ಯಾರ್ರೀ ಹೇಳಿದ್ದು 'ಆ' ಮನೆ ಲಕ್ಕಿ ಅಂತ? ಅಷ್ಟು 'ವೀಕ್' ವ್ಯಕ್ತಿ ನಾನಲ್ಲ ಎಂದ ಯಶ್!

By Harshitha

ಬನಶಂಕರಿ ಮೂರನೇ ಬ್ಲಾಕ್ ನಲ್ಲಿರುವ ಮನೆಯಿಂದ ನಟ ಯಶ್ ಹೊರನಡೆದು ವರ್ಷಗಳೇ ಉರುಳಿವೆ. ಆದರೂ, ಆ ಮನೆ ಸುತ್ತ ಎದ್ದಿರುವ ಬಾಡಿಗೆ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ.

ನಟ ಯಶ್ ಗೆ 'ಆ' ಮನೆ ಸಿಕ್ಕಾಪಟ್ಟೆ ಲಕ್ಕಿ. ಆ ಮನೆಗೆ ಯಶ್ ಕಾಲಿಟ್ಟ ಮೇಲೆಯೇ ಹಿಟ್ ಮೇಲೆ ಹಿಟ್ ಕೊಡಲು ಶುರು ಮಾಡಿದ್ದು. ಹೀಗಾಗಿ, ಆ ಮನೆಯನ್ನ ಓನರ್ ಗೆ ಬಿಟ್ಟುಕೊಡುತ್ತಿಲ್ಲ ಅಂತ ಕಾಮೆಂಟ್ ಮಾಡುವವರೂ ಇದ್ದಾರೆ. ಮನೆ ಖಾಲಿ ಮಾಡದ ಯಶ್, ಬಾಡಿಗೆಯನ್ನೂ ಕೊಡದ ಕಾರಣ ಮನೆ ಮಾಲೀಕರು ಪೊಲೀಸ್ ಹಾಗೂ ಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣ ಕೋರ್ಟ್ ಮೆಟ್ಟಿಲೇರಿ ಮೂರು ವರ್ಷಗಳಾಗಿವೆ. ಆದರೂ, ರಗಳೆಗೆ ಪೂರ್ಣ ವಿರಾಮ ಬಿದ್ದಿಲ್ಲ. ರಾಕಿಂಗ್ ಸ್ಟಾರ್ ಗೆ ಅದು ಅದೃಷ್ಟ ತಂದುಕೊಟ್ಟ ಮನೆಯಾದ್ದರಿಂದ, ಅದನ್ನ ಹಾಗೇ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ಕೂಡ ವರದಿ ಮಾಡಿವೆ. ಅದನ್ನ ಯಶ್ ಕೂಡ ಕಣ್ಣಾರೆ ನೋಡಿದ್ಮೇಲೆ, ಇಂದಿನ ಫೇಸ್ ಬುಕ್ ಲೈವ್ ನಲ್ಲಿ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ.

ಹಾಗಾದ್ರೆ, 'ಅದೃಷ್ಟ' ತಂದ ಮನೆ ಬಗ್ಗೆ ಯಶ್ ಹೇಳಿದ್ದಾದರೂ ಏನು.? ಫೋಟೋ ಸ್ಲೈಡ್ ಗಳಲ್ಲಿ ಅವರ ಮಾತುಗಳಲ್ಲೇ ಓದಿರಿ...

ಮೂಢನಂಬಿಕೆ ನನಗೆ ಇಲ್ಲ!

ಮೂಢನಂಬಿಕೆ ನನಗೆ ಇಲ್ಲ!

''ಆ ಮನೆ ನನಗೆ ಲಕ್ಕಿ ಅಂತ ಕೆಲವು ಪ್ರೋಗ್ರಾಂಗಳಲ್ಲಿ ನಾನು ನೋಡಿದೆ. ಆದ್ರೆ, ಅಂತಹ ಮೂಢನಂಬಿಕೆಗಳು ನನಗೆ ಇಲ್ಲ. ನಾನು ಯಾವ್ಯಾವ ಮನೆಗಳಲ್ಲಿ ಇದ್ನೋ, ಆ ಎಲ್ಲ ಮನೆಗಳಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದೇನೆ'' ಎಂದು ಫೇಸ್ ಬುಕ್ ಲೈವ್ ನಲ್ಲಿ ಯಶ್ ಹೇಳಿದ್ದಾರೆ.

ಆ ಮನೆ ಬಿಟ್ಟ ಮೇಲೆ ಹಿಟ್ ಕೊಟ್ಟಿದ್ದು.!

ಆ ಮನೆ ಬಿಟ್ಟ ಮೇಲೆ ಹಿಟ್ ಕೊಟ್ಟಿದ್ದು.!

''ನಿಜ ಹೇಳ್ಬೇಕಂದ್ರೆ, ಆ ಮನೆ ಬಿಟ್ಟ ಮೇಲೆ 'ರಾಜಾಹುಲಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬಂದಿದ್ದು. ಎರಡೂ ಹಿಟ್ ಸಿನಿಮಾಗಳೇ.!'' ಎಂದಿದ್ದಾರೆ ನಟ ಯಶ್

ವೀಕ್ ವ್ಯಕ್ತಿ ನಾನಲ್ಲ

ವೀಕ್ ವ್ಯಕ್ತಿ ನಾನಲ್ಲ

''ಒಂದು ಮನೆಯಿಂದ ಸಿನಿಮಾ ಹಿಟ್ ಆಗುತ್ತೆ ಅಂತ ನಂಬುವ ವೀಕ್ ವ್ಯಕ್ತಿ ನಾನಲ್ಲ. ನನ್ನ ಕೆಲಸ, ನನ್ನ ಪರಿಶ್ರಮದಿಂದ ಗೆಲ್ತೀನಿ, ಗೆಲ್ಲುತ್ತಿದ್ದೇನೆ ಎಂಬ ನಂಬಿಕೆ ಇಟ್ಟುಕೊಂಡಿರುವ ವ್ಯಕ್ತಿ ನಾನು'' ಅಂತಾರೆ ಯಶ್

ಮನೆಯಿಂದ ನನಗೇನೂ ಅದೃಷ್ಟ ಇಲ್ಲ

ಮನೆಯಿಂದ ನನಗೇನೂ ಅದೃಷ್ಟ ಇಲ್ಲ

''ಅದು ಯಶ್ ಗೆ ಅದೃಷ್ಟದ ಮನೆ. ಹೀಗಾಗಿ ಅವರು ಅದನ್ನ ಬಿಡುತ್ತಿಲ್ಲ ಅಂತ ಯಾರೋ ನಂಬಿಕೊಂಡಿದ್ದಾರೆ. ಅದು ಸತ್ಯ ಅಲ್ಲ. ಮನೆ ಇಲ್ಲದೆ ಬದುಕಿ ಬಂದವನು ನಾನು. ಆ ಮನೆಯಿಂದ ನನಗೇನೂ ಅದೃಷ್ಟ ಇಲ್ಲ. ನಾನು ಒಳ್ಳೆ ಸಿನಿಮಾ ಮಾಡಿದ್ರೆ ನೋಡ್ತೀರಾ, ಇಲ್ಲ ಅಂದ್ರೆ ನಾನು ಯಾವ ಮನೆಯಲ್ಲಿ ಇದ್ದರೇನು.?'' - ನಟ ಯಶ್

More from Filmibeat

English summary
''I'm not a weak person to believe that house was lucky'' says Rocking Star Yash in his Facebook live.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X