'ಬಾಹುಬಲಿ' ಗಣೇಶ ಬಂದ ನೋಡಿ...

ಈ ಫೋಟೋನ ಒಮ್ಮೆ ನೋಡಿದ ತಕ್ಷಣ ನಿಮಗೆ 'ಬಾಹುಬಲಿ' ಚಿತ್ರ ಖಂಡಿತ ನೆನಪಿಗೆ ಬರುತ್ತೆ. ಹೆಗಲ ಮೇಲೆ ಶಿವಲಿಂಗವನ್ನ ಹೊತ್ತು ಪ್ರಭಾಸ್ ನಡೆಯುವ ಸನ್ನಿವೇಶ 'ಬಾಹುಬಲಿ' ಚಿತ್ರದ ಹೈಲೈಟ್.

ಇದೇ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿತ್ತು. ಆ ಜನಪ್ರಿಯತೆಗೆ ಸಾಕ್ಷಿಯಾಗಿ ಈಗ 'ಬಾಹುಬಲಿ' ಗಣೇಶ ಬಂದಿದ್ದಾನೆ. ಹೌದು, ಗಣೇಶ ಹಬ್ಬಕ್ಕೆ ಇನ್ನೂ ಬೇಜಾನ್ ಟೈಮ್ ಇರುವಾಗಲೇ ವಿವಿಧ ಗಣೇಶ ಪ್ರತಿಮೆಗಳು ರಾಜ್ಯದಾದ್ಯಂತ ತಯಾರಾಗುತ್ತಿದೆ. ಈ ಬಾರಿ ಎಲ್ಲರ ಕಣ್ಣು ಕುಕ್ಕುತ್ತಿರುವುದು 'ಬಾಹುಬಲಿ' ಗಣೇಶ.
'ವೀರಪ್ಪನ್' ಗಣೇಶ ಆಯ್ತು. 'ಒಬಾಮಾ' ಗಣೇಶ ಕೂಡ ಬಂದು ಹೋಯ್ತು. ಈ ವರ್ಷ ಎಲ್ಲೆಡೆ 'ಬಾಹುಬಲಿ' ಸದ್ದು ಮಾಡುತ್ತಿರುವುದರಿಂದ 'ಬಾಹುಬಲಿ' ಗಣೇಶ ಬಂದಿದ್ದಾನೆ. ಅಸಲಿಗೆ ಈ 'ಬಾಹುಬಲಿ' ಗಣೇಶನ ಫೋಟೋ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. ಇದರ ತಯಾರಕರು ಯಾರು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. [ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ ]
'ಬಾಹುಬಲಿ' ಚಿತ್ರದ ಬಗ್ಗೆ ತರಹೇವಾರಿ ವಿಮರ್ಶೆಗಳು ಬಂದರೂ, ಗಣೇಶ ಹಬ್ಬಕ್ಕೆ 'ಬಾಹುಬಲಿ' ಕ್ರೇಜ್ ತಟ್ಟಿರುವುದು ಟಾಲಿವುಡ್ ಸಿನಿ ಪ್ರಿಯರಿಗೆ ಸಮಾಧಾನಕರ ಸಂಗತಿ.


Click it and Unblock the Notifications











