twitter
    For Quick Alerts
    ALLOW NOTIFICATIONS  
    For Daily Alerts

    ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಕನ್ನಡದ ಒಂದೇ ಸಿನಿಮಾ ಆಯ್ಕೆ!

    |

    ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವವೆಂದೇ ಖ್ಯಾತವಾಗಿರುವ ಅಂತರರಾಷ್ಟ್ರೀಯ ಸಿನಿಮಾ ಉತ್ಸವವು 2021 ಜನವರಿ 16 ರಿಂದ ಆರಂಭವಾಗಲಿದೆ.

    ಭಾರತೀಯ ಪನೋರಮಾದಿಂದ ಸಿನಿಮೋತ್ಸವಕ್ಕೆ ಆಯ್ಕೆ ಆಗಿರುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಟ್ವೀಟ್ ಮಾಡಿದ್ದು, ಕನ್ನಡದ ಕೇವಲ ಒಂದು ಸಿನಿಮಾ ಮಾತ್ರವೇ ಆಯ್ಕೆ ಮಾಡಲಾಗಿದೆ.

    ಕನ್ನಡದ 'ಪಿಂಕಿ ಎಲ್ಲಿ?' ಸಿನಿಮಾವನ್ನು ಭಾರತೀಯ ಪನೋರಮಾ ವಿಭಾಗದಲ್ಲಿ ಆಯ್ಕೆ ಮಾಡಿದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ. ಒಟ್ಟು 23 ಸಿನಿಮಾಗಳು ಹಾಗೂ 20 ನಾನ್ ಫೀಚರ್ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.

    IFFI 2020 Announces Official Films Selection for Indian Panorama 2020

    ಪನೊರಮಾ ಪಟ್ಟಿಯಲ್ಲಿರುವ ಕನ್ನಡದ 'ಪಿಂಕಿ ಎಲ್ಲಿ?' ಸಿನಿಮಾವನ್ನು ಪೃಥ್ವಿ ಕೋಣನೂರು ನಿರ್ದೇಶಿಸಿದ್ದಾರೆ. ಪನೊರಮಾ ಪಟ್ಟಿಯಲ್ಲಿ ಮಲಯಾಳಂ ಹಾಗೂ ಮರಾಠಿ ಸಿನಿಮಾಗಳು ಹೆಚ್ಚಿಗಿವೆ. ಮಲಯಾಳಂ ನ ಐದು, ಹಾಗೂ ಮರಾಠಿಯ ಮೂರು ಸಿನಿಮಾಗಳು ಫೀಚರ್ ಫಿಲಂ ನ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

    ಮುಖ್ಯವಾಹಿನಿ ಸಿನಿಮಾಗಳ ವಿಭಾಗದಲ್ಲಿ ತಮಿಳಿನ 'ಅಸುರನ್', ಮಲಯಾಳಂನ ಕಪ್ಪೆಲ, ಹಿಂದಿಯ 'ಚಿಚೋರೆ' ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.

    Recommended Video

    ಪ್ರೀತಿಯ SIL ಗೆ ಶುಭ ಕೋರಿದ ಮೇಘನಾ ರಾಜ್ | Filmibeat Kannada

    51ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವವು ಗೋವಾದಲ್ಲಿ ಜನವರಿ 16 ರಂದು ಉದ್ಘಾಟನೆಗೊಳ್ಳಲಿದ್ದು, ಜನವರಿ 24 ಕ್ಕೆ ಅಂತ್ಯವಾಗಲಿದೆ.

    English summary
    IFFI 2020 Announces Official Films Selection for Indian Panorama 2020. One Kannada movie is in the list.
    Saturday, December 19, 2020, 14:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X