For Quick Alerts
  ALLOW NOTIFICATIONS  
  For Daily Alerts

  ಅಪ್ಪು ಜೊತೆ ಅಕ್ಷಯ್ ಕುಮಾರ್.! ಖಾಸ್ ಖಬರ್ ಇದೆ, ಕಾಯ್ತಿರಿ.!

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಬಾಲಿವುಡ್ ನ 'ಖತರೋಂಕೆ ಖಿಲಾಡಿ' ಅಕ್ಷಯ್ ಕುಮಾರ್ ಚೆನ್ನೈನಲ್ಲಿ ಭೇಟಿ ಆಗಿ, ಸ್ವಲ್ಪ ಹೊತ್ತು ಟೈಮ್ ಪಾಸ್ ಮಾಡಿದ್ರು ಎಂಬ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಓದಿದ್ರಿ...

  ಅಸಲಿಗೆ, ಪುನೀತ್ ರಾಜ್ ಕುಮಾರ್ Premier Futsal League ನ ಬೆಂಗಳೂರು ಫ್ರ್ಯಾಂಚೈಸಿ ಪಡೆದುಕೊಂಡಿದ್ದರಿಂದ ಚೆನ್ನೈಗೆ ಹಾರಿದ್ದರು. ಇನ್ನೂ '2.0' ಚಿತ್ರದ ಶೂಟಿಂಗ್ ನಿಮಿತ್ತ ಅಕ್ಕಿ ಅಲ್ಲೇ ಇದ್ದರು. [ಚೆನ್ನೈನಲ್ಲಿ ಬಾಲಿವುಡ್-ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಮಿಲನ.!]

  ಅಕಸ್ಮಾತ್ತಾಗಿ ಸ್ಟಾರ್ಸ್ ಭೇಟಿ ಆಗಿದ್ದಾರೆ ಅಂತ ಎಲ್ಲರೂ ಅಂದುಕೊಂಡಿರುವಾಗಲೇ, ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಅಕ್ಷಯ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಮೀಟ್ ಆಗಿದ್ದಾರೆ. ಇದರ ಹಿಂದೆ ಬೇರೆ ಕಾರಣ ಇದೆ ಎಂಬುದು ಲೇಟೆಸ್ಟ್ ಗಲ್ಲಿ ಗಾಸಿಪ್. ಮುಂದೆ ಓದಿ.....

  ಬೆಂಗಳೂರಿನಲ್ಲಿ ಸ್ಟಾರ್ ಗಳ 'ಅಪೂರ್ವ ಸಂಗಮ'

  ಬೆಂಗಳೂರಿನಲ್ಲಿ ಸ್ಟಾರ್ ಗಳ 'ಅಪೂರ್ವ ಸಂಗಮ'

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ಫ್ಯಾಶನ್ ಡಿಸೈನರ್ ರಮೇಶ್ ದೆಂಬ್ಲಾ ನಿನ್ನೆ (ಮಂಗಳವಾರ, ಆಗಸ್ಟ್ 2) ಭೇಟಿ ಆಗಿದ್ದಾಗ ಕ್ಲಿಕ್ ಆಗಿರುವ ಫೋಟೋ ಇದು.

  ಇನ್ನೊಂದು ಸರ್ ಪ್ರೈಸ್ ಇಲ್ಲಿದೆ ನೋಡಿ...

  ಇನ್ನೊಂದು ಸರ್ ಪ್ರೈಸ್ ಇಲ್ಲಿದೆ ನೋಡಿ...

  ಅಪ್ಪು, ಅಕ್ಕಿ ಜೊತೆ ಕನ್ನಡ ನಿರ್ದೇಶಕ ನಂದ ಕಿಶೋರ್ ಕೂಡ ಇದ್ದಾರೆ. ಅಸಲಿ ಮ್ಯಾಟರ್ ಇರೋದೇ ಇಲ್ಲಿ.! ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಪುನೀತ್ ಗೆ ಚಿತ್ರ ಮಾಡುತ್ತಿದ್ದಾರಾ ನಂದ ಕಿಶೋರ್.?

  ಪುನೀತ್ ಗೆ ಚಿತ್ರ ಮಾಡುತ್ತಿದ್ದಾರಾ ನಂದ ಕಿಶೋರ್.?

  'ವಿಕ್ಟರಿ', 'ಅಧ್ಯಕ್ಷ' ಹಾಗೂ 'ರನ್ನ' ದಂತಹ ಹಿಟ್ ಚಿತ್ರಗಳಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ನಂದ ಕಿಶೋರ್ ಇದೀಗ ಪುನೀತ್ ರಾಜ್ ಕುಮಾರ್ ಗಾಗಿ ಒಂದು ಕಥೆ ರೆಡಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. [ಪುನೀತ್-ನಂದ ಕಿಶೋರ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ!]

  ಸ್ಟೋರಿ ಡಿಸ್ಕಷನ್ ಗಾಗಿ ಮೀಟ್ ಮಾಡಿದ್ದು.!

  ಸ್ಟೋರಿ ಡಿಸ್ಕಷನ್ ಗಾಗಿ ಮೀಟ್ ಮಾಡಿದ್ದು.!

