ಬೇಬಿ ಮೂನ್ ಗೆಂದು ಮಾಲ್ದೀವ್ಸ್ ಗೆ ಹಾರಿದ ರಾಧಿಕಾ-ಯಶ್
Recommended Video

ಸ್ಯಾಂಡಲ್ ವುಡ್ ನ ನವ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಬಾಳಲ್ಲಿ ಸದ್ಯ ಸಂತಸ ಮನೆ ಮಾಡಿದೆ. 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಆರು ತಿಂಗಳ ಗರ್ಭಿಣಿ ಆಗಿರುವ ರಾಧಿಕಾ ಪಂಡಿತ್ ಸದ್ಯ ಪತಿ ಯಶ್ ಜೊತೆಗೆ ಮಾಲ್ದೀವ್ಸ್ ಗೆ ಹಾರಿದ್ದಾರೆ. 'ಬೇಬಿ ಮೂನ್'ಗಾಗಿ ದಂಪತಿಗಳು ಮಾಲ್ದೀವ್ಸ್ ಗೆ ಫ್ಲೈಟ್ ಹತ್ತಿದ್ದಾರೆ.
ಸುಂದರ ಪರಿಸರ, ಪ್ರಶಾಂತ ವಾತಾವರಣ ಹಾಗೂ ಕಣ್ಣು ಕೋರೈಸುವ ನಿಸರ್ಗ ತಾಣದಲ್ಲಿ ಗರ್ಭಿಣಿಯರು ಇದ್ದರೆ ಮಗುವಿನ ಬೆಳವಣಿಗೆ ಕೂಡ ಉತ್ತಮವಾಗಿರುತ್ತೆ. ಹೀಗಾಗಿ, 'ಬೇಬಿ ಮೂನ್' ನೆಪದಲ್ಲಿ ಯಶ್-ರಾಧಿಕಾ ಪಂಡಿತ್ 'ಪ್ರವಾಸಿಗರ ಸ್ವರ್ಗ' ಮಾಲ್ದೀವ್ಸ್ ಗೆ ಭೇಟಿ ಕೊಟ್ಟಿದ್ದಾರೆ.

ಮದುವೆ ಆದ್ಮೇಲೆ, ಹನಿಮೂನ್ ಗೆಂದು ಯಶ್ ಹಾಗೂ ರಾಧಿಕಾ ಪಂಡಿತ್ ಹವಾಯಿ ದ್ವೀಪಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಮಾಲ್ದೀವ್ಸ್ ನಲ್ಲಿ ಸುಂದರ ಕ್ಷಣಗಳನ್ನು ಈ ದಂಪತಿ ಕಳೆಯುತ್ತಿದ್ದಾರೆ.
ಈ ವರ್ಷದ ಡಿಸೆಂಬರ್ ಹೊತ್ತಿಗೆ ರಾಧಿಕಾ ಪಂಡಿತ್ ಮಡಿಲಲ್ಲಿ ಮುದ್ದಾದ ಕೂಸೊಂದು ನಲಿದಾಡಲಿದೆ. ಮಗುವನ್ನ ಬರಮಾಡಿಕೊಳ್ಳಲು ಯಶ್ ದಂಪತಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











