ಇಮ್ರಾನ್ ಹೇಳಿದ್ದೆಲ್ಲಾ 'ಸುಳ್ಳೇ ಸುಳ್ಳು' ಎಂದ ನಟಿ ಮಾಲಾಶ್ರೀ.!

By Harshitha

''ಶೂಟಿಂಗ್ ಸ್ಪಾಟ್ ಗೆ ನಟಿ ಮಾಲಾಶ್ರೀ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಎರಡು ದಿನ ಅವರಿಂದ ಶೂಟಿಂಗ್ ತಡವಾಗಿದೆ. ಅದರಿಂದ ನಿರ್ಮಾಪಕರಿಗೆ ನಾಲ್ಕುವರೆ ಲಕ್ಷ ನಷ್ಟವಾಗಿದೆ'' ಅಂತ 'ಉಪ್ಪು ಹುಳಿ ಖಾರ' ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿನ್ನೆ ನಿರ್ಮಾಪಕ ಕೆ.ಮಂಜು ಜೊತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆದ್ರೆ, ಇಂದು ಪತಿ ನಿರ್ಮಾಪಕ ರಾಮು ಜೊತೆ ಪ್ರೆಸ್ ಮೀಟ್ ಮಾಡಿದ ನಟಿ ಮಾಲಾಶ್ರೀ, ತಮ್ಮ ಮೇಲೆ ಇಮ್ರಾನ್ ಸರ್ದಾರಿಯಾ ಹಾಗೂ ಕೆ.ಮಂಜು ಮಾಡಿದ ಅಷ್ಟೂ ಆರೋಪಗಳನ್ನು ತಳ್ಳಿಹಾಕಿದರು. [ಕೊಬ್ರಿ ಮಂಜು-ಇಮ್ರಾನ್ ವಿರುದ್ಧ ಗುಡುಗಿದ ಮಾಲಾಶ್ರೀ ಪತಿ ರಾಮು!]

'ಇಮ್ರಾನ್ ಸರ್ದಾರಿಯಾ ಹಾಗೂ ಕೆ.ಮಂಜು ಹೇಳಿದ್ದೆಲ್ಲಾ ಸುಳ್ಳು' ಎಂದು ಹೇಳಿದ ನಟಿ ಮಾಲಾಶ್ರೀ, ಇಬ್ಬರನ್ನು ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಲು ನಿರ್ಧರಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಸಿಲ್ವರ್ ಸ್ಟಾರ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಮಂಜು ಹಾಗೂ ಇಮ್ರಾನ್ ಬಗ್ಗೆ ನಟಿ ಮಾಲಾಶ್ರೀ ಏನೆಲ್ಲಾ ಹೇಳಿದರು ಎಂಬುದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳಲ್ಲಿ, ಅವರ ಮಾತುಗಳಲ್ಲೇ ಓದಿರಿ.....

ರಿಹರ್ಸಲ್ ಮಾಡಲು ಇಮ್ರಾನ್ ಹೇಳೇ ಇರ್ಲಿಲ್ಲ!

ರಿಹರ್ಸಲ್ ಮಾಡಲು ಇಮ್ರಾನ್ ಹೇಳೇ ಇರ್ಲಿಲ್ಲ!

''ನನಗೆ ರಿಹರ್ಸಲ್ ಮಾಡಿ ಅಂತ ಇಮ್ರಾನ್ ಹೇಳಲೇ ಇಲ್ಲ. ನನಗೆ ರಿಹರ್ಸಲ್ ಮಾಡಲು ಇಷ್ಟ. ಅದರಲ್ಲೂ ಒಂದೆರಡು ಸೀನ್ ಟ್ರೈ ಮಾಡೋಣ ಅಂತ ನಾನೇ ಅವರಿಗೆ ಫೋನ್ ಮಾಡಿದ್ದೆ. ಆ ಫೋನ್ ರೆಕಾರ್ಡ್ಸ್ ನನ್ನ ಬಳಿ ಇದೆ'' - ನಟಿ ಮಾಲಾಶ್ರೀ [ಕೆ.ಮಂಜು, ಇಮ್ರಾನ್ ಏಟಿಗೆ ತಿರುಗೇಟು ಕೊಡಲು ಮಾಲಾಶ್ರೀ ತಯಾರು!]

ಅವರು ಹೇಳಿದ್ದೆಲ್ಲಾ ಸುಳ್ಳು!

ಅವರು ಹೇಳಿದ್ದೆಲ್ಲಾ ಸುಳ್ಳು!

''ನಿನ್ನೆ ಕೆ.ಮಂಜು ಹಾಗೂ ಇಮ್ರಾನ್ ಸರ್ದಾರಿಯಾ ಮಾತನಾಡಿರುವುದೆಲ್ಲಾ ಸುಳ್ಳು. ಇವತ್ತು ನನ್ನ ಪತಿ ರಾಮು ಮಾತನಾಡುತ್ತಿರುವುದಕ್ಕೆ ಕಾರಣ ಅದೇ'' - ನಟಿ ಮಾಲಾಶ್ರೀ [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

ಇಮ್ರಾನ್ ಬೆಂಗಳೂರಿನಲ್ಲಿ ಇರಲೇ ಇಲ್ಲ!

ಇಮ್ರಾನ್ ಬೆಂಗಳೂರಿನಲ್ಲಿ ಇರಲೇ ಇಲ್ಲ!

''ರಿಹರ್ಸಲ್ ಅಂತ ಹೇಳ್ತಾರೆ. ಇಮ್ರಾನ್ ಸರ್ದಾರಿಯಾ ಹತ್ತು ದಿನಗಳು ಬೆಂಗಳೂರಿನಲ್ಲಿ ಇರಲೇ ಇಲ್ಲ. ಫೋನ್ ಮಾಡಿದ್ರೆ, ಸ್ವಿಚ್ ಆಫ್ ಬರ್ತಿತ್ತು. ಹೇಗೆ ರಿಹರ್ಸಲ್ ಮಾಡ್ಬೇಕು?'' - ನಟಿ ಮಾಲಾಶ್ರೀ [ಮಾಲಾಶ್ರೀ ನಟನೆ ಬಗ್ಗೆ ಅಂಬಿ, ಶ್ರುತಿ, ಉಮಾಶ್ರೀ ಮಾಡಿದ ಕಾಮೆಂಟ್ ಏನು?]

ಬರೀ ಸುಳ್ಳು!

ಬರೀ ಸುಳ್ಳು!

''ಕ್ಯಾರಾವ್ಯಾನ್ ನಲ್ಲಿ ನಲ್ಲಿ ಇದ್ದದ್ದು ನಾನು, ನನ್ನ ತಾಯಿ ಹಾಗೂ ಇಮ್ರಾನ್. ಹಾಗಂತ ಅಲ್ಲಿ ಏನಾಯ್ತು ಅಂತ ಹೇಗೆ ಬೇಕಾದರೂ ತಿರುಗಿಸಿ ಹೇಳಬಹುದಾ? ಅವರು ಲ್ಯಾಪ್ ಟಾಪ್ ತಂದಿದ್ದು ಎಡಿಟಿಂಗ್ ತೋರಿಸುವುದಕ್ಕೆ, ನನ್ನ ಪರ್ಫಾಮೆನ್ಸ್ ಬಗ್ಗೆ ಹೇಳುವುದಕ್ಕೆ ಅಲ್ಲ'' - ನಟಿ ಮಾಲಾಶ್ರೀ ['ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!]

ನಾನು ಮೋಸ ಮಾಡಿದ್ದೀನಾ?

ನಾನು ಮೋಸ ಮಾಡಿದ್ದೀನಾ?

''ಇಡೀ ಗಾಂಧಿನಗರದಲ್ಲಿ 'ಮಾಲಾಶ್ರೀ ಇಂದ ಶೂಟಿಂಗ್ ನಿಂತಿದೆ' ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಜನ ನನ್ನ ಬಗ್ಗೆ ಏನಂತ ತಿಳಿದುಕೊಳ್ಳುವುದಿಲ್ಲ. ನಾನೇನು ಮೋಸ ಮಾಡಿದ್ನಾ? ನನಗೆ ಆಕ್ಟಿಂಗ್ ಮಾಡೋಕೆ ಬರಲ್ವಾ?'' - ನಟಿ ಮಾಲಾಶ್ರೀ [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

ನನಗೆ ಗೊತ್ತಿಲ್ಲ!

ನನಗೆ ಗೊತ್ತಿಲ್ಲ!

''ಯಾವ ಎರಡು ಸಿನಿಮಾಗಳಿಗೆ ಕೆ.ಮಂಜು ನನಗೆ ಅಡ್ವಾನ್ಸ್ ನೀಡಿದ್ದರು ಅಂತ ಗೊತ್ತಾಗುತ್ತಿಲ್ಲ'' - ನಟಿ ಮಾಲಾಶ್ರೀ [ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!]

ನನ್ನ ಮೇಲೆ ಯಾಕೆ ಬ್ಲೇಮ್?

ನನ್ನ ಮೇಲೆ ಯಾಕೆ ಬ್ಲೇಮ್?

''ನನಗೇನು ಕೆಲಸ ಇಲ್ಲ. ನಾನು ಮನೆಯಲ್ಲೇ ಇದ್ದೆ. ನಾನು ರಿಹರ್ಸಲ್ ಮಾಡೋಣ ಅಂತ ಫೋನ್ ಮಾಡಿದ್ರೆ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಮುಹೂರ್ತಕ್ಕೂ ಮುಂಚೆ ನಾಲ್ಕು ದಿನ ಇಮ್ರಾನ್ ಶೆಡ್ಯೂಲ್ ಹೇಗಿತ್ತು ಅಂತ ಕೇಳಿ? ಸುಮ್ಮನೆ ನನ್ನ ಮೇಲೆ ಯಾಕೆ ಬ್ಲೇಮ್ ಮಾಡಬೇಕು?'' - ನಟಿ ಮಾಲಾಶ್ರೀ

ಮಾನನಷ್ಟ ಮೊಕದ್ದಮೆ ಹಾಕ್ತೀನಿ!

ಮಾನನಷ್ಟ ಮೊಕದ್ದಮೆ ಹಾಕ್ತೀನಿ!

''ಇಷ್ಟೆಲ್ಲಾ ಮಾತನಾಡಿದ ಮೇಲೆ ನಾವು ಯಾಕೆ ಸುಮ್ಮನೆ ಬಿಡಬೇಕು. ಮಾನನಷ್ಟ ಮೊಕದ್ದಮೆ ಹೂಡುತ್ತೇವೆ'' - ನಟಿ ಮಾಲಾಶ್ರೀ

More from Filmibeat

English summary
''Choreographer turned Director Imran Sardhariya and Producer K.Manju is lying'', says Kannada Actress Malashri in the press meet held today in Silver Star hotel, Gandhinagar, Bengaluru. Malashri has decided to file defamation case against both.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X