»   » ಜಗತ್ತೆಲ್ಲಾ ಆತಂಕದಲ್ಲಿರುವಾಗ 32ನೇ ಚಲನಚಿತ್ರೋತ್ಸವ ಮಿಂಚುವುದೇ ?

ಜಗತ್ತೆಲ್ಲಾ ಆತಂಕದಲ್ಲಿರುವಾಗ 32ನೇ ಚಲನಚಿತ್ರೋತ್ಸವ ಮಿಂಚುವುದೇ ?

Posted By: Staff
Subscribe to Filmibeat Kannada

ಬೆಂಗಳೂರು : ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಿಂದ ಪರಿಸ್ಥಿತಿ ಪ್ರಕ್ಷುಬ್ದಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಬೇಕಿದ್ದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಯಶಸ್ಸಿನ ಬಗ್ಗೆ ರಾಜ್ಯ ಸಂದಿಗ್ಧ ಸ್ಥಿತಿಯಲ್ಲಿದೆ.

ಅಕ್ಟೋಬರ್‌ 10ರಂದು ಆರಂಭವಾಗಬೇಕಾಗಿರುವ ಚಿತ್ರೋತ್ಸವಕ್ಕೆ ಎಲ್ಲ ಸಿದ್ಧತೆಗಳೂ ಸಾಗುತ್ತಿರುವಾಗಲೇ ಅಮೆರಿಕಾ ಯುದ್ಧದ ಪರಿಸ್ಥಿತಿಗೆ ಜಗತ್ತನ್ನು ನೂಕಿದೆ. ' ಚಿತ್ರೋತ್ಸವ ತಯಾರಿಯ ಎಲ್ಲ ಹಂತಗಳೂ ಮುಗಿಯುತ್ತಾ ಬಂದಿರುವುದರಿಂದ ಉತ್ಸವವನ್ನು ರದ್ದು ಪಡಿಸುವ ಸಂಭವ ತೀರಾ ಕಡಿಮೆ. ಆದರೆ ಉತ್ಸವದಲ್ಲಿ ಅಮೆರಿಕಾ ಭಾಗವಹಿಸುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ" ಎಂದು ವಾರ್ತಾ ಮಂತ್ರಿ ಎಂ. ಶಿವಣ್ಣ ಹೇಳುತ್ತಾರೆ.

ಈ ನಡುವೆ ಅಮೆರಿಕಾ ದುರಂತದ ಬಳಿಕ ತುರ್ತು ಸಭೆಯಾಂದನ್ನು ಕರೆದ ಚಿತ್ರೋತ್ಸವ ಆಯೋಜನಾ ಸಮಿತಿಯ ಅಧ್ಯಕ್ಷೆ , ಕೇಂದ್ರ ವಾರ್ತಾಮತ್ತು ಪ್ರಸಾರ ಇಲಾಖೆಯ ಸಚಿವೆ, ಸುಷ್ಮಾ ಸ್ವರಾಜ್‌ ಅಮೆರಿಕಾದ ಪ್ರತಿನಿಧಿಗಳು ಚಿತ್ರೋತ್ಸವದಲ್ಲಿ ಭಾಗವಹಿಸದೇ ಇರಬಹುದು. ಅಥವಾ ಅತೀ ಕಡಿಮೆ ಸಂಖ್ಯೆಯ ಪ್ರತಿನಿಧಿಗಳು ಆಗಮಿಸಬಹುದು. ಭಾಗವಹಿಸಬೇಕಾದ ಪ್ರಮುಖ ರಾಷ್ಟ್ರಗಳಾದ ಇರಾನ್‌, ಜಪಾನ್‌, ದಕ್ಷಿಣ ಅಮೆರಿಕಾ ರಾಷ್ಟ್ರಗಳೂ ಚಿತ್ರೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದು ಸಂಶಯಾಸ್ಪದವಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್‌ ದುರಂತಕ್ಕೆ ಅಮೆರಿಕಾ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದರ ಮೇಲೆ ಚಿತ್ರೋತ್ಸವಕ್ಕೆ ಆಗಮಿಸುವ ಪ್ರತಿನಿಧಿಗಳ ಸಂಖ್ಯೆ ಮತ್ತು ಯಶಸ್ಸು ಅಡಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದಾಗ್ಯೂ ಈ ಚಿತ್ರೋತ್ಸವ ನಡೆಸಲು ಸರಕಾರ ಒಪ್ಪಿಕೊಂಡಿದೆ. ಇನ್ನೂ ಒಂದು ಋಣಾತಕ್ಮಕ ಅಂಶವೆಂದರೆ ಈ ಉತ್ಸವ ಸ್ಪರ್ಧೆಯಲ್ಲ. ಆದ್ದರಿಂದ ಭಾಗವಹಿಸುವವರಿಗೆ ಪ್ರಶಸ್ತಿಯ ಆಕರ್ಷಣೆಯೂ ಇರುವುದಿಲ್ಲ. ಚಿತ್ರೋತ್ಸವದಲ್ಲಿ ಹಿರಿಯ ತಾರೆಯರು ಭಾಗವಹಿಸುತ್ತಾರೆ ಮತ್ತು ಉತ್ತಮ ಚಿತ್ರಗಳು ಗುರುತಿಸಲ್ಪಡುತ್ತವೆ. ಅಷ್ಟೆಯಾದ್ದರಿಂದ 32ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದ ಯಶಸ್ಸನ್ನು ಕಾದು ನೋಡಬೇಕಷ್ಟೆ.

English summary
US under attack : International film festival of india in Bangalore is under anxiety

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada