20 ಸಾಕ್ಷಿ 08 ಫೋಟೊ, ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಶೆಡ್‌ನಲ್ಲಿ ದರ್ಶನ್ ಇದ್ದ ಫೋಟೊ ರಿವೀಲ್..!
ಅ'ಪವಿತ್ರ ಸಂಬಂಧ'ಕ್ಕೆ ದರ್ಶನ್ ಹಾತೊರೆಯದಿದ್ದರೆ, ದರ್ಶನ್ ಇವತ್ತು ತಮ್ಮ ಅಭಿಮಾನಿಗಳ ನಡುವೆ ಇರುತ್ತಿದ್ದರು. ತಲೆ ಎತ್ತಿ ನಡೆಯುತ್ತಿದ್ದರು. ಇಷ್ಟೇ ಅಲ್ಲ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನ ಜೊತೆ ನೆಮ್ಮದಿಯಿಂದ ಇರುತ್ತಿದ್ದರು.
ಆದರೆ, ಸಹವಾಸ ದೋಷ. ಇವತ್ತು ದರ್ಶನ್ ತಲೆ ತಗ್ಗಿಸಿಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾರೆ. ರೇಣುಕಾ ಸ್ವಾಮಿ ಹೆಸರು ಕೇಳಿದರೆ ಸಾಕು ದರ್ಶನ್ ಅಭಿಮಾನಿಗಳು ತಲೆ ಮರೆಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ದರ್ಶನ್ ಗೆ ಮತ್ತೊಂದು ಸುತ್ತಿನ ಶಾಕ್ ನೀಡಲು ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಫೋಟೊ

ಹೌದು, ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪವನ್ನೊತ್ತಿರುವ A6 ಜಗದೀಶ್, A7 ಅನುಕುಮಾರ್, A8 ರವಿಶಂಕರ್ ಜೊತೆ ಅಸಂಖ್ಯಾತ, ಅಗಣಿತ ಅಭಿಮಾನಿಗಳ ದಾಸ, ಅದೇ ಪಟ್ಟಣಗೆರೆ ಶೆಡ್‌ನಲ್ಲಿ ಫೋಟೊ ಕ್ಲಿಕಿಸಿಕೊಂಡಿದ್ದಾರೆ. ಆದರೆ,ದರ್ಶನ್ ದುರಾದೃಷ್ಟ.. ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ನಡೆದ ದಿನ ತೆಗೆಸಿಕೊಂಡಿದ್ದ ಈ ಫೋಟೊವನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ರಿಟ್ರೀವ್ ಆದ ಪೋಟೋದಲ್ಲಿ ಬ್ಲೂ ಕಲರ್ ಟೀ ಶರ್ಟ್ ಹಾಗೂ ಬ್ಲಾಕ್ ಕಲರ್ ಪ್ಯಾಂಟ್ ಹಾಕ್ಕೊಂಡು ಕಾಟೇರ ಮಿರ ಮಿರ ಮಿಂಚಿದ್ದಾರೆ.
ಅಂದ್ಹಾಗೇ ರೇಣುಕಾಸ್ವಾಮಿ ದೇಹದ ಮೇಲಿರುವ ಗಾಯಗಳು ನಾಯಿ ಕಡಿತದಿಂದಲೂ ಆಗಿರಬಹುದು ಎಂಬ ವಾದವನ್ನು ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ಮಂಡಿಸಿದ್ದರು. ಆದರೆ, ಪೊಲೀಸರು ಈ ವಾದವನ್ನು ಒಪ್ಪಲು ತಯಾರಿಲ್ಲ. ಹೀಗಾಗಿಯೇ ಪ್ರಕರಣದ ತನಿಖೆಯನ್ನು ಮಾಡುತ್ತಿರುವ ಪೊಲೀಸರು ಈಗ ಹೆಚ್ಚು ಕಡಿಮೆ 1300 ಪುಟಗಳಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನ ದಾಖಲಿಸಿದ್ದಾರೆ. ಅದ್ರಲ್ಲಿ ಮತ್ತೆ 20 ಸಾಕ್ಷ್ಯಗಳ ಹೇಳಿಕೆ ದಾಖಲಿಸಿದ್ದಾರೆ. ಇದ್ರ ಜೊತೆಗೆ ಕೆಲ FSL ರಿಪೋರ್ಟ್‌ಗಳು, ದರ್ಶನ್ ಹಾಗೂ ಪವಿತ್ರಗೌಡ ನಡುವಿನ ಚಾಟಿಂಗ್ ಸಹ ಉಲ್ಲೇಖ ಮಾಡಿದ್ದಾರೆ.

ಇನ್ನುಳಿದಂತೆ ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲು, ಇವೆರಡರ ದರ್ಶನ್ ಪಡೆದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಬೆನ್ನುಹುರಿ, ಕಿಡ್ನಿ, ರಕ್ತ ಸಂಚಾರದಲ್ಲಿನ ಅಡಚಣೆಯಿಂದ ಪಾದಗಳಲ್ಲಿ ಮರಗಟ್ಟುವಿಕೆ ಮತ್ತು ಕೀಲು ನೋವು ಸಮಸ್ಯೆಯಿಂದ ದರ್ಶನ್ ತೀವೃವಾಗಿ ನರಳುತ್ತಿದ್ದು ಸೂಕ್ತ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ನಡೆಸದೇ ಹೋದರೆ ದರ್ಶನ್ 'ಲಕ್ವಾ'ಗೆ ತುತ್ತಾಗುವ ಅಪಾಯ ಇದೆ ಎಂದು ದರ್ಶನ್ ಪರ ವಕೀಲರಾದ ಸಿ.ವಿ.ನಾಗೇಶ್ ವಾದವನ್ನು ಮಾಡಿದ್ದರು ಕೂಡ ದರ್ಶನ್ ಜೈಲಿಂದ ಹೊರ ಬಂದು ಒಂದು ತಿಂಗಳಾಗುತ್ತಾ ಬಂದರೂ ಕೂಡ ದರ್ಶನ್ ಇನ್ನೂ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿಲ್ಲ. ಹೀಗಿರುವಾಗ ಈಗ ಪೊಲೀಸರು ಶೆಡ್‌ನಲ್ಲಿ ದರ್ಶನ್ ಇದ್ದರು ಎನ್ನುವುದಕ್ಕೆ ಸಾಕ್ಷಿಯನ್ನಾಗಿ ಹೊಚ್ಚ ಹೊಸ ಫೋಟೊ ಬಿಡುಗಡೆ ಮಾಡಿದ್ದಾರೆ. ಎರಡನೇ ಚಾರ್ಜ್‌ಶೀಟ್ ಕೂಡ ಸಿದ್ದ ಪಡಿಸಿದ್ದಾರೆ. ನೋ ಡೌಟ್. ಪೊಲೀಸರ ಈ ನಡೆಯಿಂದ ಆಸ್ಪತ್ರೆಯಲ್ಲಿರುವ ದರ್ಶನ್ಗೆ ಸಂಕಷ್ಟ ಎದುರಾಗಿದೆ. ದರ್ಶನ್ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಈ ಪ್ರಕರಣದಲ್ಲಿ ಮುಂದೆ ಇನ್ಯಾವ ತಿರುವು ಇದೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











