For Quick Alerts
  ALLOW NOTIFICATIONS  
  For Daily Alerts

  'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ...

  By Naveen
  |

  'ಓಂ' ಸಿನಿಮಾ ಇಡೀ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ದಾಖಲೆ ಮಾಡಿರುವ ಸಿನಿಮಾ. ಈ ಸಿನಿಮಾದ ಹಿಂದೆ ಅನೇಕ ರೋಚಕ ಕಥೆಗಳಿವೆ. ಅವುಗಳಲ್ಲಿ ಒಂದು ಈಗ ಈ ಫೋಟೋ ಮೂಲಕ ಎಲ್ಲರಿಗೂ ತಿಳಿಯಲಿದೆ....

  ಅಂದಹಾಗೆ, 'ಓಂ' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದ ಫೋಟೋವೊಂದು ಈಗ ವೈರಲ್ ಆಗಿದೆ. ಡಾ.ರಾಜ್ ಕುಮಾರ್ ಅವರ ಅಪರೂಪದ ಭಾವಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಮುಂದೆ ಓದಿ...

  ಪಾರ್ವತಮ್ಮ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜದ ಗೌರವ: ಶಿವಣ್ಣ ಹೇಳಿದ್ದೇನು?ಪಾರ್ವತಮ್ಮ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜದ ಗೌರವ: ಶಿವಣ್ಣ ಹೇಳಿದ್ದೇನು?

  'ಓಂ' ಆಡಿಯೋ ಲಾಂಚ್

  'ಓಂ' ಆಡಿಯೋ ಲಾಂಚ್

  'ಓಂ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಫೋಟೋವೊಂದು ಈಗ ವೈರಲ್ ಆಗಿದೆ. ಫೋಟೋದಲ್ಲಿ ಡಾ.ರಾಜ್, ಪಾರ್ವತಮ್ಮ ಮತ್ತು ಉಪೇಂದ್ರ ಕಾಣಿಸಿಕೊಂಡಿದ್ದಾರೆ.

   ರಾಜ್ ಕೈಯಲ್ಲಿ ಹಾಡುಗಳ ಅನಾವರಣ

  ರಾಜ್ ಕೈಯಲ್ಲಿ ಹಾಡುಗಳ ಅನಾವರಣ

  'ಓಂ' ಚಿತ್ರದ ಹಾಡುಗಳನ್ನು ತಮ್ಮ ಕೈಯಾರೆ ಡಾ.ರಾಜ್ ಕುಮಾರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದರು.

  ನಾ ನೋಡಿದ ಹೊಸ ತಂತ್ರಜ್ಞಾನದ 'ಓಂ' ಚಿತ್ರ: ಸೆನ್ಸಾರ್ ಉಲ್ಲಂಘನೆನಾ ನೋಡಿದ ಹೊಸ ತಂತ್ರಜ್ಞಾನದ 'ಓಂ' ಚಿತ್ರ: ಸೆನ್ಸಾರ್ ಉಲ್ಲಂಘನೆ

  ಚಿತ್ರದ ಎರಡು ಹಾಡು

  ಚಿತ್ರದ ಎರಡು ಹಾಡು

  ರಾಜ್ ಕುಮಾರ್ 'ಓಂ' ಸಿನಿಮಾದಲ್ಲಿ ಎರಡು ಹಾಡುಗಳನ್ನು ಹಾಡಿದ್ದರು. 'ಓಂಕಾರ' ಮತ್ತು 'ಓ ಗುಲಾಬಿಯೇ...' ಹಾಡುಗಳು ಇಂದಿಗೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ.

  ಹಾಡು ಬೇಡ ಎಂದಿದ್ದ ಉಪ್ಪಿ

  ಹಾಡು ಬೇಡ ಎಂದಿದ್ದ ಉಪ್ಪಿ

  ಉಪೇಂದ್ರ ಅವರ ಕಥೆಯಲ್ಲಿ ಮೊದಲು 'ಓಂಕಾರ' ಹಾಡು ಇರಲಿಲ್ಲವಂತೆ. ಆ ನಂತರ ರಾಜ್ 'ಓಂ' ಎಂಬ ಪದಕ್ಕೆ ಒಂದು ಹಾಡು ಇರಲಿ ಅಂತ ಹೇಳಿದಾಗ ಈ ಹಾಡು ಸೃಷ್ಟಿಯಾಗಿದೆ.

  ಪಾರ್ವತಮ್ಮ ಅವರ ಬಹುದಿನಗಳ ಈ ಆಸೆ ಕೊನೆಗೂ ಈಡೇರಲೇ ಇಲ್ಲ.!ಪಾರ್ವತಮ್ಮ ಅವರ ಬಹುದಿನಗಳ ಈ ಆಸೆ ಕೊನೆಗೂ ಈಡೇರಲೇ ಇಲ್ಲ.!

  ಹಂಸಲೇಖ ಸಾಹಿತ್ಯ - ಸಂಗೀತ

  ಹಂಸಲೇಖ ಸಾಹಿತ್ಯ - ಸಂಗೀತ

  'ಓಂ' ಸಿನಿಮಾದ ಹಾಡುಗಳು ಹಂಸಲೇಖ ಅವರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಈ ಚಿತ್ರದ ಎಲ್ಲ ಹಾಡುಗಳಿಗೂ ಹಂಸಲೇಖ ಅವರೇ ಸಾಹಿತ್ಯ-ಸಂಗೀತ ಒದಗಿಸಿದ್ದರು.

  ಕ್ಲಾಪ್ ಮಾಡಿದ್ದು ಸಹ ರಾಜ್!

  ಕ್ಲಾಪ್ ಮಾಡಿದ್ದು ಸಹ ರಾಜ್!

  'ಓಂ' ಸಿನಿಮಾದ ಮುಹೂರ್ತದ ದಿನ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಸಹ ಡಾ.ರಾಜ್ ಕುಮಾರ್.

  ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ

  ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ

  'ಓಂ' ಚಿತ್ರ ಡಾ.ರಾಜ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು.

  ದಾಖಲೆಯ 'ಓಂ'

  ದಾಖಲೆಯ 'ಓಂ'

  'ಓಂ' ಸಿನಿಮಾ 550ಕ್ಕೂ ಹೆಚ್ಚು ಬಾರಿ ರೀ ರಿಲೀಸ್ ಆಗಿ ಭಾರತ ಚಿತ್ರರಂಗದಲ್ಲೇ ದೊಡ್ಡ ದಾಖಲೆ ಮಾಡಿದೆ. ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರೇಮ ಅಭಿನಯಿಸಿದ್ದರು.

  English summary
  Kannada Actor Shiva Rajkumar starrer 'Om' Audio release photo is doing rounds on Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X