ಮುದ್ದು ಮಗಳಿಗೆ ನಾಮಕರಣ ಮಾಡಿದ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿ
ಕನ್ನಡ ನಟಿ ಅನು ಪ್ರಭಾಕರ್ ಮುಖರ್ಜಿ ಬಾಳಲ್ಲಿ ಸಂತಸ ಮನೆ ಮಾಡಿದೆ. ಮುದ್ದು ಮಗಳು ಮಡಿಲಿಗೆ ಬಂದ ಮೇಲೆ ಆನಂದ ಸಾಗರದಲ್ಲಿ ಅನು ಪ್ರಭಾಕರ್ ಮುಖರ್ಜಿ ತೇಲಾಡುತ್ತಿದ್ದಾರೆ.
ಹೌದು, ಕಳೆದ ವರ್ಷ ಆಗಸ್ಟ್ 15 ರಂದು ಮುದ್ದಾದ ಹೆಣ್ಣು ಮಗುವಿಗೆ ನಟಿ ಅನು ಪ್ರಭಾಕರ್ ಮುಖರ್ಜಿ ಜನ್ಮ ನೀಡಿದ್ದರು. ಇದೀಗ ತಮ್ಮ ಐದು ತಿಂಗಳ ಮಗಳಿಗೆ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿ ನಾಮಕರಣ ಮಾಡಿದ್ದಾರೆ.
ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಯ ಮುದ್ದು ಮಗಳನ್ನು ನೋಡಿದ್ದೀರಾ.?

ತಮ್ಮ ಪುಟಾಣಿಗೆ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ 'ನಂದನ ಪ್ರಭಾಕರ್ ಮುಖರ್ಜಿ' ಅಂತ ಹೆಸರಿಟ್ಟಿದ್ದಾರೆ. ಈ ವಿಚಾರವನ್ನ ತಮ್ಮ ಅಭಿಮಾನಿಗಳೊಂದಿಗೆ ರಘು ಮುಖರ್ಜಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮಗಳಿಗೆ ನಾಮಕರಣ ಮಾಡಿರುವ ಅನು-ರಘು ಮುಖರ್ಜಿ ದಂಪತಿಗೆ ನಟಿ ಪ್ರಿಯಾಂಕಾ ಉಪೇಂದ್ರ ಶುಭ ಕೋರಿದ್ದಾರೆ.
ಅಂದ್ಹಾಗೆ, 2016 ರಲ್ಲಿ ರಘು ಮುಖರ್ಜಿ ಹಾಗೂ ಅನು ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೊಸ ಜೀವನ ಆರಂಭಿಸಿದ ಈ ಜೋಡಿಯ ಮನದಲ್ಲಿ ಹರ್ಷ ತುಂಬಿ ತುಳುಕುತ್ತಿದೆ.


Click it and Unblock the Notifications











