ನೃತ್ಯ ಮಾಡಿ ಅಂದು ಜಯಲಲಿತಾ ಕನ್ನಡಿಗರ ಮನಗೆದ್ದಾಗ...

By Harshitha

ಕಾವೇರಿ ವಿವಾದ ಭುಗಿಲೆದ್ದಾಗ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದರು. ತಮಿಳಿರ 'ಅಮ್ಮ'ನಿಗೆ ಮಂಡ್ಯ ಜನತೆ ಹಿಡಿಶಾಪ ಹಾಕಿದ್ದರು. ಮಂಡ್ಯ ಜಿಲ್ಲೆಯಲ್ಲಿಯೇ ಹುಟ್ಟಿ ಬೆಳೆದು, ಅದೇ ಮಂಡ್ಯದ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದ್ದ ಜಯಲಲಿತಾ ಬಗ್ಗೆ ಸಹಜವಾಗಿಯೇ ಬೇಸರ ವ್ಯಕ್ತವಾಗಿತ್ತು. ['ಅಮ್ಮ' ಜಯಲಲಿತಾ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗ]

ಆದ್ರೆ, ದಶಕಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋಗುವುದಾದರೆ.. ಅದೇ ಮಂಡ್ಯದ ಮಕ್ಕಳ ಶಿಕ್ಷಣಕ್ಕಾಗಿ 'ಸಿನಿಮಾತಾರೆ' ಜಯಲಲಿತಾ ಉದಾರ ಮನೋಭಾವ ತೋರಿದ್ದರು ಎನ್ನುವುದು ಅನೇಕರಿಗೆ ಗೊತ್ತಿಲ್ಲದ ವಿಚಾರ.

ಮೊದಲು ಈ ಫೋಟೋ ನೋಡಿ...

ಮೊದಲು ಈ ಫೋಟೋ ನೋಡಿ...

ಮಾರ್ಚ್ 19, 1967 ರಂದು 'ಸಿನಿಮಾತಾರೆ' ಜಯಲಲಿತಾ ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ನೃತ್ಯ ಪ್ರದರ್ಶನ ನೀಡಿದ್ದರು. ಅಂದು ಜಯಲಲಿತಾ ರವರ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಜನರನ್ನು ಸೆಳೆಯಲು ಬಳಸಿದ್ದ ಪೋಸ್ಟರ್ ಇದು.

ನೃತ್ಯ ಪ್ರದರ್ಶನ ನೀಡಿದ್ದರ ಹಿಂದಿನ ಉದ್ದೇಶ.?

ನೃತ್ಯ ಪ್ರದರ್ಶನ ನೀಡಿದ್ದರ ಹಿಂದಿನ ಉದ್ದೇಶ.?

ಮಂಡ್ಯ ಜಿಲ್ಲೆಯ ನಗುವಿನಹಳ್ಳಿ ತಾಲೂಕಿನ ಬೋರ್ಡ್ ಹೈಸ್ಕೂಲಿನ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ 'ಸಿನಿಮಾ ತಾರೆ' ಜಯಲಲಿತಾ ನೃತ್ಯ ಪ್ರದರ್ಶನ ನೀಡಿದ್ದರು. [ಬಾಲಿವುಡ್ ನಟ ಧರ್ಮೇಂದ್ರ ಕಂಡಂತೆ 'ಜಯಲಲಿತಾ'!]

ಶಾಲೆ ಕಟ್ಟಡ ನಿರ್ಮಿಸಲು ಜಯಲಲಿತಾ ನೆರವು

ಶಾಲೆ ಕಟ್ಟಡ ನಿರ್ಮಿಸಲು ಜಯಲಲಿತಾ ನೆರವು

ಬೋರ್ಡ್ ಹೈಸ್ಕೂಲಿನ ಕಟ್ಟಡ ನಿರ್ಮಾಣ ನೆರವಿಗಾಗಿ 1967 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲಿನಲ್ಲಿ ನಟಿ ಜಯಲಲಿತಾ ಹೆಜ್ಜೆ ಹಾಕಿದ್ದರು. ['ಅಮ್ಮ'ನ ಅಗಲಿಕೆಗೆ ಕಂಬನಿ ಮಿಡಿದ ಸಿನಿ ತಾರೆಯರು]

ಆರ್ಥಿಕ ಮುಗ್ಗಟ್ಟು ಇದ್ದ ಕಾರಣ...

