'ದುರ್ಯೋಧನ' ದರ್ಶನ್ ಜೊತೆಯಿರುವ ಈ ನಟ ಯಾರು?
ಮುನಿರತ್ನ ನಿರ್ಮಾಣ ಮಾಡುತ್ತಿರುವ ಬಹುಕೋಟಿ ವೆಚ್ಚದ ಸಿನಿಮಾ 'ಕುರುಕ್ಷೇತ್ರ'ದ ಬಹುತೇಕ ಪಾತ್ರಧಾರಿಗಳ ಗೆಟಪ್ ಬಹಿರಂಗವಾಗಿದೆ. ಈಗ ಕರ್ಣ ಹೇಗಿರಲಿದ್ದಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
'ದುರ್ಯೋಧನ'ನ ಪ್ರಾಣ ಸ್ನೇಹಿತ ಕರ್ಣನ ಪಾತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ಣನ ಪಾತ್ರಧಾರಿ ಅರ್ಜುನ್ ಸರ್ಜಾ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋವೊಂದು ಈಗ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ 'ದುರ್ಯೋಧನ'ನಾಗಿದ್ದರೇ, ರವಿಚಂದ್ರನ್ 'ಕೃಷ್ಣ' ಹಾಗೂ ಅಂಬರೀಶ್ 'ಭೀಷ್ಮ', ಸೋನು ಸೂದ್ 'ಅರ್ಜುನ' ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶ್ರೀನಾಥ್, ಶಶಿಕುಮಾರ್, ಡ್ಯಾನಿಶ್, ಹರಿಪ್ರಿಯಾ, ಸ್ನೇಹ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.
ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
English summary
Action King Arjun Sarja's First Look in Kannada Movie 'Kurukshetra' revealed. Take a look at the picture.
kurukshetra darshan ravichandran arjun sarja ambarish munirathna sandalwood ಕುರುಕ್ಷೇತ್ರ ದರ್ಶನ್ ರವಿಚಂದ್ರನ್ ಅರ್ಜುನ್ ಸರ್ಜಾ ಅಂಬರೀಶ್ ಮುನಿರತ್ನ ಸ್ಯಾಂಡಲ್ ವುಡ್


Click it and Unblock the Notifications