»   » ಚಿತ್ರೋತ್ಸವದಲ್ಲಿ ಲಗಾನ್‌, ಅಶೋಕ...

ಚಿತ್ರೋತ್ಸವದಲ್ಲಿ ಲಗಾನ್‌, ಅಶೋಕ...

Posted By: Super
Subscribe to Filmibeat Kannada

ಬೆಂಗಳೂರು : ಇನ್ನೂ ತೆರೆ ಕಾಣಬೇಕಿರುವ ಶಾರುಖ್‌ ಖಾನ್‌ ನಿರ್ಮಾಣದ 'ಅಶೋಕ ದಿ ಗ್ರೇಟ್‌" ಹಾಗೂ ಅಮೀರ್‌ ಖಾನ್‌ ನಿರ್ಮಾಣದ ಅದ್ವಿತೀಯ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ 'ಲಗಾನ್‌" ಚಿತ್ರಗಳು ಅಕ್ಟೋಬರ್‌ನಲ್ಲಿ ನಗರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ಅಂತರರಾಷ್ಟ್ರೀಯ ಚಿತ್ರೋತ್ಸವ ಸಮಿತಿ ಮತ್ತು ಭಾರತೀಯ ಫಿಲ್ಮ್‌ ಫೆಡರೇಶನ್‌ ನಡುವೆ ನಗರದಲ್ಲಿ ನಡೆದ ಸಭೆಯಾಂದರಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ 20 ಚಿತ್ರಗಳನ್ನು ಪಟ್ಟಿ ಮಾಡಲಾಗಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ಡಾಟ್‌ ಕಾಂ ವರದಿ ಮಾಡಿದೆ. ಬೆಂಗಳೂರಿನಲ್ಲಿ ತೆರೆ ಕಾಣಲು ಸಿದ್ಧವಾಗಿರುವ ಕೆಲವು ಚಿತ್ರಗಳನ್ನು ಇದೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೇ ಪ್ರದರ್ಶಿಸುವ ನಿರ್ಧಾರ ಸಭೆಯಲ್ಲಿ ಕೇಳಿಬಂದಿದೆ.

ಕೆಲವು ಮೂಲಗಳ ಪ್ರಕಾರ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿರುವ ಕೆಲವು ಸಂಭವನೀಯ ಚಿತ್ರಗಳು ಇಂತಿವೆ- ಮನೋಜ್‌ರ 'ನೈಟ್‌", ಶ್ಯಾಮಲನ್‌ರ 'ದಿ ಸಿಕ್ಸ್ತ್‌ ಸೆನ್ಸ್‌" ಹಾಗೂ 'ಅನ್‌ಬ್ರೇಕಬಲ್‌", ಶೇಖರ್‌ ಕಪೂರ್‌ರ 'ಎಲಿಜಬೆತ್‌", ಇಸ್ಮಾಯಿಲ್‌ ಮರ್ಚೆಂಟ್‌ರ 'ಹೀಟ್‌ ಅಂಡ್‌ ಡಸ್ಟ್‌", 'ಹಾವರ್ಡ್ಸ್‌ ಎಂಡ್‌", 'ರಿಮೇನ್ಸ್‌ ಆಫ್‌ ದಿ ಡೇ", 'ಕಾಟನ್‌ ಮೇರಿ" ಹಾಗೂ ಮೀರಾ ನಾಯರ್‌ ಅವರ 'ಸಲಾಂ ಬಾಂಬೆ ಮತ್ತು 'ಮಿಸಿಸಿಪ್ಪಿ ಮಸಾಲಾ".

ಕರ್ನಾಟಕ ರತ್ನ ಡಾ.ರಾಜ್‌ಕುಮಾರ್‌ ಅವರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟಿಸಲು ಬುಲಾವು ನೀಡಲಾಗಿದ್ದು, ರಾಜ್‌ ಇದಕ್ಕೆ ಇನ್ನೂ ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ. 

English summary
Shah Rukh opus to be premiered at IFFI

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada