»   » ಸಮುದ್ರತೀರದ ಸೆಕ್ಸ್ ಬಗ್ಗೆ ತಹತಹಿಸಿದ ಇಲಿಯಾನಾ

ಸಮುದ್ರತೀರದ ಸೆಕ್ಸ್ ಬಗ್ಗೆ ತಹತಹಿಸಿದ ಇಲಿಯಾನಾ

By: ಉದಯರವಿ
Subscribe to Filmibeat Kannada

ಇತ್ತೀಚೆಗೆ ಹಾಟ್ ಬ್ಯೂಟಿ ಇಲಿಯಾನಾ ಡಿಕ್ರೂಸ್ ಸೆಕ್ಸ್ ಬಗ್ಗೆ ಸೆಕ್ಸಿ ಹೇಳಿಕೆ ನೀಡಿ ಚಿತ್ರರಸಿಕರ ಹೃದಯದಲ್ಲಿ ಐಟಂ ಡಾನ್ಸ್ ಮಾಡಿದ್ದಾರೆ. ನಿಯತಕಾಲಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಇಲಿಯಾನಾ ಮತ್ತೊಮ್ಮೆ ಸೆಕ್ಸ್ ಬಗ್ಗೆ ಹಾಟ್ ಹಾಟ್ ಕಾಮೆಂಟ್ಸ್ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಸಂದರ್ಶನಲ್ಲಿ ಅವರು ತಮ್ಮ ವ್ಯಕ್ತಿತ್ವ, ಸಂಬಂಧಗಳ ಬಗೆಗೆ ಅಭಿಪ್ರಾಯ, ಲವ್ ಅಂಡ್ ಸೆಕ್ಸ್ ಬಗ್ಗೆ ಬಾಯ್ತುಂಬ ಮಾತನಾಡಿದ್ದಾರೆ. ಪ್ರಿಯಕರನೊಂದಿಗೆ ನೀವು ಬಯಸುವ ಡೇಟ್ ಯಾವ ರೀತಿ ಇರಬೇಕು ಎಂಬ ಪ್ರಶ್ನೆಗೆ ಇಲಿಯಾನಾ ಉತ್ತರ ಬಲು ರೋಚಕವಾಗಿದೆ. [ನಡುರಾತ್ರೀಲಿ ಬ್ರಾ ಬಗ್ಗೆ ಇಲಿಯಾನಾ ಬ್ಲಾ ಬ್ಲಾ ಬ್ಲಾ]

Ileana D'Cruz1

"ಸಮುದ್ರತೀರದಲ್ಲಿ ಒಂದು ಪಿಕ್ನಿಕ್ ಬ್ಯಾಸ್ಕೆಟ್, ಒಂದು ಬ್ಲಾಂಕೆಟ್. ಅದರ ಪಕ್ಕದಲ್ಲಿ ಬೆಚ್ಚಗಿನ ಅನುಭವಕ್ಕಾಗಿ ಬೋನ್ ಫೈರ್. ನಕ್ಷತ್ರಗಳನ್ನು ನೋಡುತ್ತಾ ಮಾತನಾಡುತ್ತಾ....ರುಚಿಕರವಾದ ಊಟ, ವೈನ್ ಹೀರುತ್ತಾ ಸರಸಸಲ್ಲಾಪದಲ್ಲಿ ತೊಡಗಬೇಕು. ಇದೇ ಕ್ರಮದಲ್ಲಿ ರಮ್ಯಾದಮ್ಯವಾದ ಸೆಕ್ಸ್ ಅನುಭವಿಸಬೇಕು" ಎಂದಿದ್ದಾರೆ.

ಆಹಾ ಎಂಥಹಾ ಕವಿ ಹೃದಯ ಇಲಿಯಾನಾ ಅವರದ್ದು ಅನ್ನಿಸುತ್ತದೆ ಅಲ್ಲವೇ? ಇತರೆ ವಿಷಯಗಳ ಬಗ್ಗೆಯೂ ಮಾತನಾಡುತ್ತಾ, ಒಬ್ಬ ವ್ಯಕ್ತಿಯನ್ನು ನೀನು ನಿಜವಾಗಿಯೂ ಪ್ರೀತಿಸಿದರೆ...ಅವನೂ ನಿನ್ನನ್ನು ಅಷ್ಟೇ ಪ್ರೀತಿಸುವವನಾದರೆ ಲಕ್ಕಿ ಗರ್ಲ್ ಆಗುತ್ತೀಯಾ. ಪ್ರೇಮಿಗಳ ನಡುವೆ ಸೆಕ್ಸ್ ನಡೆಯುವುದು ಸಾಮಾನ್ಯ. ಆದರೆ ಸೆಕ್ಸ್ ನಡೆದಷ್ಟು ಮಾತ್ರಕ್ಕೆ ಅವರಿಬ್ಬರ ನಡುವೆ ನಿಜವಾದ ಪ್ರೀತಿ ಇದೆ ಎಂದರ್ಥವಲ್ಲ ಎಂದಿದ್ದಾರೆ ವೇದಾಂತಿಯಂತೆ.

Ileana D'Cruz2

'ಬರ್ಫಿ' ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಇಲಿಯಾನಾ, ಆ ಚಿತ್ರ ಯಶಸ್ವಿಯಾದ ಬಳಿಕ ದಕ್ಷಿಣದ ಚಿತ್ರಗಳಿಗೆ ಟಾಟಾ ಹೇಳಿದರು. ಆನಂತರ ಅವರ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಹೇಳಿಕೊಳ್ಳುವಂತಹ ಸದ್ದೇನು ಮಾಡಲಿಲ್ಲ. ಇದರಿಂದ ಅವಕಾಶಗಳು ಕಡಿಮೆಯಾದವು. ಶೀಘ್ರದಲ್ಲೇ ಶಾರುಖ್ ಖಾನ್ ಜೊತೆಗೆ ತೆರೆಹಂಚಿಕೊಳ್ಳುತ್ತಿದ್ದಾರೆ.

English summary
Ileana D'Cruz who will next be seen on the big screen with Shahrukh Khan in Raees is not just bold on screen but off it as well. In an exclusive interview to a leading magazine, the actress has opened up about shocking aspects.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada