Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪೊಗರು' ಸಿನಿಮಾ ಬಿಡುಗಡೆ: ಮೈಸೂರು ಅಭಿಮಾನಿಗಳಿಗೆ ನಿರಾಸೆ
ರಾಜ್ಯಾದ್ಯಂತ ಪೊಗರು ಸಿನಿಮಾ ಇಂದು (ಫೆಬ್ರವರಿ 19) ಬಿಡುಗಡೆ ಆಗಿದೆ, ಅಭಿಮಾನಿಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಟ್ಟಿದ್ದಾರೆ. ಆದರೆ ಮೈಸೂರಿನ ಧ್ರುವ ಸರ್ಜಾ ಅಭಿಮಾನಿಗಳು ಮಾತ್ರ ನಿರಾಸೆ ಅನುಭವಿಸುವಂತಾಗಿದೆ.
ಕೊರೊನಾ ಲಾಕ್ ಡೌನ್ ಬಳಿಕ ಬಿಗ್ ಬಜೆಟ್ ಆಗಿರುವ ಪೊಗರು ಸಿನಿಮಾ ಮೈಸೂರಿನ ಮಲ್ಟಿಪ್ಲೆಕ್ಸ್ ಹೊರತು ಪಡಿಸಿ ಸಿಂಗಲ್ ಸ್ಕ್ರೀನ್ ನಲ್ಲಿ ಪ್ರದರ್ಶನವಾಗಿಲ್ಲ. ಕಟೌಟ್ ಕಟ್ಟಿ, ಹಾರ ಹಾಕಿ, ಅಭಿಷೇಕ ಮಾಡಿ ಮಾಸ್ ಆಗಿ ಮಾಸ್ ಹೀರೋ ಧ್ರುವ ಸರ್ಜಾ ಸಿನಿಮಾವನ್ನು ಸ್ವಾಗತಿಸುವ ಅವಕಾಶ ಧ್ರುವ ಅಭಿಮಾನಿಗಳಿಗೆ ಕೈತಪ್ಪಿದೆ.
ತೆರಿಗೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವವರೆಗೂ ಚಿತ್ರಮಂದಿರ ಪ್ರಾರಂಭವಾಗುವುದಿಲ್ಲ ಎಂದು ಚಿತ್ರಮಂದಿರ ಒಕ್ಕೂಟ ತಿಳಿಸಿದ್ದು, ಯಾವುದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತೆರೆಯದ ಕಾರಣ 'ಪೊಗರು' ಸಿನಿಮಾ ಪ್ರದರ್ಶನವಾಗಿಲ್ಲ.
ಹೀಗಾಗಿ, ಮೈಸೂರು ನಗರದ ಪದ್ಮ ಚಿತ್ರಮಂದಿರ ಹೊರತುಪಡಿಸಿ ಗಾಯತ್ರಿ, ಲಕ್ಷ್ಮಿ, ಸರಸ್ವತಿ, ಪ್ರಭಾ, ಸ್ಟರ್ಲಿಂಗ್, ಲಿಡೋ ಸೇರಿದಂತೆ ಬಹುತೇಕ ಸಿಂಗಲ್ ಸ್ಕ್ರೀನ್ ಗಳಲ್ಲಿ ಚಿತ್ರಪ್ರದರ್ಶನ ಇಲ್ಲದಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಮಲ್ಟಿಫ್ಲೆಕ್ಸ್ಗಳಲ್ಲಿ ಮಾತ್ರವೇ 'ಪೊಗರು' ಬಿಡುಗಡೆ ಆಗಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಫ್ಲೆಕ್ಸ್ಗಳಲ್ಲಿ ಟಿಕೆಟ್ ದರ ಹೆಚ್ಚಿಗಿರುವುದು ಹಲವು ಸಿನಿಮಾ ಪ್ರೇಮಿಗಳಿಗೆ ಸಮಸ್ಯೆ ಆಗಿದೆ.
Recommended Video
ಪೊಗರು ಸಿನಿಮಾ ಬಿಗ್ ಬಜೆಟ್ ಸಿನಿಮಾ ಆಗಿದ್ದು ಧ್ರುವ ಸರ್ಜಾ , ರಶ್ಮಿಕಾ ಮಂದಣ್ಣ, ರಾಘವೇಂದ್ರ ರಾಜಕುಮಾರ್, ಮಯೂರಿ, ಡಾಲಿ ಧನಂಜಯ್, ಸೇರಿ ಬಹುದೊಡ್ಡ ತಾರಾಬಳಗವನ್ನೇ ಹೊಂದಿದೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಧ್ರುವ ನಟನೆಯ ಸಿನಿಮಾವೊಂದು ರಿಲೀಸ್ ಆಗಿದೆ.