»   » ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ..

ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ..

Posted By:
Subscribe to Filmibeat Kannada

ಗೋವಾ ಅಂದ್ರೇನೇ ಬಾಯ್ಬಾಯಿ ಬಿಡುವ ಪಡ್ಡೆ ಹುಡುಗರಿಗೆ... ಅದೇ ಗೋವಾದಲ್ಲಿ ನಟಿ ರಾಗಿಣಿ ಟೂ ಪೀಸ್ ಧರಿಸಿ ಪೋಸ್ ಕೊಟ್ಟಿದ್ದಾರೆ ಅಂದ್ರೆ ಹೇಗಾಗಬೇಡ.? ತುಂಡ್ಹೈಕ್ಳ ಎದೆಯಲ್ಲಿ ಕರೆಂಟ್ ಪಾಸ್ ಆಗಿ ಕಣ್ಣಲ್ಲಿ ಎಲ್.ಇ.ಡಿ ಬಲ್ಬ್ ಆನ್ ಆದ್ಹಂಗೆ ತಾನೆ ಲೆಕ್ಕ.!

'ತುಪ್ಪ ಬೇಕಾ ತುಪ್ಪ..' ಅಂತ ಗಾಂಧಿನಗರದಲ್ಲಿ ಒಂದ್ಕಾಲದಲ್ಲಿ ತುಪ್ಪ ಮಾರಿದ ರಾಗಿಣಿ ದ್ವಿವೇದಿ ಈಗ ಏಕ್ದಂ ತೆಳ್ಳಗಾಗಿದ್ದಾರೆ. ಬಳ್ಳಿಯಂತೆ ಬಳುಕುವ ಸಪೂರ ಕಟಿ ರಾಗಿಣಿ ದ್ವಿವೇದಿ ಇತ್ತೀಚೆಗಷ್ಟೇ ಗೋವಾಗೆ ತೆರಳಿದ್ದರು. ಅಲ್ಲಿ, ಬಿಕಿನಿ ತೊಟ್ಟಿದ್ದ ರಾಗಿಣಿ ಕ್ಯಾಮರಾ ಕಣ್ಣುಗಳಿಗೆ ಸೆರೆ ಆಗಿರುವುದು ಹೀಗೆ...

ಗೋವಾ ಬೀಚ್ ನಲ್ಲಿ ನಟಿ ರಾಗಿಣಿ

ತುಂಡುಡುಗೆ ತೊಟ್ಟು ಕಡಲ ಕಿನಾರೆಯಲ್ಲಿ ಸ್ನೇಹಿತೆ ಪ್ರಜ್ಞಾ ಜೊತೆ ನಟಿ ರಾಗಿಣಿ ದ್ವಿವೇದಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಇದು.!['ಸಪೂರ ಕಟಿ'ಯನು ಕಣ್ತೆರೆದು ನೋಡಿರಿ ಮಿಣಿ ಮಿಣಿ]

ಫೋಟೋಶೂಟ್ ಗೆ ಗೋವಾಗೆ ಹಾರಿರುವ ಬೆಡಗಿ

ಅಷ್ಟಕ್ಕೂ, ನಟಿ ರಾಗಿಣಿ ಗೋವಾಗೆ ಹಾರಿರುವುದು ಸ್ನೇಹಿತೆ ಪ್ರಜ್ಞಾ ರವರ ಕಂಪನಿಯ ಆಡ್ ಫೋಟೋ ಶೂಟ್ ಗಾಗಿ. ಜಾಹೀರಾತಿನ ಚಿತ್ರೀಕರಣ ಮುಗಿದರೂ, ಗೋವಾದಿಂದ ತೆರಳಲು ನಟಿ ರಾಗಿಣಿಗೆ ಮನಸ್ಸು ಬರ್ತಿಲ್ವಂತೆ.[ತೆಳ್ಳಗೆ ಆಗಲು ನಟಿ ರಾಗಿಣಿ ದ್ವಿವೇದಿ ಮಾಡಿದ್ದು ಹೀಗೆ...]

ಕಾರಣ ಏನು.?

ಬೇಸಿಗೆ ಕಾಲಕ್ಕೆ ಗೋವಾ ಹೇಳಿಮಾಡಿಸಿದ ಜಾಗ. ಹೀಗಾಗಿ, ಶೂಟಿಂಗ್ ಮುಗಿದ ಬಳಿಕ ಇಲ್ಲಿಯೇ ಉಳಿದುಕೊಂಡಿದ್ದೇವೆ. ಬೀಚ್ ಕೂಲ್ ಆಗಿದೆ. ನಾವಂತೂ ತುಂಬಾ ಎಂಜಾಯ್ ಮಾಡುತ್ತಿದ್ದೇವೆ ಎನ್ನುತ್ತಾರೆ ನಟಿ ರಾಗಿಣಿ

ರಾಗಿಣಿ ಫುಲ್ ಬಿಜಿ

'ಕಿಚ್ಚು' ಎಂಬ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ನಟಿ ರಾಗಿಣಿ ದ್ವಿವೇದಿ, 'ಗಾಂಧಿಗಿರಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ.

English summary
Check out Kannada Actress Ragini Dwivedi's Glam avatar in Goa.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada