twitter
    For Quick Alerts
    ALLOW NOTIFICATIONS  
    For Daily Alerts

    'ಪೊಗರು' ಸಿನಿಮಾ ಬಿಡುಗಡೆ: ಮೈಸೂರು ಅಭಿಮಾನಿಗಳಿಗೆ ನಿರಾಸೆ

    By ಮೈಸೂರು ಪ್ರತಿನಿಧಿ
    |

    ರಾಜ್ಯಾದ್ಯಂತ ಪೊಗರು ಸಿನಿಮಾ ಇಂದು (ಫೆಬ್ರವರಿ 19) ಬಿಡುಗಡೆ ಆಗಿದೆ, ಅಭಿಮಾನಿಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಟ್ಟಿದ್ದಾರೆ. ಆದರೆ ಮೈಸೂರಿನ ಧ್ರುವ ಸರ್ಜಾ ಅಭಿಮಾನಿಗಳು ಮಾತ್ರ ನಿರಾಸೆ ಅನುಭವಿಸುವಂತಾಗಿದೆ.

    ಕೊರೊನಾ ಲಾಕ್ ಡೌನ್ ಬಳಿಕ ಬಿಗ್ ಬಜೆಟ್ ಆಗಿರುವ ಪೊಗರು ಸಿನಿಮಾ ಮೈಸೂರಿನ ಮಲ್ಟಿಪ್ಲೆಕ್ಸ್ ಹೊರತು ಪಡಿಸಿ ಸಿಂಗಲ್ ಸ್ಕ್ರೀನ್ ನಲ್ಲಿ ಪ್ರದರ್ಶನವಾಗಿಲ್ಲ. ಕಟೌಟ್ ಕಟ್ಟಿ, ಹಾರ ಹಾಕಿ, ಅಭಿಷೇಕ ಮಾಡಿ ಮಾಸ್ ಆಗಿ ಮಾಸ್ ಹೀರೋ ಧ್ರುವ ಸರ್ಜಾ ಸಿನಿಮಾವನ್ನು ಸ್ವಾಗತಿಸುವ ಅವಕಾಶ ಧ್ರುವ ಅಭಿಮಾನಿಗಳಿಗೆ ಕೈತಪ್ಪಿದೆ.

    ತೆರಿಗೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಸುವವರೆಗೂ ಚಿತ್ರಮಂದಿರ ಪ್ರಾರಂಭವಾಗುವುದಿಲ್ಲ ಎಂದು ಚಿತ್ರಮಂದಿರ ಒಕ್ಕೂಟ ತಿಳಿಸಿದ್ದು, ಯಾವುದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತೆರೆಯದ ಕಾರಣ 'ಪೊಗರು' ಸಿನಿಮಾ ಪ್ರದರ್ಶನವಾಗಿಲ್ಲ.

    In Mysuru Only One Single Screen Theater Released Pogaru Movie

    ಹೀಗಾಗಿ, ಮೈಸೂರು ನಗರದ ಪದ್ಮ ಚಿತ್ರಮಂದಿರ ಹೊರತುಪಡಿಸಿ ಗಾಯತ್ರಿ, ಲಕ್ಷ್ಮಿ, ಸರಸ್ವತಿ, ಪ್ರಭಾ, ಸ್ಟರ್ಲಿಂಗ್, ಲಿಡೋ ಸೇರಿದಂತೆ ಬಹುತೇಕ ಸಿಂಗಲ್ ಸ್ಕ್ರೀನ್ ಗಳಲ್ಲಿ ಚಿತ್ರಪ್ರದರ್ಶನ ಇಲ್ಲದಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

    ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾತ್ರವೇ 'ಪೊಗರು' ಬಿಡುಗಡೆ ಆಗಿದ್ದು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಹೆಚ್ಚಿಗಿರುವುದು ಹಲವು ಸಿನಿಮಾ ಪ್ರೇಮಿಗಳಿಗೆ ಸಮಸ್ಯೆ ಆಗಿದೆ.

    Recommended Video

    ಪೊಗರು ಸ್ವಾರ್ಥ.. ಶಿವಣ್ಣನ ಕೆಂಗಣ್ಣಿಗೆ ಗುರಿಯಾಗ್ತಾರ ಧ್ರುವ ಸರ್ಜಾ..? | Filmibeat Kannada

    ಪೊಗರು ಸಿನಿಮಾ ಬಿಗ್​ ಬಜೆಟ್​ ಸಿನಿಮಾ ಆಗಿದ್ದು ಧ್ರುವ ಸರ್ಜಾ , ರಶ್ಮಿಕಾ ಮಂದಣ್ಣ, ರಾಘವೇಂದ್ರ ರಾಜಕುಮಾರ್, ಮಯೂರಿ, ಡಾಲಿ ಧನಂಜಯ್,​​ ಸೇರಿ ಬಹುದೊಡ್ಡ ತಾರಾಬಳಗವನ್ನೇ ಹೊಂದಿದೆ. ಬರೋಬ್ಬರಿ ಮೂರು ವರ್ಷಗಳ ಬಳಿಕ ಧ್ರುವ ನಟನೆಯ ಸಿನಿಮಾವೊಂದು ರಿಲೀಸ್​ ಆಗಿದೆ.

    English summary
    In Mysuru city only one single screen theater released Dhruva Sarja's Pogaru movie. Single screen theater movies were in strike.
    Friday, February 19, 2021, 17:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X