»   » ಯಶ್ ರಾಜ್ಯದ ಮುಖ್ಯಮಂತ್ರಿ ಆದರೆ ಮಾಡುವ ಕೆಲಸಗಳು ಇವು

ಯಶ್ ರಾಜ್ಯದ ಮುಖ್ಯಮಂತ್ರಿ ಆದರೆ ಮಾಡುವ ಕೆಲಸಗಳು ಇವು

Posted By:
Subscribe to Filmibeat Kannada

ಒಂದು ಕಡೆ ರಾಜ್ಯದಲ್ಲಿ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈಗಾಗಲೇ ಕೆಲವು ಸಿನಿಮಾ ನಟ ನಟಿಯರು ರಾಜಕೀಯ ಪ್ರಚಾರದಲ್ಲಿ ಬಿಜಿ ಇದ್ದಾರೆ. ಆದರೆ ನಟ ಯಶ್ ಮಾತ್ರ ಸದ್ಯದವರೆಗೆ ಯಾವ ಪಕ್ಷದ ಪ್ರಚಾರದಲ್ಲಿಯೂ ಗುರುತಿಸಿಕೊಂಡಿಲ್ಲ. ಹೀಗಿರುವಾಗ ಯಶ್ ತಾವು ಮುಖ್ಯಮಂತ್ರಿ ಆದರೆ ಏನ್ ಏನ್ ಕೆಲಸ ಮಾಡುತ್ತಾರೆ ಅಂತ ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಶುಕ್ರವಾರ ರಾಜಾಜಿನಗರದ ಒರಾಯನ್ ಮಾಲ್ ನಲ್ಲಿ 'ಗುಳ್ಟು' ಚಿತ್ರ ನೋಡಿದರು. ಈ ಸಿನಿಮಾಗೆ ಕೇಳಿ ಬಂದ ಒಳ್ಳೆಯ ಮಾತುಗಳಿಂದ ಇಂಪ್ರೆಸ್ ಆದ ಯಶ್ ಚಿತ್ರ ನೋಡಿ ಖುಷಿ ಪಟ್ಟರು. ಇನ್ನು ಈ ವೇಳೆ ಸುದ್ದಿವಾಹಿನಿಗಳ ವರದಿಗಾರರ ಕೆಲವು ಪ್ರಶ್ನೆಗಳಿಗೆ ಯಶ್ ಉತ್ತರ ನೀಡಿದ್ದಾರೆ. ನೀವು ಮುಖ್ಯಮಂತ್ರಿ ಆದರೆ ಏನು ಮಾಡುತ್ತೀರಾ? ,ನಿಮ್ಮ ಪ್ರಕಾರ ರಾಮರಾಜ್ಯ ಅಂದರೆ ಏನು? ಮತ್ತು ಮತದಾನದ ಮಹತ್ವದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಯಶ್ ಉತ್ತರ ನೀಡಿದ್ದಾರೆ. ಮುಂದೆ ಓದಿ...

'ಗುಳ್ಟು' ಸಿನಿಮಾ ಮೆಚ್ಚಿದ ರಾಕಿಂಗ್ ಸ್ಟಾರ್ ಯಶ್

ಸಿಎಂ ಆದರೆ

''ಮುಖ್ಯಮಂತ್ರಿ ಆದರೆ ಏನು ಮಾಡಬೇಕು ಅಂದರೆ ನನ್ನ ಬಳಿ ದೊಡ್ಡ ಲಿಸ್ಟ್ ಇದೆ. ಅದನ್ನು ಹೇಳುವುದು ಅಲ್ಲ. ನಾನು ಹೀಗೆ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಅಲ್ಲ. ಅವಕಾಶ ಸಿಕ್ಕಾಗ ಮಾಡಿ ತೋರಿಸಬೇಕು. ಮುಖ್ಯವಾಗಿ ರಾಜ್ಯದಲ್ಲಿ ಯಾರು ಕೂಡ ಮೂಲಭೂತ ಅಗತ್ಯಗಳಿಗೆ ಕಷ್ಟಪಡಬಾರದು, ಉದ್ಯೋಗ, ಪ್ರವಾಸೋದ್ಯಮ ಸೇರಿದಂತೆ ತುಂಬ ವಿಷಯ ಇದೆ.'' - ಯಶ್, ನಟ

'ರಾಮರಾಜ್ಯ' ಎಂದರೆ

''ಒಬ್ಬರನ್ನು ಒಬ್ಬರು ಗೌರವಿಸಿಕೊಂಡು ಹೋಗಬೇಕು. ನನ್ನ ಪ್ರಕಾರ ಒಬ್ಬರ ಲೈಫ್ ಬಗ್ಗೆ ಇನ್ನೊಬ್ಬರು ಪಾಸಿಟಿವ್ ಆಗಿ ಇದ್ದರೆ ಅದೇ ರಾಮರಾಜ್ಯ. ಮನೆ ಕ್ಲೀನ್ ಆಗಿ ಇದ್ದರೆ ದೇಶ ಕ್ಲೀನ್ ಆಗಿ ಇರುತ್ತದೆ ಎನ್ನುವ ಮಾತಿದೆ. ಅದೇ ರೀತಿ ನಮ್ಮೆಲ್ಲರ ಎಲ್ಲರ ಮನಸ್ಥಿತಿ ಕ್ಲೀನ್ ಆಗಿ ಇದ್ದರೆ ಅದೇ ರಾಮರಾಜ್ಯ.'' - ಯಶ್, ನಟ

ಓಟ್ ಹಾಕದೆ ಇದ್ದರೆ ಬದುಕಿದ್ದು ಸತ್ತಂತೆ

''ಎಲ್ಲರೂ ಓಟ್ ಹಾಕಲೇ ಬೇಕು. ಓಟ್ ಹಾಕದೆ ಇದ್ದರೆ ಬದುಕಿದ್ದು ಸತ್ತಂತೆ. ನಿಮ್ಮ ಗುರುತೇ ನಿಮ್ಮ ಮತ. ನಾಳೆ ದಿನ ರಾಜಕಾರಣಿಗಳನ್ನು ಬೈಯುವುದು ಮಾತ್ರವಲ್ಲ. ನಮ್ಮ ತೀರ್ಮಾನ ಸರಿ ಅಥವಾ ತಪ್ಪು ಆಗಬಹುದು. ಆದರೆ ಓಟ್ ಮಾಡಬೇಕು. ಇವತ್ತು ಓಟ್ ಮಾಡಿ ತಪ್ಪಾಗಿದೆ ಎನ್ನುವದಕ್ಕಿಂತ, ಓಟ್ ಹಾಕದೆ ತಪ್ಪಾಗಿದೆ. ಸೋ, ಎಲ್ಲರೂ ಓಟ್ ಮಾಡಿ.'' - ಯಶ್, ನಟ

'ಗುಳ್ಟು' ಮೆಚ್ಚಿದ ಯಶ್

ಶುಕ್ರವಾರ 'ಗುಳ್ಟು' ಸಿನಿಮಾ ನೋಡಿದ ಯಶ್ ''ಈ ಕಾನ್ಸೆಪ್ಟ್ ಚೆನ್ನಾಗಿದೆ. ಜನ ಈಗ ಮೆಚ್ಚಿದ್ದಾರೆ, ಅದ್ರಲ್ಲೂ ಯೂತ್ಸ್​ ಈ ಸಿನಿಮಾಗೆ ಹೆಚ್ಚು ಹೆಚ್ಚು ಬರ್ತಾ ಇದ್ದಾರೆ. ಆದ್ರೆ, ಗುಳ್ಟು ಸಿನಿಮಾ ಎಲ್ಲರೂ ವಯಸ್ಸಿನವರು ನೋಡಬೇಕಿರುವ ಸಿನಿಮಾ. ಇಂಥಹ ವಿಷಯವನ್ನೂ ಎಲ್ಲೂ ಬೋರ್​ ಮಾಡಗಾದೆ ಪ್ರಸೆಂಟ್ ಮಾಡಿರುವ​ ಪ್ರಯತ್ನವನ್ನ ಮೆಚ್ಚಲೇಬೇಕು'' ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

English summary
If kannada actor Yash become CM of karnataka, what all he will do.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X