twitter
    For Quick Alerts
    ALLOW NOTIFICATIONS  
    For Daily Alerts

    Beast In Bengaluru: 'ಬೀಸ್ಟ್' ಸಿನಿಮಾಕ್ಕೆ ಬೆಂಗಳೂರಿನಲ್ಲಿ ಸಿಕ್ಕ ಚಿತ್ರಮಂದಿರಗಳೆಷ್ಟು?

    |

    ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಇಂದು ಬಿಡುಗಡೆ ಆಗಿದೆ. ಬೇರೆ ಸಮಯದಲ್ಲಾಗಿದ್ದಿದ್ದರೆ ಈ ಸಿನಿಮಾಕ್ಕೆ ವಿಶೇಷ ಮಹತ್ವ ಇರುತ್ತಿರಲಿಲ್ಲ. ಆದರೆ ಕನ್ನಡದ 'ಕೆಜಿಎಫ್ 2'ಗೆ ಎದುರಾಗಿ ಈ ಸಿನಿಮಾ ಬರುತ್ತಿರುವ ಕಾರಣ ಕರ್ನಾಟಕದಲ್ಲಿ ತುಸು ಹೆಚ್ಚಾಗಿ ಈ ಸಿನಿಮಾ ಗಮನ ಸೆಳೆಯುತ್ತಿದೆ.

    'ಕೆಜಿಎಫ್ 2' ಸಿನಿಮಾ ಬಿಡುಗಡೆಯ ಒಂದು ದಿನ ಮುಂಚೆ 'ಬೀಸ್ಟ್' ಬಿಡುಗಡೆ ಆಗಿದ್ದು, ಈ ಸಿನಿಮಾ ಸಹ ತಮಿಳು ಸೇರಿದಂತೆ, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತೆರೆಗೆ ಬಂದಿದೆ.

    Beast Movie Review: ಹಳೆ ಸೂತ್ರಗಳ, ಹೊಸ ಆ್ಯಕ್ಷನ್ ಚಿತ್ರ 'ಬೀಸ್ಟ್'! Beast Movie Review: ಹಳೆ ಸೂತ್ರಗಳ, ಹೊಸ ಆ್ಯಕ್ಷನ್ ಚಿತ್ರ 'ಬೀಸ್ಟ್'!

    'ಕೆಜಿಎಫ್ 2' ಸಿನಿಮಾ ಮುಂದಿದ್ದರೂ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಲು, ಶೋಗಳು 'ಬೀಸ್ಟ್' ಸಿನಿಮಾಕ್ಕೆ ದೊರೆತಿದೆ. ಬೆಂಗಳೂರಿನಲ್ಲಿ 'ಬೀಸ್ಟ್' ಸಿನಿಮಾದ ಯಾವ ಭಾಷೆಯ ಆವೃತ್ತಿಗೆ ಎಷ್ಟು ಚಿತ್ರಮಂದಿರ ದೊರೆತಿವೆ ಎಂಬ ಪಟ್ಟಿ ಇಲ್ಲಿದೆ ನೋಡಿ.

    RRR Kannada dubbed Movie Review : (ಕನ್ನಡ ಆವೃತ್ತಿ) ಚಿತ್ರ ವಿಮರ್ಶೆ: ಸ್ಲೋ ಎಂಡ್ ಸ್ಟಡಿ ವಿನ್ಸ್ ದಿ ರೇಸ್RRR Kannada dubbed Movie Review : (ಕನ್ನಡ ಆವೃತ್ತಿ) ಚಿತ್ರ ವಿಮರ್ಶೆ: ಸ್ಲೋ ಎಂಡ್ ಸ್ಟಡಿ ವಿನ್ಸ್ ದಿ ರೇಸ್

    ದೊಡ್ಡ ಸಂಖ್ಯೆಯ ಶೋಗಳು ಪ್ರದರ್ಶನಗೊಳ್ಳುತ್ತಿವೆ?

    ದೊಡ್ಡ ಸಂಖ್ಯೆಯ ಶೋಗಳು ಪ್ರದರ್ಶನಗೊಳ್ಳುತ್ತಿವೆ?

    'ಬೀಸ್ಟ್' ಸಿನಿಮಾದ ಮೂಲ ತಮಿಳು ಆವೃತ್ತಿಗೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳು ಬೆಂಗಳೂರಿನಲ್ಲಿ ದೊರೆತಿವೆ. ತಮಿಳು ಭಾಷೆಯ 'ಬೀಸ್ಟ್'ಗೆ ಬುಕ್ ಮೈ ಶೋ ಮಾಹಿತಿಯ ಪ್ರಕಾರ ಬರೋಬ್ಬರಿ 84 ಚಿತ್ರಮಂದಿರಗಳು ದೊರೆತಿವೆ (ಪಿವಿಆರ್, ಐನಾಕ್ಸ್ ಸೇರಿ). 84 ಚಿತ್ರಮಂದಿರಗಳು ಮೊದಲ ದಿನ 504 ಶೋಗಳನ್ನು ಪ್ರದರ್ಶನ ಮಾಡಲಿದೆ. ಇದು ಸಾಮಾನ್ಯ ಸಂಖ್ಯೆಯೇನಲ್ಲ.

    'ಬೀಸ್ಟ್' ಕನ್ನಡ ಆವೃತ್ತಿಗೆ ಬೆಂಗಳೂರಿನಲ್ಲಿ 13 ಶೋಗಳಷ್ಟೆ

    'ಬೀಸ್ಟ್' ಕನ್ನಡ ಆವೃತ್ತಿಗೆ ಬೆಂಗಳೂರಿನಲ್ಲಿ 13 ಶೋಗಳಷ್ಟೆ

    ಇನ್ನು 'ಬೀಸ್ಟ್' ಸಿನಿಮಾದ ಕನ್ನಡ ಆವೃತ್ತಿಯು ಬೆಂಗಳೂರಿನಲ್ಲಿ ಕೇವಲ 13 ಶೋಗಳಷ್ಟೆ ಪ್ರದರ್ಶನ ಕಾಣುತ್ತಿವೆ. ಹಾಗೂ ತೆಲುಗು ಆವೃತ್ತಿಯ ಶೋಗಳು ಪ್ರದರ್ಶನ ಕಾಣುತ್ತಿರುವುದು ಕೇವಲ 7 ಶೋಗಳಷ್ಟೆ. 'ಬೀಸ್ಟ್' ಸಿನಿಮಾದ ಮಲಯಾಳಂ ಹಾಗೂ ಹಿಂದಿ ಡಬ್ಬಿಂಗ್ ಆವೃತ್ತಿ ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿಲ್ಲ. ಈ ಎಲ್ಲ ಅಂಕಿ-ಸಂಖ್ಯೆಗಳು ಬೆಂಗಳೂರಿನ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಿಗೆ ಮಾತ್ರವೇ ಸೀಮಿತ.

    ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಶೋ ಪಡೆದುಕೊಂಡಿರುವ 'ಬೀಸ್ಟ್'

    ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಶೋ ಪಡೆದುಕೊಂಡಿರುವ 'ಬೀಸ್ಟ್'

    'ಬೀಸ್ಟ್' ಸಿನಿಮಾವು ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ದೊಡ್ಡ ಸಂಖ್ಯೆಯ ಶೋಗಳನ್ನು ಪಡೆದುಕೊಂಡಿದೆ. ಆದರೆ 'ಕೆಜಿಎಫ್ 2' ಸಿನಿಮಾ ನಗರದ ಯಾವುದೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಾಣುತ್ತಿಲ್ಲ ಎಂಬುದು ವಿಶೇಷ. 'ಕೆಜಿಎಫ್ 2' ಸಿನಿಮಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಾಣುವಂತಿದ್ದಿದ್ದರೆ 'ಬೀಸ್ಟ್' ಸಿನಿಮಾದ ಶೋಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿರುತ್ತಿತ್ತು.

    ನಾಳೆಗೆ ಹಲವು ಚಿತ್ರಮಂದಿರಗಳಿಂದ ಎತ್ತಂಗಡಿ

    ನಾಳೆಗೆ ಹಲವು ಚಿತ್ರಮಂದಿರಗಳಿಂದ ಎತ್ತಂಗಡಿ

    'ಬೀಸ್ಟ್' ಸಿನಿಮಾದ ವಿಮರ್ಶೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗಾಗಿ ಈ ಸಿನಿಮಾ 'ಕೆಜಿಎಫ್ 2' ನ ಎದುರು ನಿಲ್ಲುವುದು ಕಷ್ಟವೆಂದೇ ಹೇಳಲಾಗುತ್ತಿದೆ. 'ಬೀಸ್ಟ್' ಸಿನಿಮಾ ಬೆಂಗಳೂರಿನ 80 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆ ಆಗಿರುವುದೇನೋ ನಿಜ ಆದರೆ ನಾಳೆ 'ಕೆಜಿಎಫ್ 2' ಬಿಡುಗಡೆ ಆದ ಬಳಿಕ ಅರ್ಧಕ್ಕೂ ಹೆಚ್ಚು ಚಿತ್ರಮಂದಿರಗಳಿಂದ ಕೇವಲ ಒಂದೇ ದಿನಕ್ಕೆ 'ಬೀಸ್ಟ್' ಕಾಲ್ಕೀಳಲಿದೆ ಎನ್ನಲಾಗುತ್ತಿದೆ.

    ಪೂಜಾ ಹೆಗ್ಡೆ ನಾಯಕಿ

    ಪೂಜಾ ಹೆಗ್ಡೆ ನಾಯಕಿ

    'ಬೀಸ್ಟ್' ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ಸಿನಿಮಾವು ಆಕ್ಷನ್ ಕಾಮಿಡಿ ಕತೆಯನ್ನು ಹೊಂದಿದೆ. ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿರುವ ವಿಜಯ್, ಭಯೊತ್ಪಾದಕರಿಂದ ಒತ್ತೆಯಾಗಿಸಿಕೊಳ್ಳಲಾಗಿರುವ ಮಾಲ್‌ ಅನ್ನು ಅದರಲ್ಲಿನ ಜನರನ್ನು ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾದಲ್ಲಿ ನಟ ಯೋಗಿ ಬಾಬು ಸಹ ಇದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸನ್ ನೆಟ್‌ವರ್ಕ್ಸ್‌ನ ಕಲಾನಿಧಿ ಮಾರನ್.

    English summary
    In Bengaluru how many theaters Tamil's Beast movie is released today. How many shows they got for their Tamil version of movie Beast.
    Wednesday, April 13, 2022, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X