  ಸ್ಟೋರಿ ಡಿಸ್ಕಷನ್ ಸಲುವಾಗಿ ನಂದ ಕಿಶೋರ್ ಹಾಗೂ ಪುನೀತ್ ರಾಜ್ ಕುಮಾರ್ ನಿನ್ನೆ ಭೇಟಿ ಆಗಿದ್ದು.

  ಅಪ್ಪು ಓಕೆ ಅಕ್ಕಿ ಯಾಕೆ.?

  ಅಪ್ಪು ಓಕೆ ಅಕ್ಕಿ ಯಾಕೆ.?

  ಅಷ್ಟಕ್ಕೂ, ಅಕ್ಷಯ್ ಕುಮಾರ್ ಬೆಂಗಳೂರಿಗೆ ಬಂದಿದ್ದು ಅರವಿಂದ್ ಮಿಲ್ ರವರ ಬ್ರ್ಯಾಂಡ್ ಲಾಂಚ್ ಕಾರ್ಯಕ್ರಮಕ್ಕೆ. ಅದೇ ಗ್ಯಾಪ್ ನಲ್ಲಿ ಪುನೀತ್ ರನ್ನ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅಕ್ಷಯ್ ಕುಮಾರ್ ಭೇಟಿ ಮಾಡಿದ್ದಾರೆ.

  ಅಪ್ಪು ಚಿತ್ರದಲ್ಲಿ ಅಕ್ಷಯ್ ಕುಮಾರ್.?

  ಅಪ್ಪು ಚಿತ್ರದಲ್ಲಿ ಅಕ್ಷಯ್ ಕುಮಾರ್.?

  ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾವೊಂದನ್ನು ಮಾಡಲು ನಂದ ಕಿಶೋರ್ ಮನಸ್ಸು ಮಾಡಿದ್ದು, ಅದೇ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಅಕ್ಷಯ್ ಕುಮಾರ್ ರನ್ನ ಒಂದು ಮಾಡುವ ಪ್ರಯತ್ನ ನಡೆಯುತ್ತಿದೆ ಅಂತ ಗುಲ್ಲೆದ್ದಿದೆ.

  ನಂದ ಕಿಶೋರ್ ಏನಂತಾರೆ.?

  ನಂದ ಕಿಶೋರ್ ಏನಂತಾರೆ.?

  ''ಅದು ಕ್ಯಾಶುವಲ್ ಮೀಟಿಂಗ್ ಅಷ್ಟೇ. ಅರವಿಂದ್ ಮಿಲ್ ಬ್ರ್ಯಾಂಡ್ ಲಾಂಚ್ ಗೆ ಅಕ್ಷಯ್ ಕುಮಾರ್, ರಮೇಶ್ ದೆಂಬ್ಲಾ ಬಂದಿದ್ದರು. ಸ್ಟೋರಿ ಡಿಸ್ಕಷನ್ ಗಳಿಗೆ ಸಿಗುತ್ತಲೇ ಇರುತ್ತೇವೆ. ಹಾಗೇ ಸಿಕ್ಕಿದರು. Something exciting, I'll let you know very soon'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಂದ ಕಿಶೋರ್ ತಿಳಿಸಿದರು.

  ಅಲ್ಲಿಗೆ ಖಾಸ್ ಖಬರ್ ಇದೆ ಅಂತರ್ಥ.!

  ಅಲ್ಲಿಗೆ ಖಾಸ್ ಖಬರ್ ಇದೆ ಅಂತರ್ಥ.!

  'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುವಾಗ ''Something exciting, I'll let you know very soon'' ಅಂತ ನಂದ ಕಿಶೋರ್ ಹೇಳಿದರು. ಅಲ್ಲಿಗೆ, ಅವರ ಅಡ್ಡದಿಂದ ಖಾಸ್ ಖಬರ್ ಬರುವುದು ಖಚಿತ.

  ಅಕ್ಷಯ್ ಕುಮಾರ್ ಗೆ ಸ್ಯಾಂಡಲ್ ವುಡ್ ಹೊಸದೇನಲ್ಲ.!

  ಅಕ್ಷಯ್ ಕುಮಾರ್ ಗೆ ಸ್ಯಾಂಡಲ್ ವುಡ್ ಹೊಸದೇನಲ್ಲ.!

  'ವಿಷ್ಣು ವಿಜಯ' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಜೊತೆ ಅಕ್ಷಯ್ ಕುಮಾರ್ ನಟಿಸಿದ್ದರು. ಹೀಗಾಗಿ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗ ಮರಳಿ ಸ್ಯಾಂಡಲ್ ವುಡ್ ಕಡೆ ಮುಖ ಮಾಡುತ್ತಾರಾ ಅಂತ ಕಾದು ನೋಡಬೇಕಷ್ಟೆ.

  English summary
  Kannada Actor Puneeth Rajkumar, Director Nanda Kishore, Bollywood Actor Akshay Kumar, Designer Ramesh Dembla met in Bengaluru on August 2nd. Check out the pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X