For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನದಲ್ಲಿ ದರ್ಶನ್ ಸಿನಿಮಾ! ಅಭಿಮಾನಿಗಳ ಸಂಭ್ರಮಾಚರಣೆ

  By ಫಿಲ್ಮೀಡೆಸ್ಕ್‌
  |

  ನಟ ದರ್ಶನ್ ಸಿನಿಮಾಗಳು ಸಾಮಾನ್ಯವಾಗಿ ತೆಲುಗು, ತಮಿಳು, ಹಿಂದಿ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತವೆ. ಹೊಸ ಸುದ್ದಿಯೆಂದರೆ ಪಾಕಿಸ್ತಾನದಲ್ಲೂ ದರ್ಶನ್ ಸಿನಿಮಾ ಬಿಡುಗಡೆ ಆಗಿದೆಯಂತೆ!

  ಇದು ನಿಜವಾಗ್ಲೂ ಸತ್ಯನಾ ಅನ್ನೋ ಪ್ರಶ್ನೆ ಕಾಡ್ತಿದೆ | Filmibeat Kannada

  ಪಾಕಿಸ್ತಾನದ ಕರಾಚಿಯ ಚಿತ್ರಮಂದಿರವೊಂದರಲ್ಲಿ ದರ್ಶನ್ ಸಿನಿಮಾ ಬಿಡುಗಡೆ ಆಗಿದೆ ಎಂಬ ಸುದ್ದಿಯು ಚಿತ್ರವೊಂದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದರ್ಶನ್ ಅಭಿಮಾನಿಗಳು ಈ ಸುದ್ದಿಯನ್ನು ವೈರಲ್ ಮಾಡಿದ್ದಾರೆ.

  ದರ್ಶನ್ ಅಭಿನಯದ ಐರಾವತ ಸಿನಿಮಾವು 'ಗ್ಯಾಂಗ್‌ಸ್ಟರ್' ಹೆಸರಿನಲ್ಲಿ ಉರ್ದು ಭಾಷೆಗೆ ಡಬ್ ಆಗಿ ಕರಾಚಿಯ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ ಎಂಬ ಒಕ್ಕಣೆಯೊಂದಿಗೆ, ಮುಸ್ಲಿರಂತೆ ಕಾಣುವ ಕೆಲವು ಮಂದಿ ಇರುವ, ದರ್ಶನ್ ಅವರ ಐರಾವತ ಸಿನಿಮಾದ ಪೋಸ್ಟರ್ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಈ ಬಗ್ಗೆ ಸುದ್ದಿಮಾಧ್ಯಮದೊಂದಿಗೆ ಮಾತನಾಡಿರುವ ಐರಾವತ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್, 'ನನಗೂ ಸಹ ಸಾಮಾಜಿಕ ಜಾಲತಾಣ ನೋಡಿ ವಿಷಯ ಗೊತ್ತಾಯಿತು'. ಎಂದಿದ್ದಾರೆ.

  ಚಿತ್ರದ ಸತ್ಯಾಸತ್ಯತೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲವಾದರೂ ಚಿತ್ರವು ಸಖತ್ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ದರ್ಶನ್ ಹೊರತಾಗಿ ಇನ್ನಾವ ಕನ್ನಡ ನಟರ ಸಿನಿಮಾಗಳೂ ಸಹ ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿಲ್ಲ ಎನ್ನುತ್ತಿದ್ದಾರೆ.

  English summary
  A image circulating in social media that Darshan's Airavatha movie dubbed to Urdu and released in Pakistan's Karachi theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X