾ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ನಟನೆ ಮಾಡಬಹುದು, ನಿರ್ದೇಶಿಸಲೂ ಬಹುದು. ಎಡಿಟ್ ಕೂಡ ಮಾಡಿ ರೆಡಿ ಇಟ್ಟುಕೊಳ್ಳಬಹುದು. ಆದ್ರೆ, ಜನರೇ ಚಿತ್ರಮಂದಿರಗಳಿಗೆ ಬಾರದಿದ್ದರೆ ಏನು ಪ್ರಯೋಜನ ಆಗಲ್ಲ ಎಂದು ತಿಳಿಸಿದರು.

  ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ನಮಗೆಲ್ಲಾ ದೊಡ್ಡ ಶಾಕ್

  ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ನಮಗೆಲ್ಲಾ ದೊಡ್ಡ ಶಾಕ್

  ''ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ನಮಗೆಲ್ಲಾ ದೊಡ್ಡ ಶಾಕ್. ಈಗ ಎಲ್ಲರೂ ಈ ನೋವಿನಿಂದ ನಿಧಾನವಾಗಿ ಹೊರಬರುತ್ತಿದ್ದಾರೆ. ಸರ್ಕಾರ ಥಿಯೇಟರ್ ನಲ್ಲಿ ಶೇಕಡಾ ನೂರರಷ್ಟು ಆಸನಕ್ಕೆ ಅನುಮತಿ ಕೊಟ್ಟ ಬಳಿಕ ಬಿಡುಗಡೆಯಾದ ಎರಡರಿಂದ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಪುನೀತ್ ಸಾವಿನ ನಂತರದ ಬೆಳವಣಿಗೆಗಳು ನಮಗೂ ಗೊತ್ತಿವೆ. ಚಿತ್ರಮಂದಿರಗಳಿಗೆ ಜನರು ಬಂದರೆ ಮಾತ್ರ ನಿರ್ಮಾಪಕರಿಗೆ ಲಾಭ ಆಗುವುದು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ,'' ಎಂದು ಹೇಳಿದರು.

  ಪುನೀತ್ ರಾಜಕುಮಾರ್ ನಿಧನ ನಮಗೆಲ್ಲಾ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಬೆಂಗಳೂರಿನಲ್ಲಿ ಆಗುವ ಘಟನೆಯೂ ಅಲ್ಲ. ಕೆಲವರು ಜಿಮ್ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಜಿಮ್ ಮಾಲೀಕರು ಫೋನ್ ಮಾಡಿ ಈ ಬಗ್ಗೆ ನನ್ನ ಬಳಿಕ ಚರ್ಚೆಯನ್ನೂ ಮಾಡಿದ್ದಾರೆ ಎಂದರು.

  ನಮ್ಮ ದೇಹ ಮುಖ್ಯವಾದದ್ದು

  ನಮ್ಮ ದೇಹ ಮುಖ್ಯವಾದದ್ದು

  ನನ್ನ ಪ್ರಕಾರ ಬೇಸಿಕ್ ಫಿಟ್ನೆಸ್ ಬಹುಮುಖ್ಯ. ಎಲ್ಲರಿಗೂ ಬೇಕೇ ಬೇಕು. ಕನಸು ಈಡೇರಿಸಿಕೊಳ್ಳಲು ನಮ್ಮ ದೇಹ ಮುಖ್ಯವಾದದ್ದು ಎಂದು ಹೇಳಿದರು. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ದೇಹ ಸದೃಢವಾಗಿಟ್ಟುಕೊಳ್ಲಲು ಜಿಮ್‌ಗೆ ಹೋಗಬೇಕು ಎಂದೇನಿಲ್ಲ ಎಂಬುದು ನನ್ನ ಅಭಿಪ್ರಾಯ. ಆದ್ರೆ, ಸಣ್ಣಪುಟ್ಟ ಅಭ್ಯಾಸ ಮಾಡಬೇಕು. ಅಂಗಾಂಗಗಳ ಚಲನೆ ಇರಬೇಕು. ಈ ಹಿಂದೆ ನನ್ನದು ಚಿರತೆ ಬೇಟೆ ಮಾಡಿದ ದೇಹ, ಈಗ ಕಂಪ್ಯೂಟರ್, ಮೊಬೈಲ್ ನೋಡ್ತಾ ಕೂರುತ್ತೇವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇನೆ. ದೊಡ್ಡದಾಗಿ ಜಿಮ್‌ಗೆ ಹೋಗಿ ದೇಹದಂಡನೆ ಮಾಡಬೇಕೆಂದೇನಿಲ್ಲ. ಯೋಗಾಭ್ಯಾಸ ಮಾಡಿದರೆ ಒಳಿತು. ನಾನು ವಾರಕ್ಕೆ ನಾಲ್ಕೈದು ದಿನವಾದರೂ ಅಭ್ಯಾಸಮಾಡುತ್ತೇನೆ. ಇದರಿಂದ ಡಿಪ್ರೆಶನ್ ದೂರವಾಗುತ್ತದೆ. ಬುದ್ದಿವಂತಿಕೆ ಹೆಚ್ಚಾಗುತ್ತದೆ. ಚಿಂತೆಯೂ ಇರಲ್ಲ ಎಂದು ಅಭಿಪ್ರಾಯಪಟ್ಟರು.

  ಶಿವಾಜಿ ಸುರತ್ಕಲ್ ಸಿನಿಮಾ ಹಿಟ್ ಆಗಿದ್ದು ಖುಷಿ

  ಶಿವಾಜಿ ಸುರತ್ಕಲ್ ಸಿನಿಮಾ ಹಿಟ್ ಆಗಿದ್ದು ಖುಷಿ

  ಶಿವಾಜಿ ಸುರತ್ಕಲ್ ಸಿನಿಮಾ ಹಿಟ್ ಆಗಿದ್ದು ಖುಷಿ ತಂದಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಅದೇ ರೀತಿಯ ಸಸ್ಪೆನ್ಸ್, ಥ್ರಿಲ್ಲರ್ ಆದ ಇದೇ ತಿಂಗಳು 19 ರಂದು ಬಿಡುಗಡೆಯಾಗಲಿರುವ "100" ಫಿಲ್ಮ್ ನಲ್ಲಿಯೂ ಇದೆ. ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಹೆಂಡ್ತಿ ಕಳೆದುಕೊಂಡು ನಾಯಕ ಡಿಪ್ರೆಷನ್‌ಗೆ ಹೋಗಿರುತ್ತಾನೆ. ಈ ಸಿನಿಮಾದಲ್ಲಿ ಆಗಿಲ್ಲ. ತುಂಬು ಕುಟುಂಬ ಇರುತ್ತೆ. ಹೆಂಡತಿ ಹಾಗೂ ಮಗು ಸಹ ಇದ್ದು, ಇದು ಪಕ್ಕಾ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಕೂಡ
  ಇದೆ ಎಂದು ಹೇಳಿದ ಅವರು, ಈ ಸಿನಿಮಾದಲ್ಲಿ ಅರ್ಧ ಭಾಗ ನೈಜ ಕಥೆ ಆಧಾರಿತವಾದದ್ದು. ನನ್ನ ಸ್ನೇಹಿತನಿಗೆ ಆದ ಅನಾಹುತವನ್ನು ಸಿನಿಮಾದಲ್ಲಿ ಚಾಚೂ ತಪ್ಪದೇ ತರಲಾಗಿದೆ ಎಂದು ವಿವರಿಸಿದರು.

  ಗಡ್ಡ ಯಾಕೆ ಬಿಟ್ಟಿದ್ದಾರೆ ರಮೇಶ್?

  ಗಡ್ಡ ಯಾಕೆ ಬಿಟ್ಟಿದ್ದಾರೆ ರಮೇಶ್?

  ಇನ್ನು ಗಡ್ಡ ಯಾಕೆ ಬಿಟ್ಟಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಾಜಿ ಸುರತ್ಕಲ್ -2 ಸಿನಿಮಾ ನಡೆಯುತ್ತಿದೆ. ಆ ಸಿನಿಮಾಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ಇನ್ನು 100 ಸಿನಿಮಾ 100 ದಿನ ಪೂರೈಸುವ ಹೊತ್ತಿಗೆ ಆ ಸಿನಿಮಾದ ಚಿತ್ರೀಕರಣ ಮುಗಿರುತ್ತದೆ. ಆಗ ಶೇವ್ ಮಾಡಬಹುದು ಎಂದು ಹಾಸ್ಯಚಟಾಕಿ ಹಾರಿಸಿದರು.

  ವೀಕೆಂಡ್ ವಿತ್ ರಮೇಶ್ ಬಗ್ಗೆ?

  ವೀಕೆಂಡ್ ವಿತ್ ರಮೇಶ್ ಬಗ್ಗೆ?

  ಇನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜನರ ಮನ ಗೆದ್ದಿದೆ. ನಾಲ್ಕು ಸೀಸನ್‌ಗಳು ಮುಗಿದಿವೆ. ಐದನೇ ಸೀಸನ್ ಯಾವ ಸ್ವರೂಪದಲ್ಲಿ ಇರಬೇಕು ಎಂಬ ಚರ್ಚೆ ನಡೆಯುತ್ತಿದೆ. ವೀಕೆಂಡ್ ವಿತ್ ರಮೇಶ್ ಸೀಸನ್ -4 ರ ಫಿನಾಲೆಯಲ್ಲಿ ಯುವ ಸಾಧಕರನ್ನು ಕರೆದು ಮಾಡಿದ ಕಾರ್ಯಕ್ರಮಕ್ಕೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜನರ ಮೆಚ್ಚುಗೆಯನ್ನೂ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ ರೂಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಆ ಚಾನೆಲ್ ಅವರಿಗೆ ಬಿಟ್ಟದ್ದು ಎಂದು ಹೇಳಿದರು.

  ಹಿಟ್ ಸಿನಿಮಾ ಆಗಬೇಕು ಅಂದ್ರೆ ಏನಿರಬೇಕು?

  ಹಿಟ್ ಸಿನಿಮಾ ಆಗಬೇಕು ಅಂದ್ರೆ ಏನಿರಬೇಕು?

  ರಾಮ ಶಾಮ ಭಾಮ, ಅಮೆರಿಕಾ ಅಮೆರಿಕಾ, ಅಮೃತವರ್ಷಿಣಿ ಸೇರಿದಂತೆ ಹಲವು ಸಿನಿಮಾಗಳು ಹಿಟ್ ಆಗಿವೆ. ಇದಕ್ಕೆ ಕಾರಣ ಏನಾದರೂ ಒಂದು ಕುತೂಹಲ ಮತ್ತು ವಿಷಯ ಇರಬೇಕು. ಆಗ ಮಾತ್ರ ಸಿನಿಮಾ ಗೆಲ್ಲಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ತ್ಯಾಗರಾಜನ ಪಾತ್ರದಲ್ಲಿ ನಟಿಸುವ ಮೂಲಕ ಜನರ ಮನ ಗೆದ್ದಿದ್ದು ನಿಜ. ಆದ್ರೆ ಈಗ ನಾನು ಸ್ವಲ್ಪ ಪಾತ್ರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. 100 ಸಿನಿಮಾದಲ್ಲಿ ನನ್ನ ಸಾಹಸವೂ ಇದೆ. ಒಂದು ಹಾಡಿನಲ್ಲಿ ಸ್ವಲ್ಪ ಸ್ವಲ್ಪ ಹಾಡು ಮಾತ್ರ ಹೇಳಿದ್ದೇನೆ. ಈ ಸಿನಿಮಾವನ್ನು ಜನರು ಇಷ್ಟಪಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ರಮೇಶ್ ಅರವಿಂದ್ ಹೇಳಿದ್ರು.

  ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಫ್ಯಾಮಿಲಿ ಎಂಟ್ರಟೈನ್ಮೆಂಟ್

  ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಫ್ಯಾಮಿಲಿ ಎಂಟ್ರಟೈನ್ಮೆಂಟ್

  ನಮ್ಮ ಮನೆಯಲ್ಲಿ ಐದು ಜನ ಇದ್ದೇವೆ. ಎಲ್ಲರ ಕೈಯಲ್ಲಿಯೂ ಮೊಬೈಲ್. ಅವರವರ ಪ್ರಪಂಚದಲ್ಲಿರುತ್ತಾರೆ. ನಮ್ಮನೆಯೊಳಗೆ ಮಗ ಏನು ನೋಡ್ತಾನೆ, ಮಗಳು ಯಾವುದನ್ನು ನೋಡ್ತಾಳೆ ಗೊತ್ತಾಗುವುದಿಲ್ಲ. ತಪ್ಪಾಗಿ ಏನಾದರೂ ಆದರೆ ಅನಾಹುತ ಸೃಷ್ಟಿಸುತ್ತದೆ. ಇದೇ ಚಿತ್ರದ ಕಥೆಯ ಜೀವಾಳ. ಇಡೀ ಪ್ರಪಂಚ ಆನ್ ಲೈನ್ ಬಳಕೆ ಮಾಡುತ್ತಿದೆ. ಎಲ್ಲರೂ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದಾರೆ. ಎಲ್ಲರೂ ಮನೆಯಲ್ಲಿರುವ ಸಮಸ್ಯೆ ಒಂದೇ. ಫೋನ್ ಇಲ್ಲದಿದ್ರೆ ಇರೋಕೆ ಆಗೋಲ್ವಾ ಎಂಬ ಪ್ರಶ್ನೆ ಕೇಳಿ ಬರುತ್ತದೆ. ಆ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ. ಟೆಕ್ನಾಲಜಿ, ಸೋಷಿಯಲ್ ಮೀಡಿಯಾ ಯಾರ ಕೈಯಲ್ಲಿದೆ ಎಂಬುದು ಮುಖ್ಯ. ಕತ್ತಿ, ಬೆಂಕಿ ಸರಿಯಾದ ಕೈಯಲ್ಲಿದ್ದವರ ಕೈಗೆ ಇದ್ದರೆ ರುಚಿಕರವಾದ ಅಡುಗೆ ಆಗುತ್ತದೆ. ತಪ್ಪಾದವರ ಕೈಗೆ ಸಿಕ್ಕರೆ ರಕ್ತದ ಹೊಳೆ ಹರಿಯುತ್ತೆ. ಬೆಂಕಿ ಕಾಡೇ ನಾಶ ಮಾಡುತ್ತೆ. ಸೋಷಿಯಲ್ ಮೀಡಿಯಾ ತಪ್ಪಾದವರ ಕೈಯಲ್ಲಿ ಸಿಕ್ಕರೆ ಏನೆಲ್ಲಾ ಕೆಟ್ಟ ಪರಿಣಾಮ ಬೀರುತ್ತೆ ಎಂಬುದು ಗೊತ್ತಾಗುತ್ತದೆ ಎಂದು ಮಾಹಿತಿ ನೀಡಿದರು.

  ಈ ವಯಸ್ಸಲ್ಲೂ ಸ್ಮಾರ್ಟ್ ಆಗಿದ್ದೀರಾ

  ಈ ವಯಸ್ಸಲ್ಲೂ ಸ್ಮಾರ್ಟ್ ಆಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ನೋಡುವ ದೃಷ್ಟಿ. ನೋಡುವರ ಕಣ್ಣು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ನಾನುಂಟು, ನನ್ನ ಕೆಲಸ ಉಂಟು. ಬೇಡದ ವಿಚಾರಗಳಿಗೆ ತಲೆಕೆಡಿಸಿಕೆಡಿಸಿಕೊಳ್ಳಲ್ಲ. ಆ ಸಿನಿಮಾ ಏನಾಯ್ತು., ಈ ಸಿನಿಮಾ ಏನಾಯ್ತು ಅಂತಾ ಗಮನಿಸಲು ಹೋಗಲ್ಲ. ನನ್ನ ಪತ್ನಿ, ಮಕ್ಕಳು ಹಾಗೂ ನನ್ನ ಕೆಲಸದ ಬಗ್ಗೆ ಮಾತ್ರ ನನ್ನ ಚಿತ್ತ. ಈಗ ಸದ್ಯಕ್ಕೆ ನನ್ನ ತಲೆ ಖಾಲಿ ಉಂಟು ಎಂದು ಹೇಳಿದರು.

  English summary
  If People comes to theater everything is fine, otherwise loss says Ramesh Aravind said in a Press Meet held at Pooja International hotel, Davanagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X