ಆರ್ಥಿಕ ಮುಗ್ಗಟ್ಟು ಇದ್ದ ಕಾರಣ...

ನಗುವಿನಹಳ್ಳಿಯಲ್ಲಿ ಶಾಲೆಯೊಂದನ್ನು ನಿರ್ಮಿಸಲು ಗ್ರಾಮದ ಮುಖಂಡರು ಮುಂದಾದಾಗ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಆಗ ಅದೇ ಜಿಲ್ಲೆಯವರಾದ, ನಟಿ ಜಯಲಲಿತಾ ಅವರಿಂದ ನೃತ್ಯ ಪ್ರದರ್ಶನ ಮಾಡಿಸಿ, ಹಣ ಸಂಗ್ರಹಿಸಲು ಗ್ರಾಮದ ಮುಖಂಡರು ನಿರ್ಧರಿಸಿದರು. ಇದಕ್ಕೆ ಜಯಲಲಿತಾ ಕೂಡ ಮನಃಪೂರ್ವಕವಾಗಿ ಒಪ್ಪಿಕೊಂಡರು. [ಜನರ ಪ್ರಾರ್ಥನೆ ಫಲಿಸಲಿಲ್ಲ, 'ಅಮ್ಮ' ಜಯಲಲಿತಾ ಇನ್ನಿಲ್ಲ]

ಅಂದು ಸಂಗ್ರಹವಾಗಿದ್ದ ಮೊತ್ತ ಎಷ್ಟು?

ಅಂದು ಸಂಗ್ರಹವಾಗಿದ್ದ ಮೊತ್ತ ಎಷ್ಟು?

ಜಯಲಲಿತಾ ರವರ ನೃತ್ಯ ಪ್ರದರ್ಶನಕ್ಕೆ ರೂ.50, 25, 10 ಪ್ರವೇಶ ಧನ ನಿಗದಿ ಪಡಿಸಲಾಗಿತ್ತು. ಜಯಲಲಿತಾ ರವರ ನೃತ್ಯ ನೋಡಲು ಜನಸಾಗರವೇ ಹರಿದು ಬಂದ ಪರಿಣಾಮ, ಅವತ್ತು 48 ಸಾವಿರ ರೂಪಾಯಿ ಸಂಗ್ರಹವಾಗಿತ್ತು.

ಸಂಭಾವನೆ ಪಡೆಯದ ಜಯಲಲಿತಾ

ಸಂಭಾವನೆ ಪಡೆಯದ ಜಯಲಲಿತಾ

ನೃತ್ಯ ಪ್ರದರ್ಶನ ನೀಡಿದಕ್ಕೆ ಅಂದು ನಟಿ ಜಯಲಲಿತಾ ಒಂದು ರೂಪಾಯಿಯನ್ನೂ ಸಂಭಾವನೆ ರೂಪದಲ್ಲಿ ಪಡೆಯಲಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಕಟ್ಟಲು ಸಂಪೂರ್ಣ ಹಣವನ್ನು ಬಳಸಿಕೊಳ್ಳುವಂತೆ ಹೇಳಿ ಉದಾರತೆ ಮೆರೆದಿದ್ದರಂತೆ.

ಜಯಲಲಿತಾ ಇನ್ನು ನೆನಪು ಮಾತ್ರ

ಜಯಲಲಿತಾ ಇನ್ನು ನೆನಪು ಮಾತ್ರ

ಮಂಡ್ಯದ ಅಯ್ಯಂಗಾರ್ ಕುಟುಂಬದಲ್ಲಿ ಹುಟ್ಟಿ ಬೆಳೆದು, ಸಿನಿಮಾ ನಟಿಯಾಗಿ, ರಾಜಕಾರಣಿಯಾಗಿ, ತಮಿಳುನಾಡಿನ ಮುಖ್ಯಮಂತ್ರಿಯಾದ 'ಅಮ್ಮ' ಜಯಲಲಿತಾ ಇನ್ನು ನೆನಪು ಮಾತ್ರ.

More from Filmibeat

English summary
For the cause of Constructing School Building at Naguvinahalli (Mandya District) Actress Jayalalitha had given Dance Perfomance at Mysuru on March 19th, 1967 without taking single penny as Remuneration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X