For Quick Alerts
  ALLOW NOTIFICATIONS  
  For Daily Alerts

  ಇಳಯರಾಜಾ ಸಂಗೀತ 'ಒಗ್ಗರಣೆ' ರುಚಿ ಹೆಚ್ಚಿಸಿದೆ

  By Rajendra
  |
  <ul id="pagination-digg"><li class="previous"><a href="/news/prakash-raj-oggarane-is-juncture-of-artists-084821.html">« Previous</a>

  ತನಗೂ ಒಂದು ಸಂಗಾತಿ ಬೇಕು, ಒಂಟಿಯಾಗಿ ಬದುಕುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಕಾಳಿದಾಸ ಹೇಗೆ ಕಂಡುಕೊಳ್ಳುತ್ತಾನೆ. ಜೀವನಕ್ಕೆ ಪ್ರೀತಿ ಎಷ್ಟು ಮುಖ್ಯ ಎಂಬ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರವಿದು. ಇದುವರೆಗೂ ನಾನು ಮಾಡದೆ ಇರುವಂತಹ ಪಾತ್ರವಿದು.

  ಇನ್ನು ನನ್ನ ಚಿತ್ರವನ್ನು ಇಳಯರಾಜಾ ಅವರು ಒಪ್ಪಿಕೊಂಡಿದ್ದೇ ಅವರ ದೊಡ್ಡತನ. ಇಳಯರಾಜಾ ಅವರೇ ನನ್ನ ಸಿನಿಮಾಗೆ ಬೇಕು ಎಂದು ಹೇಳುವಷ್ಟು ಉದ್ದಟತನ ನನಗಿಲ್ಲ. ಅವರು ಒಂದು ದೊಡ್ಡ ನದಿ ಇದ್ದಂಗೆ, ಪುಣ್ಯನದಿ ತರಹ ಅವರು. ಜುಳುಜುಳು ಎಂದು ಹರಿಯುವ ಅವರ ಸಂಗೀತ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಖುಷಿ ಸಿಗುತ್ತದೆ. [ಸ್ಟೀವನ್ ಸ್ಪೀಲ್ ಬರ್ಗ್ ಚಿತ್ರದಲ್ಲಿ ಕನ್ನಡಿಗ ಪ್ರಕಾಶ್ ರೈ]

  ಕಾಯ್ಕಿಣಿ ಅವರ ಅದ್ಭುತ ಸಾಹಿತ್ಯ, ಇಳಯರಾಜಾ ಅವರ ಸದಭಿರುಚಿಯ ಹಾಡುಗಳು ಚಿತ್ರದ ಹೈಲೈಟ್. 'ನಾನು ನನ್ನ ಕನಸು' ಚಿತ್ರದ ಬಳಿಕ ನಾನು ಮಾಡುತ್ತಿರುವ ಒಂದು ಒಳ್ಳೆಯ ಸದಭಿರುಚಿಯ ಸಿನಿಮಾ ಇದು. ಚಿತ್ರದ ಹಾಡುಗಳನ್ನು ಕೇಳಿದರೆ ಇದು ಯಾವ ರೀತಿಯ ಸಿನಿಮಾ ಎಂಬುದು ನಿಮಗೆ ಅರ್ಥವಾಗುತ್ತದೆ ಎನ್ನುತ್ತಾರೆ ಪ್ರಕಾಶ್ ರೈ.

  ಈ ಸಿನಿಮಾ ನನ್ನ ಪಾಲಿಗೆ ಸಿಕ್ಕಿದ್ದು ಒಂಥರಾ ಹಬ್ಬದೂಡ ಸಿಕ್ಕಂತಾಗಿದೆ ಎನ್ನುತ್ತಾರೆ ಸಂಯುಕ್ತಾ ಹೊರನಾಡ್. ಬಿ ಸುರೇಶ್ ಅವರ ಮೂಲಕ ನನಗೆ ಈ ಚಿತ್ರದಲ್ಲಿ ಪಾತ್ರ ಸಿಕ್ಕಿತು ಎಂಬುದನ್ನು ಹೇಳಲು ಅವರು ಮರೆಯುವುದಿಲ್ಲ. ಪ್ರಕಾಶ್ ರೈ ಜೊತೆ ಕೆಲಸ ಮಾಡಿದ್ದು ಒಂಥರಾ ಕನಸಿನ ತರಹ ಇದೆ. ಈ ಚಿತ್ರದಲ್ಲಿ ಅಭಿನಯಿಸಿದ ಮೇಲೆ ನಾನು ಇನ್ನಷ್ಟು ಕಲಿತೆ ಎನ್ನುತ್ತಾರೆ ಸಂಯುಕ್ತಾ.

  ಚಿತ್ರದಲ್ಲಿ ಪ್ರಕಾಶ್ ರೈ ಅವರು ನನಗೆ ಮಾವನಾಗಿ ಅಭಿನಯಿಸಿದ್ದಾರೆ. ನನ್ನ ಪಾತ್ರದ ಹೆಸರು ನವೀನ್. ಯುವ ಮತ್ತು ಮಧ್ಯ ವಯಸ್ಕರ ನಡುವಿನ ಇದೊಂದು ಅಪ್ಪಟ ರೊಮ್ಯಾಂಟಿಕ್ ಸಿನಿಮಾ. ಯುವ ಮತ್ತು ಮಧ್ಯ ವಯಸ್ಕರ ನಡುವೆ ನಡೆಯುವ ಚೇತೋಹಾರಿ ಘಟನೆಗಳೇ ಚಿತ್ರದ ಜೀವಾಳ ಎನ್ನುತ್ತಾರೆ ಯುವ ನಟ ತೇಜಸ್.

  (ಪ್ರಕಾಶ್ ರೈ ಹೊಸರುಚಿ 'ಒಗ್ಗರಣೆ' ಟೇಸ್ಟ್ ಮಾಡಿ)

  <iframe width="640" height="360" src="//www.youtube.com/embed/LrqY7c1U6Hw?feature=player_embedded" frameborder="0" allowfullscreen></iframe>
  <ul id="pagination-digg"><li class="previous"><a href="/news/prakash-raj-oggarane-is-juncture-of-artists-084821.html">« Previous</a>
  English summary
  Prakash Raj's trilingual romantic comedy film Oggarane releasing on 6th June, 2014. It stars Prakash Raj and Sneha and features Urvashi, Tejus and Samyuktha Hornad in supporting roles. The film features the original score and soundtrack by Ilaiyaraja. Here is the movie highlights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X