For Quick Alerts
  ALLOW NOTIFICATIONS  
  For Daily Alerts

  ಸಂಧಾನ ಸಕ್ಸಸ್: ಒಂದಾದ ಮಾಲಾಶ್ರೀ-ಇಮ್ರಾನ್ ಸರ್ದಾರಿಯಾ

  By Suneetha
  |

  ಇತ್ತೀಚೆಗೆ ಕೆಲವು ಎರಡು ದಿನಗಳಿಂದ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮತ್ತು ನಟಿ ಮಾಲಾಶ್ರೀ ಅವರ ನಡುವೆ ದೊಡ್ಡ ಸಮರವೇ ನಡೆದಿತ್ತು. ಎರಡೂ ಕಡೆಯವರು ಸುದ್ದಿಗೋಷ್ಠಿ ಮಾಡಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೇ ಸುರಿಸಿದ್ದರು.

  ಇದೀಗ ಎರಡೂ ಕಡೆಯವರು ಕೂತು ಸಮಸ್ಯೆ ಬಗೆಹರಿಸಲು ಭಗೀರಥ ಪ್ರಯತ್ನ ಶುರು ಮಾಡಿದ್ದು ಇವರಿಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಹಿರಿಯ ನಟ ದೊಡ್ಡಣ್ಣ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸಾಥ್ ಕೊಟ್ಟಿದ್ದಾರೆ.[ಇಮ್ರಾನ್ ಹೇಳಿದ್ದೆಲ್ಲಾ 'ಸುಳ್ಳೇ ಸುಳ್ಳು' ಎಂದ ನಟಿ ಮಾಲಾಶ್ರೀ.!]

  ಅಂತೂ ಕೊನೆಗೂ ಎರಡು ಪಾರ್ಟಿಯವರು ಪ್ಯಾಚಪ್ ಮಾಡಿಕೊಳ್ಳಲು ನಿರ್ಧರಿಸಿದ್ದು, ಜಂಟಿಯಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆದಿದ್ದಾರೆ.[ಕೊಬ್ರಿ ಮಂಜು-ಇಮ್ರಾನ್ ವಿರುದ್ಧ ಗುಡುಗಿದ ಮಾಲಾಶ್ರೀ ಪತಿ ರಾಮು!]

  ಸಂಧಾನ ಸಭೆಯಲ್ಲಿ ನಿರ್ಮಾಪಕ ಕೆ.ಮಂಜು, ನಟಿ ಮಾಲಾಶ್ರಿ, 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ನಿರ್ಮಾಪಕ ರಾಮು ಮುಂತಾದವರು ಭಾಗವಹಿಸಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯಾರೆಲ್ಲಾ ಏನೇನು ಹೇಳಿದ್ದಾರೆ ಅನ್ನೋದನ್ನ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  ಮೊದಲು ಮುನಿರತ್ನಂ ಸರದಿ

  ಮೊದಲು ಮುನಿರತ್ನಂ ಸರದಿ

  "ಬರೀ ಮಿಸ್ ಅಂಡರ್ ಸ್ಟ್ಯಾಂಡಿಂಗ್ ನಿಂದ ಇಷ್ಟೆಲ್ಲಾ ಆಗಿದ್ದು, ಮೊದಲು ಸಮಸ್ಯೆ ಶುರು ಆಗಿದ್ದು ಇಮ್ರಾನ್ ಅವರ ಮೆಸೇಜ್ ನಿಂದ. ಸಮಸ್ಯೆ ಇನ್ನೂ ಹೆಚ್ಚಾಗುವ ಬದಲು ಇಲ್ಲಿಗೆ ಮುಗಿದರೆ ಒಳ್ಳೆಯದು".- ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ.['ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!]

  ಕುಳಿತು ಬಗೆ ಹರಿಸೋಣ

  ಕುಳಿತು ಬಗೆ ಹರಿಸೋಣ

  "ರಾತ್ರಿ ನಾನು ರಾಮು, ಮಂಜು ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ನಡೆಸಿ ಸಮಸ್ಯೆ ಸರಿಪಡಿಸುವ ಬಗ್ಗೆ ಮಾತಾಡಿದ್ದೇವೆ. ಒಬ್ಬ ಹೆಣ್ಣು ಮಗಳನ್ನು ಮಾಧ್ಯಮದ ಮುಂದೆ ಕೂರಿಸಿ ವಿವಾದ ಮಾಡೋದು, ಅವಳ ಕಣ್ಣಲ್ಲಿ ಕಣ್ಣೀರು ಹಾಕಿಸೋದು ಅಷ್ಟು ಚೆನ್ನಾಗಿರಲ್ಲ ಅಂತ ಸಮಸ್ಯೆಗೆ ತೆರೆ ಎಳೆಯತ್ತೇವೆ".- ಮುನಿರತ್ನ.[ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

  ನಿರ್ದೇಶಕ ಇಮ್ರಾನ್ ಸರ್ದಾರಿಯಾ

  ನಿರ್ದೇಶಕ ಇಮ್ರಾನ್ ಸರ್ದಾರಿಯಾ

  "ಹೌದು ನಾನೇ ಮೆಸೇಜ್ ಮಾಡಿದ್ದು, ಮೀಡಿಯಾದ ಮುಂದೆ ಮೇಡಂ ಅತ್ತಿದ್ದು ನೋಡಿ ನನಗೆ ತುಂಬಾ ಬೇಸರ ಆಯ್ತು. ಐ ಯಾಮ್ ರಿಯಲಿ ಸಾರಿ. ಮೇಡಂ ನನ್ನನ್ನು ದೊಡ್ಡ ಮನಸ್ಸು ಮಾಡಿ ಕ್ಷಮಿಸಬೇಕು. ಮೇಡಂ ಮನಸ್ಸು ನೋಯಿಸೋ ಇಚ್ಚೇ ನನಗೆ ಖಂಡಿತ ಇರಲಿಲ್ಲ, ಇದು ಬೇಕೂಂತಾ ಮಾಡಿದ್ದಲ್ಲ. ಇದೀಗ ನನ್ನ ಜೊತೆ ಸಿನಿಮಾ ಮುಂದುವರಿಸಲು ಮೇಡಂ ಒಪ್ಪಿದ್ದಾರೆ ಖುಷಿ ಆಯ್ತು. ಮೇಡಂ ಇವತ್ತೇ ಅಬ್ರಾಡ್ ಗೆ ಹೊರಡುತ್ತಿದ್ದಾರೆ ಹಾಲಿಡೇ ಎಂಜಾಯ್ ಮಾಡಲು ಹಾಗಾಗಿ ವಾಪಸ್ ಬಂದ ಬಳಿಕ ಶೂಟಿಂಗ್ ಆರಂಭ ಆಗುತ್ತೆ". -ಇಮ್ರಾನ್.

