twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ಬ್ರಹ್ಮ ಇಳಯರಾಜಗೆ ಒಲಿದ 'ಪದ್ಮ ವಿಭೂಷಣ'

    By Bharath Kumar
    |

    ಭಾರತ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ಕೇಂದ್ರ ಸರ್ಕಾರದಿಂದ ನೀಡುವ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಗುರುವಾರ ಸಂಜೆ ಪ್ರಕಟಿಸಲಾಗಿದ್ದು, ಸಂಗೀತ ಮಾಂತ್ರಿಕ ಇಳಯರಾಜ ಕೂಡ ಈ ಬಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    2010ರಲ್ಲಿ ಇಳಯರಾಜಗೆ ಪದ್ಮಶ್ರಿ ಪ್ರಶಸ್ತಿ ನೀಡಲಾಗಿತ್ತು. ಈಗ ಪದ್ಮ ವಿಭೂಷಣ ದೊರೆತಿರುವುದಕ್ಕೆ ಸಂಗೀತ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಇಳಯರಾಜ ಅವರು ''ಪದ್ಮವಿಭೂಷಣ ನೀಡುತ್ತಿರುವ ಖುಷಿ ಕೊಟ್ಟಿದೆ. ಇದು ನಮ್ಮ ಜನಕ್ಕೆ ಸಿಗುತ್ತಿರುವ ಗೌರವ ಎಂದು ಪರಿಗಣಿಸುತ್ತೇನೆ'' ಎಂದು ತಿಳಿಸಿದರು.

    ilaiyaraaja Awarded Padma Vibhushan

    ಇಳಯರಾಜಗೆ ಪದ್ಮ ವಿಭೂಷಣ, ಸೂಲಗಿತ್ತಿ ನರಸಮ್ಮಗೆ ಪದ್ಮಶ್ರೀ

    70ನೇ ದಶಕದಿಂದಲೂ ತಮ್ಮ ಸಂಗೀತ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಿರುವ ಸಂಗೀತ ಬ್ರಹ್ಮ, ಸುಮಾರು 6500ಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. 1000 ಸಾವಿರಕ್ಕೂ ಅಧಿಕ ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಎಸ್.ಪಿ ಬಾಲಸುಬ್ರಮಣ್ಯಂ, ಯೇಸುದಾಸ್, ಚಿತ್ರ, ಎಸ್ ಜಾನಕಿ ಅಂತಹ ಗಾಯಕಿಯರು ಇಳಯರಾಜ ಅವರ ಹಾಡುಗಳಿಗೆ ಧ್ವನಿಯಾಗಿದ್ದಾರೆ.

    ಇಳಯರಾಜ ಮೂಲತಃ ತಮಿಳಿಗರಾದರು, ಕನ್ನಡದಲ್ಲೂ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಕನ್ನಡದ ಹಲವು ಹಾಡಿಗಳಿಗೆ ಇಳಯರಾಜ ಸಂಗೀತ ನೀಡಿದ್ದಾರೆ. ಈ ಮೂಲಕ ಇಳಯರಾಜ ಅವರನ್ನ ಕನ್ನಡ ಕಲಾಭಿಮಾನಿಗಳು ಆರಾಧಿಸುತ್ತಾರೆ.

    English summary
    South Indian Music Composer Ilaiyaraaja Awarded With Padma Vibhushan Ahead Of Republic Day 2018.
    Friday, January 26, 2018, 14:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X