''ಧಮ್ ಇದ್ದರೆ 'ನಕಲಿ'ಯಲ್ಲ ನಿಮ್ಮ 'ಅಸಲಿ' ಪ್ರೊಫೈಲ್​​ನಿಂದ ಕಾಮೆಂಟ್ ಮಾಡಿ'' - ರಕ್ಷಕ್ ಬುಲೆಟ್ ನೇರಾನೇರ ಸವಾಲು..!..!

ತಮ್ಮ ಮಾತು.. ಹಾವ..ಭಾವಗಳಿಂದ ಸದಾ ಚರ್ಚೆಗೀಡಾದವರು ರಕ್ಷಕ್ ಬುಲೆಟ್. ಹೆಚ್ಚೇನಿಲ್ಲ ಇನ್ನೊಂದ್ ಹತ್ತು‌ ಮಾಸ್ ಡೈಲಾಗ್ ಬಿಟ್ರೆ ಕರ್ನಾಟಕನೇ ನಂದು ಅಂತೇಳಿ, 'ಬಿಗ್ ಬಾಸ್'' ಹತ್ತನೇ ಮನೆಯಲ್ಲಿ ಹತ್ತಿಪ್ಪತ್ತು ದಿನ ಇದ್ದು ಬಂದ ರಕ್ಷಕ್ ಅವರನ್ನ ಇಲ್ಲಿಯವರೆಗೆ ಆಡಿಕೊಂಡವರು ಒಬ್ಬಿಬ್ಬರಲ್ಲ. ಆದರೆ ಇದ್ಯಾವದಕ್ಕೂ ರಕ್ಷಕ್ ಬುಲೆಟ್ ತಲೆ ಕೆಡಿಸಿಕೊಂಡಿಲ್ಲ. ಟ್ರೋಲ್ ಗಳಿಗೆ ಸೊಪ್ಪು ಹಾಕಲಿಲ್ಲ ಬದಲಿಗೆ ಥೇಟ್ ದರ್ಶನ್ ಅವ್ರಂತೆಯೇ ಆನೆ ನಡೆದಿದ್ದೇ ದಾರಿ ಎಂದು ಚಿತ್ರರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ.

ಇಂಥಾ ರಕ್ಷಕ್ ಬುಲೆಟ್ ಈಗ ಟ್ರೋಲ್ ಮಾಡುವವರಿಗೆ , ತೀರಾ ಅಸಹ್ಯವಾದ ಕಾಮೆಂಟ್ ಮಾಡೋರಿಗೆ ಸವಾಲು ಹಾಕಿದ್ದಾರೆ. ಧಮ್ ಇದ್ದರೆ ನಿಮ್ಮ ಅಸಲಿ ಖಾತೆಯಿಂದ ಕಾಮೆಂಟ್ ಮಾಡಿ ಎಂದಿದ್ದಾರೆ.ಹೌದು, ಅಸಲಿಗೆ ಕಾಲ್ ಎಳೆಯೋರಿಗೆ ಎಂದೇ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದೇ ಬಿಗ್ ಬಾಸ್‌ನಲ್ಲಿದ್ದ ಇಶಾನಿ ಹಾಡೊಂದನ್ನು ಮಾಡಿದ್ದಾರೆ. ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ತನಿಶಾ, ಸಿರಿ, ಅವಿನಾಶ್ ಶೆಟ್ಟಿ, ರಕ್ಷಕ್ , ಹೀಗೆ ಬಿಗ್ ಬಾಸ್‌ನಲ್ಲಿದ್ದವರೆಲ್ಲ ಬಂದಿದ್ದರು. ಒಂದರ್ಥದಲ್ಲಿ ಸ್ನೇಹಿತರ ಪುನರ್ಮಿಲನ ಕಾರ್ಯಕ್ರಮ ಇದಾಗಿತ್ತು.

If you have guts pass the abusive comment using your real Instagram ID says Rakshak Bullet

ಈ ಕಾರ್ಯಕ್ರಮದಲ್ಲಿಯೇ ಮಾತನಾಡಿರುವ ರಕ್ಷಕ್ ಬುಲೆಟ್, ತೀರಾ ಕೊಳಕು ಕಾಮೆಂಟ್‌ಗಳಿಗೆಲ್ಲ ನಾವು ಎಲ್ಲ ತಲೆ ಕೆಡಿಸಿಕೊಳ್ಳಬಾರದು, ನಾನಂತೂ ಸಖತ್ ಎಂಜಾಯ್ ಮಾಡ್ತೀನಿ ಎಂದು ಹೇಳಿದ್ದಾರೆ. ಅಸಭ್ಯವಾಗಿ ಮಾತನಾಡುವವರನ್ನು ]ನಾವು ಹಿಡಿಯೋಕೆ ಆಗಲ್ಲ. ಯಾಕೆಂದರೆ ಯಾರು ತಮ್ಮ ಓರಿಜಿನಲ್ ಪ್ರೊಪೈಲ್‌ಗಳಿಂದ ಹಾಕಲ್ಲ ಎಂದಿದ್ದಾರೆ. ಯಾಕೆಂದರೆ ಅವರಿಗೆ .... ಇಲ್ಲ ಎಂದು ಅರ್ಥ ಎಂದು ಹೇಳಿದ್ಧಾರೆ.

ಅದಕ್ಕೋಸ್ಕರ ನಾನೇ ಹೇಳ್ತೀನಿ ಯಾವಾಗಲೂ ಬೇಕಿದ್ದರೆ ಡೈರೆಕ್ಟ್‌ ಆಗಿ ಬನ್ರಪ್ಪಾ ಕಾಮೆಂಟ್ ಹಾಕಿ ಆಗ ನಮಗೂ ಖುಷಿಯಾಗುತ್ತೆ ಎಂದಿರುವ ರಕ್ಷಕ್, ಈ ನೆಪದಲ್ಲಿ ನಿಮ್ಮನ್ನು ನಾವು ಕೂಡ ನೋಡಿದಂಗೆ ಆಗುತ್ತೆ, ನೀವಷ್ಟೇ ನಮ್ಮನ್ನು ನೋಡಿ ಕಾಮೆಂಟ್ ಮಾಡೋದಲ್ಲ ನಾವು ನಿಮ್ಮನ್ನು ನೋಡಿ ಕಾಮೆಂಟ್ ಹಾಕಬೇಕಲ್ವಾ ಎಂದಿದ್ದಾರೆ.

ಇನ್ನೂ ನೀವೂ ಯಾರು ಇಲ್ಲದಿರ ಝೀರೋ ಫಾಲೋವರ್ಸ್, ಆರು ಜನ ಫಾಲೋವರ್ಸ್ , ಹತ್ತು ಜನ ಫಾಲೋವರ್ಸ್ ಎಷ್ಟೋ ಜನ ಇರ್ತಾರೆ ಬಂದು ಬಿಟ್ಟು ಕಾಮೆಂಟ್ ಪಾಸ್ ಮಾಡ್ತೀರಾ, ಪ್ರತಿಯೊಬ್ಬರಿಗೆ ಮನೆ ಇರುತ್ತೆ, ಅಪ್ಪ ಅಮ್ಮ ಇರ್ತಾರೆ, ಫ್ಯಾಮಿಲಿ ಇರುತ್ತೆ. ಅವರು ಎಲ್ಲ ನೋಡ್ತಾ ಇರ್ತಾರೆ. ಅವರಿಗೆ ಅಂತನೇ ಪ್ರೀತ್ಸೋ ಮನಸುಗಳನ್ನು ಅವರು ಒಂದಿಷ್ಟು ಸಂಪಾದನೆ ಮಾಡಿರ್ತಾರೆ. ನೀವು ಬಂದು ಕಾಮೆಂಟ್ ಹಾಕಿದಾಗ ಆ ಕಾಮೆಂಟ್ ನೋಡಿ ಇನ್ನೊಬ್ಬ ಬರ್ತಾನೆ. ಇವನ್ನೇನೋ ತಿಂತಾವ್ನೇ ಇರು ನಾನು ತಿನ್ತೀನಿ ಅಂತ ಅವನು ಬರ್ತಾನೆ ಇದು ಕೇವಲ ನನ್ನ ಅನುಭವ ಅಲ್ಲ ಎಂದಿರುವ ರಕ್ಷಕ್ ಬುಲೆಟ್ , ಇಶಾನಿ ಅವರಿಗೆ ಬಂದ ಕೆಲ ಕಾಮೆಂಟ್‌ಗಳನ್ನೂ ನಾನು ಓದಿದ್ದೇನೆ, ದಯವಿಟ್ಟು ಇದೆಲ್ಲ ಬೇಡ ಯಾಕೆಂದರೆ ನಾವು ಒಳ್ಳೇ ರೀತಿಯಲ್ಲಿ ಹೋಗ್ತೀದೀವಿ, ಒಳ್ಳೇ ರೀತಿಯಲ್ಲಿಯೇ ಹೋಗೋಣ ಇಶಾನಿಗೆ ಓಳ್ಳೇಯದಾಗಲಿ, ಓಳ್ಳೇ ಕಾಮೆಂಟ್‌ಗಳನ್ನು ಹಂಚಿಕೊಳ್ಳಿ ಎಂದು ತಮ್ಮ ಅಮೂಲ್ಯ ಮಾತುಗಳನ್ನು ಮುಗಿಸಿದ್ಧಾರೆ.

ಅಂದ್ಹಾಗೆ ರಕ್ಷಕ್ ಬುಲೆಟ್ ಸದ್ಯ ಕಿರುತೆರೆಯ ಫೇಮಸ್ ಸೆಲೆಬ್ರಿಟಿಗಳಿಗಾಗಿಯೇ ಆರಂಭಿಸುತ್ತಿರುವ ಹೊಸ ರೀತಿಯ ರಿಯಾಲಿಟಿ ಶೋ 'ಸುವರ್ಣ ಸೆಲೆಬ್ರಿಟಿ ಲೀಗ್'ಮೂಲಕ ನಿಮ್ಮೆದುರು ಬರುತ್ತಿದ್ದಾರೆ. ರಕ್ಷಕ್ ಬುಲೆಟ್ ಜೊತೆ ಈ ಕಾರ್ಯಕ್ರಮದಲ್ಲಿ ಇನ್ನೂ 09ಜನ ಸ್ಫರ್ಧಿಗಳಿದ್ದಾರೆ. ಇನ್ನೂ ಬಿಗ್ ಬಾಸ್ ಕನ್ನಡ ಹತ್ತರ ವಿಜೇತ್ ಕಾರ್ತಿಕ್ ಮಹೇಶ್ ನಿರೂಪಣೆಯಲ್ಲಿ ಈ ರಿಯಾಲಿಟಿ ಕಾರ್ಯಕ್ರಮ ಮೂಡಿ ಬರಲಿದೆ. ಇನ್ನೂ 'ಸುವರ್ಣ ಸೆಲೆಬ್ರಿಟಿ ಲೀಗ್' ಸೆಪ್ಟೆಂಬರ್ 15ರಿಂದ ಆರಂಭ ಆಗುತ್ತಿದೆ. ಪ್ರತಿ ಭಾನುವಾರ 7 ಗಂಟೆಗೆ ಪ್ರಸಾರ ಆಗಲಿದೆ. ಸುಮಾರು 8 ವಾರಗಳ ಕಾಲ ಅಂದರೆ, ಎರಡು ತಿಂಗಳ ಕಾಲ ಕಿರುತೆರೆಯಲ್ಲಿ ಈ ಸಮರ ನಡೆಯಲಿದೆ.

More from Filmibeat

Read more about: rakshak bullet troll sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X