  ಕೆ.ಮಂಜು ಹೆಸರು ಬರಲು ಕಾರಣ

  ಕೆ.ಮಂಜು ಹೆಸರು ಬರಲು ಕಾರಣ

  "ಕೆ.ಮಂಜು ಅವರ ಹೆಸರನ್ನು ಈ ಮೊದಲು ಬಳಸಲು ಕಾರಣ, ಶೂಟಿಂಗ್ ಯಾಕೆ ಡಿಲೇ ಆಗುತ್ತಿದೆ ಅಂತ ಮಂಜು ಅವರು ಕೇಳಿದ್ರು, ಅದಕ್ಕೆ ಅವರ ಹೆಸರು ಬಂತು ಬಿಟ್ರೆ ಬೇರೆ ಉದ್ದೇಶ ಏನೂ ಇರಲಿಲ್ಲ. ಇನ್ನು 'ಪರ್ಫಾಮೆನ್ಸ್ ಇಸ್ ನಾಟ್ ಅಪ್ ಟೂದ ಮಾರ್ಕ್", ಅಂತ ಮೆಸೇಜ್ ಮಾಡಿದ್ದು, ಅದು ನನ್ನ ಅಭಿಪ್ರಾಯ ಆಗಿತ್ತು. ಆದರೆ ಅದರ ಅರ್ಥ ಮಾಲಾಶ್ರೀ ಅವರಿಗೆ ಆಕ್ಟಿಂಗ್ ಬರಲ್ಲ ಅಂತ ಅಲ್ಲ. ಅದರ ಅರ್ಥ ಅವರು ಸರಿಯಾದ ಸಮಯಕ್ಕೆ ಬರುವ ವಿಚಾರ ಅಲ್ಲದೆ ಅವರ ನಿರ್ವಹಣೆಯನ್ನು ಇನ್ನಷ್ಟು ಇಂಪ್ರೂವೈಸ್ ಮಾಡಿಕೊಳ್ಳುವ ಬಗ್ಗೆ ಅಂದಿದ್ದು, ಆದರೆ ಅದು ತಪ್ಪು ಅರ್ಥ ಆಗಿ ಇಷ್ಟೆಲ್ಲಾ ಆಯ್ತು". -ಇಮ್ರಾನ್

  ನಿರ್ಮಾಪಕ ಕೆ.ಮಂಜು

  ನಿರ್ಮಾಪಕ ಕೆ.ಮಂಜು

  'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಅವರು ಎಲ್ಲರ ಮುಂದೆ ಕ್ಲಾರಿಫೀಕೇಶನ್ ಕೊಟ್ಟಿದ್ದಾರೆ. ಅಲ್ಲದೇ ಬಹಿರಂಗವಾಗಿ ಮಾಲಾಶ್ರೀ ಅವರಿಗೆ ಕ್ಷಮೆ ಕೂಡ ಕೇಳಿದ್ದಾರೆ. ಸಿನಿಮಾಗೆ ರಮೇಶ್ ಅವರು ದುಡ್ಡು ಹಾಕುತ್ತಾರೆ, ನಾವು ಯಶಸ್ವಿಯಾಗಿ ಸಿನಿಮಾ ರಿಲೀಸ್ ಮಾಡಿ ಕೊಡುತ್ತೇವೆ. ಎಲ್ಲವೂ ಚೆನ್ನಾಗೇ ನಡೆಯುತ್ತದೆ" - ಕೆ.ಮಂಜು

  ಮಾಲಾಶ್ರೀ ಏನಂತಾರೆ?

  ಮಾಲಾಶ್ರೀ ಏನಂತಾರೆ?

  "ಎಲ್ಲರಿಗೂ ಧನ್ಯವಾದ (ಮಾಧ್ಯಮಕ್ಕೆ) ಯಾಕೆಂದರೆ ಎಲ್ಲರೂ ನೀವು ನನ್ನ ಮೇಲೆ ಇಷ್ಟೊಂದು ಪ್ರೀತಿ ಇಟ್ಟು ಸಪೋರ್ಟ್ ಮಾಡಿದ್ದಕ್ಕೆ. ಮೆಸೇಜ್ ಮಾಡಿದ್ದು ನನಗೆ ಸಣ್ಣ ವಿಚಾರ ಅಲ್ಲ. ಅದು ನನಗೆ ದೊಡ್ಡ ವಿಷಯ ಯಾಕೆಂದರೆ ಅದರಿಂದ ನನಗೆ ತುಂಬಾ ಕಷ್ಟ ಆಯಿತು. ಇದು ಜೋಕ್ ಅಲ್ಲ. ಯಾಕೆಂದರೆ ಇದು ನನ್ನ ಭಾವನೆಗೆ ದೊಡ್ಡ ಪೆಟ್ಟು ಬಿದ್ದ ವಿಚಾರ". - ಮಾಲಾಶ್ರೀ

  ಸಂಧಾನಕ್ಕೆ ಮೊದಲು ಒಪ್ಪಲಿಲ್ಲ-ಮಾಲಾಶ್ರೀ

  ಸಂಧಾನಕ್ಕೆ ಮೊದಲು ಒಪ್ಪಲಿಲ್ಲ-ಮಾಲಾಶ್ರೀ

  "ಸಂಧಾನ ಸಭೆ ಮಾಡೋಣ ಅಂದಾಗ ನಾನು ಮೊದಲು ಒಪ್ಪಲಿಲ್ಲ. ಅಷ್ಟು ಸುಲಭವಾಗಿ ಬರೀ ಒಂದು ಸಾರಿ ಯಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸೋಣ ಅಂದ್ರೆ ಅಷ್ಟು ಸುಲಭವಾಗಿ ನಾನು ಒಪ್ಪಿಕೊಳ್ಳಲು ತಯಾರಿರಲಿಲ್ಲ".

  'ಉಪ್ಪು ಹುಳಿ ಖಾರ' ಬೇಡ ಎಂದ ಮಾಲಾಶ್ರೀ

  'ಉಪ್ಪು ಹುಳಿ ಖಾರ' ಬೇಡ ಎಂದ ಮಾಲಾಶ್ರೀ

  "ಸಿನಿಮಾದಲ್ಲಿ ಮುಂದುವರಿಯುವುದಿಲ್ಲ ಅಂದೆ. ಆದರೆ ಇಡೀ ಸಿನಿಮಾ ತಂಡದವರು ನಾನು ಸಿನಿಮಾದಲ್ಲಿ ನಟಿಸೋಲ್ಲ ಅಂದಾಗ ಸಿನಿಮಾ ನಿಲ್ಲಿಸ್ತೀವಿ ಅಂದರು. ಅದಕ್ಕೆ ನಾನು ಏನೂ ಹೇಳಲು ತೋಚದೆ ಒಪ್ಪಿಕೊಂಡೆ. ಯಾಕೆಂದರೆ ಬೇರೆಯವರ ಹೊಟ್ಟೆ ಮೇಲೆ ಹೊಡಿಯುವಷ್ಟು ಕೆಟ್ಟ ಹೃದಯ ನನ್ನದಲ್ಲ. ಅಲ್ಲದೇ ಇಮ್ರಾನ್ ಅವರು ಕೂಡ ಬಹಿರಂಗವಾಗಿ ಸಾರಿ ಕೇಳಿದ್ದಾರೆ ಆದ್ದರಿಂದ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯಲಾಗಿದೆ. ಇದೀಗ ಮತ್ತೆ ಖುಷಿ-ಖುಷಿಯಾಗಿ ಮೊದಲಿನಂತೆ ಸಿನಿಮಾ ಆರಂಭವಾಗುತ್ತೆ". ಮಾಲಾಶ್ರೀ

  ಆಟ ಮುಕ್ತಾಯ

  ಆಟ ಮುಕ್ತಾಯ

  ಇದೀಗ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯಲಾಗಿದ್ದು, ನಟಿ ಮಾಲಾಶ್ರೀ ಮತ್ತು 'ಉಪ್ಪು ಹುಳಿ ಖಾರ' ಚಿತ್ರತಂಡದವರು ಸೇರಿ ಎಲ್ಲರ ಸಮ್ಮುಖದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ನಟಿ ಮಾಲಾಶ್ರೀ ಅವರು ವಿದೇಶದಿಂದ ಮರಳಿ ಬಂದ ತಕ್ಷಣ ಸಿನಿಮಾ ಮುಂದುವರಿಯುತ್ತದೆ.

  English summary
  'Uppu Huli Khara' Director Imran Sardariya tenders unconditinal apology to Actress Malashri. Today (April 25th) Again press meet held in Bengaluru hotel and now all the problems are solved.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X