»   » ಅಗಲಿದ ಸಂಕೇತ್ ಕಾಶಿ ನೆನಪುಗಳ ಜೊತೆ ನೀವು ಹೆಜ್ಜೆ ಹಾಕಿ

ಅಗಲಿದ ಸಂಕೇತ್ ಕಾಶಿ ನೆನಪುಗಳ ಜೊತೆ ನೀವು ಹೆಜ್ಜೆ ಹಾಕಿ

Posted By:
Subscribe to Filmibeat Kannada

ಇತ್ತೀಚೆಗಷ್ಟೇ ನಮ್ಮೆಲ್ಲರನ್ನೂ ಅಗಲಿದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ-ರಂಗಕರ್ಮಿ ಸಂಕೇತ್‌ ಕಾಶಿ (62)ಸದಾ ಕನ್ನಡಿಗರ ಮನದಲ್ಲಿ ಜೀವಂತ .

ಸುಚಿತ್ರಾ ಫಿಲಂ ಸೊಸೈಟಿ ಆವರಣದಲ್ಲಿಯ ಭಾನು ನೆನಪಿನ 'ನಾಣಿ ಅಂಗಳ'ದಲ್ಲಿ, ಆಗಸ್ಟ್ 26, ಶುಕ್ರವಾರ, ಸಂಜೆ ಸರಿಯಾಗಿ 4 ಗಂಟೆಗೆ ಲಿಂಗೈಕ್ಯರಾದ ಖ್ಯಾತ ನಟ ಸಂಕೇತ್ ಕಾಶಿ (ಆಗಸ್ಟ್ 6ಕ್ಕೆ ನಿಧನ) ಅವರ ಕೆಲವು ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.[ಕನ್ನಡ ಚಿತ್ರರಂಗದ ಹಿರಿಯ ನಟ ಸಂಕೇತ್ ಕಾಶಿ ನಿಧನ]

In Memory of actor Sanketh Kashi in Suchitra film Society

ಹಲವಾರು ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ, ಪೋಷಕ ಪಾತ್ರ ವಹಿಸಿದ ದಿವಂಗತ ಸಂಕೇಶ್ ಕಾಶಿ ಅವರಿಗೆ ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಗಣ್ಯರು ನುಡಿ ನಮನ ಸಲ್ಲಿಸಲಿದ್ದಾರೆ.

ಈ 'ನಾಣಿ ಅಂಗಳ'ದಲ್ಲಿ ಸಚಿವೆ ಮತ್ತು ರಂಗಭೂಮಿ ನಟಿ ಉಮಾಶ್ರೀ, ನಟ ನವರಸ ನಾಯಕ ಜಗ್ಗೇಶ್, ರಂಗಭೂಮಿ ನಟಿ ಕಮ್ ನಿರ್ದೇಶಕಿ ಬಿ.ಜಯಶ್ರೀ ಹಾಗೂ ಸಂಕೇತ್ ಕಾಶಿ ಅವರಿಗೆ ಬ್ರೇಕ್ ಕೊಟ್ಟ 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ ಎನ್.ಎಸ್ ಶಂಕರ್ ಮತ್ತಿತ್ತರು ಭಾಗವಹಿಸಿ ಸಂಕೇತ್ ಕಾಶಿ ಅವರ ಬಗೆಗಿನ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.[ವೀರಶೈವ ವೇದಿಕೆಯಿಂದ ಸಂಕೇತ್ ಕಾಶಿಗೆ ನಮನ]

In Memory of actor Sanketh Kashi in Suchitra film Society

ಅಲ್ಲದೆ ಈ ಕಾರ್ಯಕ್ರಮದ ಅಂತ್ಯದಲ್ಲಿ ಕಾಶಿಯವರೇ ಹುಟ್ಟುಹಾಕಿದ ' ಸಮುದಾಯ " ತಂಡದ ಗುಂಡಣ್ಣ ಮತ್ತು ಗೆಳೆಯರು 'ಕತ್ತಲೆ ದಾರಿ ದೂರ' ನಾಟಕದ ತುಣುಕನ್ನು ಪ್ರದರ್ಶಿಸಲಿದ್ದಾರೆ .

In Memory of actor Sanketh Kashi in Suchitra film Society

ಕಾಶಿಯವರ ಅಭಿಮಾನಿಗಳು, ರಂಗದ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅದ್ಭುತ ಕಲಾವಿದನಿಗೆ ಭಾವಪೂರ್ಣ ವಿದಾಯ ಹೇಳುವ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂಬುದು ಆಯೋಜಕರಾದ ಜಗದೀಶ್ ಮಲ್ನಾಡ್ ಅವರ ಮನವಿ .

ಬನ್ನಿ ನಾವು-ನೀವು ಎಲ್ಲರೂ ಕಾಶಿ ನೆನಪಿನಂಗಳದಲ್ಲಿ ಸೇರೋಣ.

ಕಾರ್ಯಕ್ರಮ : ಕಾಶಿ ಒಂದು ನೆನಪು
ಸ್ಥಳ : ಸುಚಿತ್ರ ಫಿಲಂ ಸೊಸೈಟಿ . ಬೆಂಗಳೂರು
ದಿನಾಂಕ : 26/8/2016, ಶುಕ್ರವಾರ

English summary
In Memory of actor Sanketh Kashi: Program organised by Samudaya Balaga. At Suchitra film Society Bangalore. Actor Jaggesh, Actress Uumashree, Actress B Jayshree was the Chief guest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada