»   » ಅಣ್ಣಾವ್ರ ಮಗ ಶಿವಣ್ಣನ ಸರಳತೆಗೆ ಈ ಫೋಟೋ ಸಾಕ್ಷಿ.!

ಅಣ್ಣಾವ್ರ ಮಗ ಶಿವಣ್ಣನ ಸರಳತೆಗೆ ಈ ಫೋಟೋ ಸಾಕ್ಷಿ.!

Posted By:
Subscribe to Filmibeat Kannada

ಡಾ.ಶಿವರಾಜ್ ಕುಮಾರ್... ವರನಟ ಡಾ.ರಾಜ್ ಕುಮಾರ್ ಪುತ್ರ. ದೊಡ್ಮನೆಯ ದೊಡ್ಡ ಮಗ. ಮೂರು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಕೊಟ್ಟು ಹ್ಯಾಟ್ರಿಕ್ ಬಾರಿಸಿದ 'ಮನ ಮೆಚ್ಚಿದ ಮಗ'. ವರ್ಷ ಪೂರ್ತಿ ಸಿನಿಮಾಗಳಲ್ಲಿ ಬಿಜಿಯಾಗಿರುವ ಶಿವಣ್ಣನ ಸಂಭಾವನೆ ಕೋಟಿಗೂ ಹೆಚ್ಚು.

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ನಟರ ಪೈಕಿ ಶಿವಣ್ಣ ಕೂಡ ಒಬ್ಬರು. ವಯಸ್ಸು ಐವತ್ತು ದಾಟಿದ್ದರೂ, ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಶಿವಣ್ಣರವರದ್ದು ಅಷ್ಟೇ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವ.

In pic: Kannada Actor Shiva Rajkumar's simplicity

ಕೊಂಚ ಕೂಡ ಅಹಂ, ಗರ್ವ ಇಲ್ಲದ ತೂಕದ ವ್ಯಕ್ತಿತ್ವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರದ್ದು. ಅದಕ್ಕೆ ಸಾಕ್ಷಿ ಈ ಫೋಟೋ...

ಅಭಿಮಾನಿಗಳ ಜೊತೆಗೆ ಹಮ್ಮು-ಬಿಮ್ಮು ಇಲ್ಲದೆ ಬೆರೆಯುವ ಶಿವರಾಜ್ ಕುಮಾರ್, ದಾವಣಗೆರೆ ಬೆಣ್ಣೆ ದೋಸೆಯ ಹೋಟೆಲ್ ಒಂದರಲ್ಲಿ ದೋಸೆ ಮಾಡಿದ್ದಾರೆ.

ಅಷ್ಟಕ್ಕೂ, ಹೀಗೆ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು ಯಾವಾಗ, ಎಲ್ಲಿ ಎಂಬ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಕಾವಲಿ ಮೇಲಿಂದ ಶಿವಣ್ಣ ದೋಸೆ ತೆಗೆಯುತ್ತಿರುವ ಫೋಟೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ದೋಸೆಯಂತೆ ಸೇಲ್ ಆಗುತ್ತಿದೆ.

ಫೋಟೋ ನೋಡಿ ಶಿವಣ್ಣನ ಸರಳತೆಯನ್ನ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಇದು 'ಜಗ ಮೆಚ್ಚಿನ ದೋಸೆ' ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.

ಅಂದ್ಹಾಗೆ, ಶಿವಣ್ಣ ರವರ ಈ ಅಪರೂಪದ ಫೋಟೋ ನೋಡಿ ನೀವೇನಂತೀರಾ.?

English summary
Check out the simplicity of Kannada Actor Shiva Rajkumar in this picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada