»   » ಬಿಸಿ-ಬಿಸಿ ಉಪ್ಪಿಟ್ಟಿಗೆ ಬಗೆ-ಬಗೆ ಪ್ರಚಾರ

ಬಿಸಿ-ಬಿಸಿ ಉಪ್ಪಿಟ್ಟಿಗೆ ಬಗೆ-ಬಗೆ ಪ್ರಚಾರ

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಇದೀಗ ಸದ್ಯಕ್ಕೆ(ಆಗಸ್ಟ್ 14) 'ಉಪ್ಪಿ' ಮೇನಿಯಾ ಶುರುವಾಗಿದೆ. ಈಗಾಗಲೇ ಭಾರಿ ಸೌಂಡ್ ಮಾಡುತ್ತಿರುವ 'ಉಪ್ಪಿ 2' ಚಿತ್ರದ ಹಾಡುಗಳು ಹಾಗೂ ಪೋಸ್ಟರ್ ಗಳು ಪ್ರೇಕ್ಷಕರನ್ನು ಚಿತ್ರ ಬಿಡುಗಡೆಯಾಗುವಲ್ಲಿವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲಾ.

ಇದೀಗ 'ಉಪ್ಪಿ 2' ಚಿತ್ರದ ಮತ್ತೊಂದು ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಚಿತ್ರ-ವಿಚಿತ್ರ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಕನ್ ಫ್ಯೂಶನ್ ಸೃಷ್ಟಿ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಇನ್ನೊಂದು ಸ್ಪೆಷಾಲಿಟಿ ತೋರಿಸಿದ್ದಾರೆ.[ಉಪ್ಪಿ 2 ಹವಾಕ್ಕೆ ಬೆಚ್ಚಿದ ತೆಲುಗಿನ ಪ್ರಿನ್ಸ್ ಮಹೇಶ್]


Impressive promotions for Upendra's 'Uppi 2'

ಅದೇನಂತೀರಾ, ಇದುವರೆಗೂ ಖಾಲಿ ಪೋಸ್ಟರ್ ಬಿಡುಗಡೆ ಮಾಡಿ ಪೂರ್ತಿಗೊಳಿಸಲು ಅಭಿಮಾನಿಗಳಿಗೆ ಚಾನ್ಸ್ ಬಿಟ್ಟುಕೊಟ್ಟಿದ್ದ ಉಪೇಂದ್ರ ಇದೀಗ ಉಲ್ಟಾ ಪೋಸ್ಟರ್ ಬಿಡುಗಡೆ ಮಾಡಿ ಭಾರಿ ಕುತೂಹಲ ಮೂಡಿಸಿದ್ದಾರೆ.


ಈಗಾಗಲೇ ಉಲ್ಟಾ ಪೋಸ್ಟರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಉಪ್ಪಿ ಅಭಿಮಾನಿಗಳು ಫುಲ್ ಖುಷ್ ಆಗಿಬಿಟ್ಟಿದ್ದಾರೆ. ಇನ್ನೇನು ಮುಂದಿನ ವಾರದಲ್ಲಿ ಚಿತ್ರ ತೆರೆ ಮೇಲೆ ಅಪ್ಪಳಿಸಲಿದ್ದು, ಸ್ಯಾಂಡಲ್ ವುಡ್ ನಲ್ಲಿ ಉಪ್ಪಿ ಹವಾ ಗ್ಯಾರಂಟಿ.[250 ಚಿತ್ರ ಮಂದಿರಗಳಲ್ಲಿ 'ಉಪ್ಪಿ 2' ಲಭ್ಯ]


ಎಲ್ಲೆಲ್ಲಿ 'ಉಪ್ಪಿ 2' ಚಿತ್ರ ತೆರೆ ಕಾಣುತ್ತಿದೆ ಆ ಚಿತ್ರಮಂದಿರದ ಎದುರುಗಡೆ 'ಉಪ್ಪಿ 2' ಉಲ್ಟಾ ಕಟೌಟ್ ನಿಲ್ಲಿಸಲಾಗುತ್ತಂತೆ. ಈ ಬಗ್ಗೆ ನಮ್ ಸಿನಿಮಾ ಡಾಟ್ ಕಾಮ್ ತಮ್ಮ ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.ಚಿತ್ರದ ಪ್ರೋಮೋಷನ್ ಗಾಗಿ ಈ ತರಹದ ಡಿಫರೆಂಟ್ ಐಡಿಯಾಗಳು ಬರೀ ಉಪೇಂದ್ರ ತಲೆಯಲ್ಲಿ ಮಾತ್ರ ಬರೋಕೆ ಸಾಧ್ಯ ಅಂತ ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.[ರಿಯಲ್ ಸ್ಟಾರ್ 'ಉಪ್ಪಿ 2' ಗೆ ಟ್ರೈಲರೇ ಇಲ್ವಂತೆ!]


ಚಿತ್ರದಲ್ಲಿ ಉಪೇಂದ್ರ ಅವರು ಡಿಫರೆಂಟ್ ಕಾನ್ಸೆಪ್ಟ್ ಗಳನ್ನು ತಂದಿದ್ದು, ನೀನು-ನಾನು ಅಂತ ಎಲ್ಲಾ ಆಯ್ಕೆಗಳನ್ನು ಪ್ರೇಕ್ಷಕರಿಗೆ ಬಿಟ್ಟು ಬಿಟ್ಟಿದ್ದಾರೆ. ಮಾತ್ರವಲ್ಲದೇ ಈ ಉಲ್ಟಾ ಕಟೌಟ್ ನ ಉದ್ದೇಶ ಏನಪ್ಪಾ ಅಂದ್ರೆ ನೀನು ಪ್ರಪಂಚವನ್ನು ಬೇರೆ ರೀತಿಯಲ್ಲಿ ನೋಡು, ಉಲ್ಟಾ ಮಾಡಿ ನೋಡಿ ಅಂತ ಸಂದೇಶ ಕೊಟ್ಟ ಹಾಕಿದೆ.


ಆಗಸ್ಟ್ 14 ರಂದು ಕರ್ನಾಟಕ, ಮುಂಬೈ, ಪುಣೆ, ಆಂಧ್ರ ಸೇರಿದಂತೆ ವಿವಿಧ ಕಡೆ ಸುಮಾರು 600 ಥಿಯೇಟರ್ ಗಳಲ್ಲಿ 'ಉಪ್ಪಿ 2' ಚಿತ್ರ ತೆರೆ ಕಾಣುತ್ತಿದೆ. ಒಟ್ನಲ್ಲಿ ಬರೀ 'ನೀನು' ಅನ್ನೋ ವಿಚಾರವನ್ನು ಮಾತ್ರ ಎತ್ತಿ ಹಿಡಿಯುತ್ತಿರುವ ಉಪೇಂದ್ರ ಅದೇನು ಕಮಾಲ್ ಮಾಡ್ತಾರೆ ಅಂತ ಚಿತ್ರ ಬಿಡುಗಡೆಯಾದ ಮೇಲೆ ತಿಳಿಯಬೇಕಿದೆ.


English summary
Kannada Actor Upendra's 'Uppi 2' promotions are very innovative!. Ulta cutout of infront of Theatres. 'Uppi 2' features Kannada actor Upendra, Actress Kristina Akheeva in the lead role. The movie is directed by Upendra. Movie releasing on August 14th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada